ಬಿಗ್ ಬಾಸ್ 15: ಕಿರುತೆರೆಯ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಲ್ಮಾನ್ ಖಾನ್

Written by Soma Shekar

Published on:

---Join Our Channel---

ದೇಶದ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಹಿಂದಿಯ ಬಿಗ್ ಬಾಸ್ ಶೋ ಪಡೆದುಕೊಂಡಿದೆ. ಇನ್ನೇನು ಬಿಗ್ ಬಾಸ್ ನ ಭರ್ಜರಿ 15ನೇ ಸೀಸನ್ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅದ್ದೂರಿಯಾದ ಪ್ರೋಮೋಗಳು ವಾಹಿನಿಯಲ್ಲಿ ಪ್ರಸಾರವಾಗುವ ಮೂಲಕ ಬಿಗ್ ಬಾಸ್ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ. ಇನ್ನು ಕಳೆದ 11 ಸೀಸನ್ ಗಳಿಂದಲೂ ಬಾಲಿವುಡ್ ಸ್ಟಾರ್ ನಟ ಎನಿಸಿಕೊಂಡಿರುವ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಅವರ ನಿರೂಪಣಾ ಸಾರಥ್ಯದಲ್ಲಿ ಬಿಗ್ ಬಾಸ್ ಯಶಸ್ಸನ್ನು ಪಡೆದಿರುವ ವಿಷಯ ಕೂಡಾ ವಾಸ್ತವ.

ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ನಿರೂಪಣೆ ಮಾಡುವ ಜವಾಬ್ದಾರಿಯನ್ನು ಸೀಸನ್ ನಾಲ್ಕರಿಂದ ವಹಿಸಿಕೊಂಡರು, ಅದಕ್ಕೂ ಮೊದಲು ಮೂರು ಸೀಸನ್ ಗಳಲ್ಲಿ, ಅರ್ಷದ್ ವಾರ್ಸಿ, ಅಮಿತಾ ಬಚ್ಚನ್ ಹಾಗೂ ನಟಿ ಶಿಲ್ಪಾ ಶೆಟ್ಟಿ ಶೋ ನಿರೂಪಣೆ ಮಾಡಿದ್ದರು. ಆದರೆ ಸಲ್ಮಾನ್ ಖಾನ್ ಎಂಟ್ರಿ ನಂತರ ಬಿಗ್ ಬಾಸ್ ಇನ್ನೊಂದು ಹಂತಕ್ಕೆ ತಲುಪಿತು. ಬಿಗ್ ಬಾಸ್ ನ ಯಶಸ್ಸಿನಲ್ಲಿ ಸಲ್ಮಾನ್ ಖಾನ್ ಪಾತ್ರ ಕೂಡಾ ಇದೆ ಎನ್ನವುದು ಬಹಳಷ್ಟು ಜನರ ಅಭಿಪ್ರಾಯ.

ಇನ್ನೇನು 15ನೇ ಸೀಜನ್ ಹತ್ತಿರದಲ್ಲಿದೆ ಎನ್ನುವಾಗಲೇ ಸಲ್ಮಾನ್ ಖಾನ್ ಈ ಬಾರಿ ತಮ್ಮ ನಿರೂಪಣೆಗೆ ಪಡೆದುಕೊಳ್ಳಲಿರುವ ಭಾರಿ ಮೊತ್ತದ ಸಂಭಾವನೆಯ ವಿಷಯ ಇದೀಗ ದೊಡ್ಡ ಸುದ್ದಿಯಾಗಿದೆ. ಸಲ್ಮಾನ್ ಖಾನ್ ಅವರು ಸೀಸನ್ ನಾಲ್ಕರಲ್ಲಿ, ವಾರವೊಂದಕ್ಕೆ ಎರಡೂವರೆ ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದರು. ಸೀಸನ್ 13ಕ್ಕೆ ಬಂದಾಗಲೂ ಅವರು ವಾರಕ್ಕೆ 13 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಲು ಸಜ್ಜಾಗಿದ್ದಾರೆ.

ಹೌದು ಕಿರುತೆರೆಯಲ್ಲಿ ಸಲ್ಮಾನ್ ಖಾನ್ ಅತಿ ಹೆಚ್ಚು ಸಂಭಾವನೆ ಪಡೆಯಲಿರುವ ನಿರೂಪಕ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಳ್ಳಲು ಹೊರಟಿದ್ದಾರೆ. ಹೌದು ಬಿಗ್ ಬಾಸ್ ನ 15ನೇ ಸೀಸನ್ನು ನಿರೂಪಣೆ ಮಾಡಲು ಸಲ್ಮಾನ್ ಖಾನ್ ಅವರು ವಾರವೊಂದಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಒಟ್ಟು 14 ವಾರಗಳ ನಿರೂಪಣೆಗೆ ಅವರ ಸಂಭಾವನೆ 350 ಕೋಟಿ ರೂಪಾಯಿಗಳಾಗಿವೆ.

ಇಷ್ಟೊಂದು ಭಾರಿ ಮೊತ್ತದ ಸಂಭಾವನೆಯನ್ನು ನೀಡಲಾಗುತ್ತದೆ ಎಂದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರೇಕ್ಷಕರಲ್ಲಿ ಎಂತಹ ಕ್ರೇಜ್ ಇದೆ ಎನ್ನುವುದು ಅರ್ಥವಾಗುತ್ತದೆ. ವಿಶೇಷವೇನೆಂದರೆ ಬಿಗ್ ಬಾಸ್ ಪ್ರಸಾರ ಆರಂಭಿಸಿದ ನಂತರ ಪ್ರತಿ ಸೀಸನ್ ಮುಗಿಯುವವರೆಗೂ ಟಿ ಆರ್ ಪಿ ಯಲ್ಲಿ ನಂಬರ್ ಒನ್ ಸ್ಥಾನ ತನ್ನದಾಗಿಸಿಕೊಳ್ಳುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಸ್ಪರ್ಧಿ ಗಳ‌ ಹೆಸರಿನ ಪೇಜ್ ಗಳು ಆರಂಭವಾಗುತ್ತದೆ.

Leave a Comment