ಬಿಗ್ ಬಾಸ್ ಹೊಸ ಸೀಸನ್ ಆರಂಭಕ್ಕೆ ಮೊದಲೇ ಎಲ್ಲಾ 15 ಸ್ಪರ್ಧಿಗಳ ಹೆಸರು ಲೀಕ್ ಆಯ್ತು

Written by Soma Shekar

Published on:

---Join Our Channel---

ಕಿರುತೆರೆಯ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಶೋ ಎಂದರೆ ಅದು ಬಿಗ್ ಬಾಸ್. ಹಿಂದಿ ಯಿಂದ ಹಿಡಿದು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ಪ್ರಾದೇಶಿಕ ಭಾಷೆಗಳಲ್ಲಿಯೂ ಅಲ್ಲದೇ ಇದೇ ಮೊದಲ ಬಾರಿಗೆ ಪ್ರಾರಂಭವಾಗಿರುವ ಓಟಿಟಿ ಬಿಗ್ ಬಾಸ್ ಸಹಾ ಬಿಗ್ ಬಾಸ್ ತನ್ನ ಯಶಸ್ಸಿನ ಪಯಣ ನಡೆಸಿದೆ. ವಿವಿಧ ಭಾಷೆಗಳ ಬಿಗ್ ಬಾಸ್ ಶೋ ತನ್ನ ಪ್ರತಿಯೊಂದು ಸೀಸನ್ ನಲ್ಲಿ ಸಹಾ ದಾಖಲು ಮಾಡುತ್ತಿದೆ. ಬಿಗ್ ಬಾಸ್ ನ ಒಂದು ಹೊಸ ಸೀಸನ್ ಬರುತ್ತಿದೆ ಎಂದ ಕೂಡಲೇ ಹೊಸದೊಂದು ಕ್ರೇಜ್ ಸೋಶಿಯಲ್ ಮೀಡಿಯಾಗಳಲ್ಲಿ ಸೃಷ್ಟಿಯಾಗಿ ಬಿಡುತ್ತದೆ. ಶೋ ಬಗ್ಗೆ, ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಸ್ಪರ್ಧಿಗಳ ಬಗ್ಗೆ ಸಂಭಾವ್ಯ ಹೆಸರುಗಳ ಪಟ್ಟಿಗಳು ಕೂಡಾ ಸುತ್ತಲೂ ಆರಂಭಿಸಿ ಬಿಡುತ್ತವೆ.

ಇನ್ನು ತೆಲುಗಿನಲ್ಲಿ ಈ ಬಾರಿ ಬಿಗ್ ಬಾಸ್ ನ ಐದನೇ ಸೀಸನ್ ಇಂದು ಸಂಜೆ ಆರಂಭವಾಗುತ್ತಿದೆ. ಈ ಬಾರಿ ತೆಲುಗಿನಲ್ಲಿ ಸಿನಿಮಾ, ಕಿರುತೆರೆ ಮಾತ್ರವೇ ಅಲ್ಲದೇ ಸೋಶಿಯಲ್ ಮೀಡಿಯಾಗಳಿಂದಲೇ ಜನಪ್ರಿಯತೆ ಪಡೆದು ಸೆಲೆಬ್ರಿಟಿಗಳಾಗಿರುವವರಿಗೂ ಸಹಾ ಬಿಗ್ ಬಾಸ್ ಮನೆಯೊಳಕ್ಕೆ ಪ್ರವೇಶವನ್ನು ನೀಡುತ್ತಿರುವುದು ವಿಶೇಷವಾಗಿದೆ. ಈ ಹೊಸ ಸೀಸನ್ ಕೂಡಾ ತೆಲುಗಿನ ಹಿರಿಯ ನಟ ನಾಗಾರ್ಜುನ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಈ ಬಾರಿ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳು ಸಹಾ ಮನೆಯನ್ನು ಪ್ರವೇಶ ಮಾಡಲಿರುವ ಹಿನ್ನಲೆಯಲ್ಲಿ ಈ ಸೀಸನ್ ನಲ್ಲಿ ಇನ್ನಷ್ಟು ಡ್ರಾಮಾ, ಇನ್ನಷ್ಟು ಮನರಂಜನೆ ಇದೆ ಎನ್ನಲಾಗಿದೆ.

ಇನ್ನು ಶೋ ಈ ಸಂಜೆ ಆರಂಭವಾಗಲಿದೆ ಎನ್ನುವಾಗಲೇ ಈ ಸಾರಿ ಬಿಗ್ ಬಾಸ್ ಮನೆಯೊಳಗೆ ಹೋಗಲಿರುವ ಸೆಲೆಬ್ರಿಟಿ ಸ್ಪರ್ಧಿಗಳ ಹೆಸರುಗಳು ರಿವೀಲ್ ಆಗಿ ದೊಡ್ಡ ಸದ್ದು ಮಾಡಿದೆ. ಹೌದು ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿರುವ ಆ ಸ್ಪರ್ಧಿಗಳು, ಕಿರುತೆರೆ ಆ್ಯಂಕರ್​ ರವಿ, ನಟ ಕಮ್ ವಿಜೆ ಸನ್ನಿ, ನಟ ಮಾನಸ್​ ನಾಗುಲಪಲ್ಲಿ, ಕಿರುತೆರೆ ನಟಿ ಉಮಾ ದೇವಿ, ತನ್ನ ವಾಯ್ಸ್ ನಿಂದಲೇ ಫೇಮ್ ಪಡೆದಿರುವ ಆರ್​ಜೆ ಕಾಜಲ್​, ಬಹುಭಾಷಾ ನಟಿ ಶೈಲಜಾ ಪ್ರಿಯಾ, ಸೋಶಿಯಲ್​ ಮೀಡಿಯದಲ್ಲಿ ಫೇಮಸ್​ ಆಗಿರುವ ಷಣ್ಮುಖ್​, ಕೊರಿಯೋಗ್ರಾಫರ್​ ಅನೀ ಮಾಸ್ಟರ್, ಗಾಯಕ ಕಮ್​ ನಟ ಶ್ರೀರಾಮ್​ ಚಂದ್ರ, ಕಿರುತೆರೆ ನಟ ವಿಶ್ವ, ನಟಿ ಸಿರಿ ಹನುಮಂತ್​, ಟಾಲಿವುಡ್​ ನಟಿ ಲಹರಿ ಶಾರಿ, ಮಾಡೆಲ್​ ಜಸ್ವಂತ್​ ಹೆಸರುಗಳು ಸುದ್ದಿಯಾಗಿವೆ.

Leave a Comment