ಬಿಗ್ ಬಾಸ್ ಸೀಸನ್-9 ಯಾವಾಗ? ಎನ್ನುತ್ತಿದ್ದ ಅಭಿಮಾನಿಗಳಿಗೆ ಸಡನ್ ಶಾಕ್ ಕೊಟ್ಟ ಕಲರ್ಸ್ ಕನ್ನಡ
ಕೊರೊನಾ ಕಾರಣದಿಂದಾಗಿ ಬಿಗ್ ಬಾಸ್ ಸೀಸನ್ 8 ತಡವಾಗಿ ಆರಂಭವಾಯಿತು. ಮಧ್ಯೆ ಒಂದು ಬಾರಿ ಬ್ರೇಕ್ ಕೂಡಾ ಸಿಕ್ಕಿತು. ನಂತರ ಸೆಕೆಂಡ್ ಇನ್ನಿಂಗ್ಸ್ ಕೂಡಾ ನಡೆಯಿತು. ತಡವಾಗಿ ಬಂದರೂ ಸೀಸನ್ ಎಂಟು ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಿಜ ಮತ್ತು ಈ ಸೀಸನ್ ಹಲವು ವಿಶೇಷತೆಗಳಿಗೂ ಸಹಾ ಸಾಕ್ಷಿಯಾಗಿತ್ತು. ಇನ್ನು ಬಿಗ್ ಬಾಸ್ ಸೀಸನ್ ಎಂಟು ಮುಗಿದಾಗ ಬಿಗ್ ಬಾಸ್ ಇಷ್ಟಪಡುವ ಪ್ರೇಕ್ಷಕರಿಗೆ ಅದು ಬೇಸರವನ್ನು ಸಹಾ ಮೂಡಿಸಿತ್ತು ಅಲ್ಲದೇ ಸೀಸನ್ 9 ಯಾವಾಗ ಆರಂಭವಾಗುವುದು ಎನ್ನುವ ನಿರೀಕ್ಷೆ ಅವರಲ್ಲಿ ಆರಂಭವಾಗಿ, ಉತ್ತರಕ್ಕಾಗಿ ಕಾಯುತ್ತಿದ್ದರು.
ಬಿಗ್ ಬಾಸ್ ಸೀಸನ್ 9 ಯಾವಾಗ ಆರಂಭವಾಗುವುದು ಎನ್ನುವ ಪ್ರಶ್ನೆ ಇರುವಾಗಲೇ ಬಹುಶಃ ಅಕ್ಟೋಬರ್ ನಲ್ಲಿ ಅದು ಆರಂಭವಾಗಬಹುದೆನ್ನುವ ಸುದ್ದಿಯೊಂದು ಹರಿದಾಡಿತ್ತು. ಅಲ್ಲದೇ ಕಿಚ್ಚ ಸುದೀಪ್ ಅವರು ಸಹಾ ಕೋಟಿಗೊಬ್ಬ 2 ಸಿನಿಮಾ ಸಕ್ಸಸ್ ಮೀಟ್ ನ ವೇಳೆ ಬಿಗ್ ಬಾಸ್ ಜನವರಿ 2022 ರಲ್ಲಿ ಗ್ರಾಂಡ್ ಆಗಿ ಬರಲಿದೆ ಎನ್ನುವ ಸುಳಿವೊಂದನ್ನು ನೀಡಿದಾಗ ಅದು ಅಭಿಮಾನಿಗಳಿಗೆ ಖುಷಿಯನ್ನು ಸಹಾ ನೀಡಿತ್ತು. ಈಗ ಇದೇ ವಿಚಾರವಾಗಿ ಕಲರ್ಸ್ ಕನ್ನಡ ವಾಹಿನಿಯ ಕ್ಲಸ್ಟರ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಸ್ಪಷ್ಟನೆ ನೀಡಿದ್ದಾರೆ.
ಪರಮೇಶ್ವರ ಗುಂಡ್ಕಲ್ ಅವರು ಮಾದ್ಯಮದ ಜೊತೆ ಮಾತನಾಡುತ್ತಾ ಕಳೆದ ಬಾರಿ ಕೊರೊನಾ ಕಡಿಮೆಯಾಗಿದೆ ಎನ್ನುವ ಭಾವನೆಯೊಂದಿಗೆ ಬಿಗ್ ಬಾಸ್ ಎಂಟು ಪ್ರಾರಂಭ ಮಾಡಿದೆವು. ಆದರೆ ಕೊರೊನಾ ಹೆಚ್ಚಾದ ಕಾರಣ 72 ನೇ ದಿನ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕರೆಸಿದೆವು. ಮತ್ತೆ ಕೊರೊನಾ ಕಡಿಮೆಯಾದ ಮೇಲೆ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿ ಸ್ಪರ್ಧಿಗಳು ಮತ್ತೆ 48 ದಿನಗಳ ಕಾಲ ಮನೆಯಲ್ಲಿ ಇದ್ದು, ಸೀಸನ್ ಎಂಟು 100 ದಿನಗಳ ಬದಲಿಗೆ 120 ದಿನಗಳ ಕಾಲ ನಡೆಯಿತು.
120 ದಿನಗಳ ಬಿಗ್ ಬಾಸ್ ಆಟ, ಎರಡು ಇನ್ನಿಂಗ್ಸ್ ಇದೆಲ್ಲಾ ಒಂದು ಹೊಸ ಇತಿಹಾಸವನ್ನು ಸೃಷ್ಟಿ ಮಾಡಿತು. ಇನ್ನು ಕಳೆದ ಬಾರಿ ತೆಗೆದುಕೊಂಡ ಹಾಗೆ ಈ ಬಾರಿ ಕೂಡಾ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಸ್ಪಲ್ಪ ಕಷ್ಟವಾದ ಕಾರಣ ಕೊರೊನಾ ಮೂರನೇ ಅಲೆಯ ಬಗ್ಗೆ ಗಮನ ಹರಿಸಿ ಅನಂತರ ಬಿಗ್ ಬಾಸ್ ಆರಂಭಿಸುವ ಆಲೋಚನೆ ಇದೆ. ಆದರೆ ಹೊಸ ಸೀಸನ್ ಯಾವಾಗ?? ಎನ್ನುವ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ ಎನ್ನುವ ಮಾತನ್ನು ಪರಮೇಶ್ವರ ಗುಂಡ್ಕಲ್ ಅವರು ಹೇಳಿದ್ದಾರೆ.