ಬಿಗ್ ಬಾಸ್ ಹೆಸರು ಬದಲಾವಣೆ?? ಬಿಗ್ ಬಾಸ್ 15, ನೆಟ್ಟಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದೇನು??

0 0

ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಯ್ತು ಅಂದ್ರೆ ಎಲ್ಲೆಲ್ಲೂ ಅದರದ್ದೇ ಸದ್ದು ಸುದ್ದಿ. ಭಾಷೆ ಯಾವುದೇ ಆದರೂ ಬಿಗ್ ಬಾಸ್ ಮಾತ್ರ ಭರ್ಜರಿ ಸೂಪರ್ ಹಿಟ್ ಶೋ ಅನ್ನೋದ್ರಲ್ಲಿ ಅನುಮಾನಾನೇ ಇಲ್ಲ ಅನ್ನೋ ಹಾಗೆ ಪ್ರತಿ ಸೀಸನ್ ಕೂಡಾ ಟಿ ಆರ್ ಪಿ ಯಲ್ಲಿ ದಾಖಲೆ ಬರೆಯೋದು ವಿಶೇಷ. ಈ ಬಾರಿ ಹಿಂದಿ ಬಿಗ್ ಬಾಸ್ ತನ್ನ ಭರ್ಜರಿ 15 ನೇ ಸೀಸನ್ ನೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ. ಅಲ್ಲದೇ ಈಗಾಗಲೇ ಯಶಸ್ವಿ ಐದು ವಾರಗಳನ್ನು ಪೂರ್ತಿ ಮಾಡಿ ಟಿ ಆರ್ ಪಿ ವಿಚಾರದಲ್ಲೂ ಕೂಡಾ ಮೇಲೇರುತ್ತಾ ಸಾಗಿದ್ದು, ಬಿಗ್ ಬಾಸ್ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದು, ಆರನೇ ವಾರದ ಕಡೆಗೆ ಹೆಜ್ಜೆ ಹಾಕುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಅಂದರೆ ಫ್ರೆಂಡ್ ಶಿಪ್ ಗಳು, ಅಫೇರ್ ಗಳು, ಜಗಳ, ಲವ್ ಹೀಗೆ ಎಲ್ಲಾ ಜೋರಾಗಿಯೇ ನಡೆದಿದೆ. ಸೆಲೆಬ್ರಿಟಿಗಳ ನಡುವಿನ ವಾಗ್ಯುದ್ಧ ಹಾಗೂ ಡ್ರಾಮಾ ನೋಡಿ ಪ್ರೇಕ್ಷಕರು ಭರ್ಜರಿ ಎಂಟರ್ಟೈನ್ಮೆಂಟ್ ಎನ್ನುವಾಗಲೇ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿ ತೇಜಸ್ವಿ ಪ್ರಕಾಶ್ ಇಡೀ ಶೋ ನಲ್ಲಿ ಮಿಂಚುತ್ತಾ, ಎಲ್ಲರ ಗಮನ ತನ್ನ ಕಡೆಗೆ ಸೆಳೆದುಕೊಂಡಿದ್ದಾರೆ. ಯಾವಾಗ ತೇಜಸ್ವಿ ಪ್ರಕಾಶ್ ಸುತ್ತ ಶೋ ತಿರುಗಲು ಆರಂಭವಾಯ್ತೋ ನೆಟ್ಟಿಗರು ಇದನ್ನೇ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ನೆಟ್ಟಿಗರು ಬಿಗ್ ಬಾಸ್ ಪ್ರೊಮೋ ಹಾಗೂ ಟೆಲಿಕಾಸ್ಟ್ ನೋಡಿದ ಮೇಲೆ ಈ ಶೋ ನಲ್ಲಿ ಒಬ್ಬರು ಫಿಕ್ಸ್ಡ್ ವಿನ್ನರ್ ಗಳು ಇದ್ದಾರೆ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ. ಬಿಗ್ ಬಾಸ್ ಪಕ್ಷಪಾತಿಯಾಗಿದ್ದು , ಈ ನಕಲಿ ರಿಯಾಲಿಟಿ ಶೋ ನೋಡುವ ಅಗತ್ಯವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಬಿಗ್ ಬಾಸ್ ಶೋ ಅಂದ್ರೆ ಅದು ತೇಜಸ್ವಿ ಪ್ರಕಾಶ್ ಶೋ ಅನ್ನೋ ಹಾಗೆ ಆಕೆಯ ಸುತ್ತಾ ಸುತ್ತುತ್ತಾ ಇದರ ಅದಕ್ಕೆ ಇದನ್ನು ಬಿಗ್ ಬಾಸ್ ಬದಲು ತೇಜಸ್ವಿ ಪ್ರಕಾಶ್ ಶೋ ಅಂತ ಹೆಸರು ಚೇಂಜ್ ಮಾಡಿ ಅಂದಿದ್ದಾರೆ ಇನ್ನೂ ಕೆಲವರು.

ಬಹಳಷ್ಟು ಜನ ಬಿಗ್ ಬಾಸ್ ನ ನಿಜವಾದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಈಗಾಗಲೇ ಶೋ ನೋಡದ್ದನ್ನು ಬಿಟ್ಟಾಗಿದೆ. ಯಾಕಂದ್ರೆ ಇಡೀ ಶೋ ನಲ್ಲಿ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಮಧ್ಯ ನಡೆಯೋ ನೀರಸವಾದ ದೃಶ್ಯಗಳನ್ನು ಪ್ರಸಾರ ಮಾಡ್ಕೊಂಡಿದೆ ಬಿಗ್ ಬಾಸ್ ಶೋ. ಇಂತ ಶೋ ನ ನೋಡೋ ಅಗತ್ಯ ಇಲ್ಲ ಎಂದು ಕೂಡಾ ಬಹಳಷ್ಟು ಜನರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಒಟ್ಟಾರೆ ಒಂದು ಕಡೆ ಬಿಗ್ ಬಾಸ್ ಜನಪ್ರಿಯತೆ ಜೊತೆಗೆ ಟೀಕೆ ಟಿಪ್ಪಣಿಗಳಿಗೂ ಕೂಡಾ ಕಾರಣವಾಗಿದೆ.

Leave A Reply

Your email address will not be published.