ಬಿಗ್ ಬಾಸ್ 15 ಪ್ರೀಮಿಯರ್: ಸಲ್ಮಾನ್ ಗೆ ಸಾಥ್ ನೀಡಲು ಬರ್ತಿದ್ದಾರೆ ಮತ್ತೋರ್ವ ಬಾಲಿವುಡ್ ಸ್ಟಾರ್

0 0

ಹಿಂದಿ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಕಿರುತೆರೆಗೆ ಬಂದಿದೆ. ಹೌದು ಬಿಗ್ ಬಾಸ್ ನ 15 ನೇ ಸೀಸನ್ ನ ಪ್ರೀಮಿಯರ್ ಇಂದು ನಡೆಯಲಿದೆ. ನಾಲ್ಕನೇ ಸೀಸನ್ ನಿಂದ ಬಿಗ್ ಬಾಸ್ ನ ನಿರೂಪಕನಾಗಿ ಯಶಸ್ವಿ ಹನ್ನೊಂದು ಸೀಸನ್ ಗಳಿಗೆ ತಾನೇ ನಿರೂಪಕನಾಗಿದ್ದ ಸಲ್ಮಾನ್ ಖಾನ್ ಅವರು ಇದೀಗ 15 ನೇ ಸೀಸನ್ ನಲ್ಲೂ ಮತ್ತೊಮ್ಮೆ ನಿರೂಪಕನಾಗಿ ಬಿಗ್ ಬಾಸ್ ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನು ಈ ಬಾರಿ ಸಲ್ಮಾನ್ ಖಾನ್ ಬಿಗ್ ಬಾಸ್ ನಿರೂಪಣೆಗೆ 350 ಕೋಟಿ ಸಂಭಾವನೆ ಪಡೆಯುವರೆಂಬ ಸುದ್ದಿ ಕೂಡಾ ಹರಿದಾಡಿದೆ.

ಇಂದು ನಡೆಯಲಿರುವ ಬಿಗ್ ಬಾಸ್ ನ ಸೀಸನ್ 15 ರ ಪ್ರೀಮಿಯರ್ ನಲ್ಲಿ ನಟ ಸಲ್ಮಾನ್ ಖಾನ್ ಅವರೊಂದಿಗೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ಜೊತೆಯಾಗಲಿದ್ದಾರೆ. ಹೌದು ಸೀಸನ್ 15 ರ ಪ್ರೀಮಿಯರ್ ಗೆ ಮತ್ತಷ್ಟು ಜೋಷ್, ಮತ್ತಷ್ಟು ಹುರುಪು ಹಾಗೂ ಡಾನ್ಸ್, ಮೋಜು, ಮಸ್ತಿಯನ್ನು ತುಂಬಲು ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಸಹಾ ಸಲ್ಮಾನ್ ಖಾನ್ ಜೊತೆ ಪ್ರೀಮಿಯರ್ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಣವೀರ್ ಸಿಂಗ್ ಇದ್ದ ಕಡೆ ಉತ್ಸಾಹ ಹಾಗೂ ಮೋಜು ಪುಟಿದೇಳುವುದು ಸಹಜ. ಇನ್ನು ರಣವೀರ್ ಬಿಗ್ ಬಾಸ್ ನ ಪ್ರೀಮಿಯರ್ ಶೋ ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಸಹಾ ಕಾರಣವೊಂದಿದೆ. ಇಷ್ಟು ದಿನ ಬೆಳ್ಳಿ ತೆರೆಯ ಮೇಲೆ ಮಿಂಚುತ್ತಿದ್ದ ರಣವೀರ್ ಇದೀಗ ಕಿರುತೆರೆಯ ಕಡೆಗೆ ಬರುತ್ತಿದ್ದು, ಅದರ ಮಾಹಿತಿಯನ್ನು ನೀಡುವುದಕ್ಕಾಗಿಯೇ ಅವರು ಬಿಗ್ ಬಾಸ್ ವೇದಿಕೆಯನ್ನು ಸಲ್ಮಾನ್ ಖಾನ್ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ.

ಹೌದು ರಣವೀರ್ ಸಿಂಗ್ ಅವರು ದಿ ಬಿಗ್ ಪಿಕ್ಚರ್ ಎನ್ನುವ ಹೊಸ ಶೋ ಒಂದನ್ನು ಹೋಸ್ಟ್ ಮಾಡಲಿದ್ದು, ಈಗಾಗಲೇ ಬಿಗ್ ಪಿಕ್ಚರ್ ಎಂದರೇನು? ಎಂದು ಜನರಿಗೆ ರಣವೀರ್ ಸಿಂಗ್ ಪ್ರಶ್ನೆ ಮಾಡುವ ಪ್ರೋಮೋ ಗಳು ಎಲ್ಲರ ಗಮನವನ್ನು ಸೆಳೆದು ಕುತೂಹಲವನ್ನು ಮೂಡಿಸಿದೆ. ಇದೇ ಕಾರ್ಯಕ್ರಮದ ಪ್ರಮೋಷನ್ ಗಾಗಿ ರಣವೀರ್ ಸಿಂಗ್ ಬಿಗ್ ಬಾಸ್ ನ ಪ್ರೀಮಿಯರ್ ಶೋ ಗೆ ಅತಿಥಿಯಾಗಿ ಬರುತ್ತಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಕೂಡಾ ಇದೆ.

ರಣವೀರ್ ಸಿಂಗ್ ಹೋಸ್ಟ್ ಮಾಡಲಿರುವ ಬಿಗ್ ಪಿಕ್ಚರ್ ಒಂದು ಹೊಸ ಕ್ವಿಜ್ ಶೋ ಆಗಿದ್ದು, ಈ ಶೋ ಗೆ ನಟ ಸಲ್ಮಾನ್ ಖಾನ್ ಅವರು ಸಹ ನಿರ್ಮಾಪಕ ಕೂಡಾ ಆಗಿದ್ದಾರೆ. ಮೊದಲ ಬಾರಿಗೆ ಟಿವಿ ಶೋ ಒಂದನ್ನು ಹೋಸ್ಟ್ ಮಾಡುತ್ತಿರುವ ವಿಷಯದಲ್ಲಿ ಬಹಳ ಖುಷಿಯನ್ನು ಅವರು ವ್ಯಕ್ತಪಡಿಸಿದ್ದಾರೆ. ಜನರ ಪ್ರೀತಿ ಗಳಿಸಿರುವ ನಾನು ಅದೃಷ್ಟವಂತ, ಬಿಗ್ ಪಿಕ್ಚರ್ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದೇನೆ ಎಂದು ಹೇಳಿದ್ದಾರೆ.

Leave A Reply

Your email address will not be published.