ಬಿಗ್ ಬಾಸ್ ಶೋ ನಿರೂಪಕ ಚೇಂಜ್: ಅಧಿಕೃತ ಘೋಷಣೆ ಮಾಡಿದ ಸ್ಟಾರ್ ನಟ!! ಮುಂದಿನ ನಿರೂಪಕ ಯಾರು??

Entertainment Featured-Articles News

ಕಿರುತೆರೆಯಲ್ಲಿನ ರಿಯಾಲಿಟಿ ಶೋ ಗಳ ವಿಚಾರಕ್ಕೆ ಬಂದಾಗ ಅಲ್ಲಿ ಬಿಗ್ ಬಾಸ್ ಶೋ ಗೆ ಇರುವ ಕ್ರೇಜ್ ಎಂತದ್ದು ಎನ್ನುವುದನ್ನು ನಾವು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಬಿಗ್ ಬಾಸ್ ಹಿಂದಿ ಮಾತ್ರವ ಅಲ್ಲದೇ ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಮರಾಠಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಹಾ ಪ್ರಸಾರ ಕಂಡು ಈಗಾಗಲೇ ಹಲವು ಯಶಸ್ವಿ ಸೀಸನ್ ಗಳನ್ನು ಸಹಾ ಮುಗಿಸಿ ಅಪಾರ ಜನ ಮನ್ನಣೆಯನ್ನು ಹಾಗೂ ಪ್ರೇಕ್ಷಕರ ಆದರ ಅಭಿಮಾನಿಗಳನ್ನು ಪಡೆದುಕೊಂಡಿದ್ದು, ಬಿಗ್ ಬಾಸ್ ವೀಕ್ಷಣೆ ಮಾಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ.

ಬಿಗ್ ಬಾಸ್ ಯಾವುದೇ ಭಾಷೆಯಲ್ಲಿ ಕೂಡಾ ಪ್ರಸಾರ ಕಂಡರೂ, ಇಲ್ಲಿ ಪ್ರಮುಖ ಆಕರ್ಷಣೆ ಎಂದರೆ ಅದನ್ನು ನಡೆಸಿಕೊಡುವ ನಿರೂಪಕರು. ಹೌದು ನಿರೂಪಕರು ಕಾಣಿಸಿಕೊಳ್ಳುವ ವಾರಾಂತ್ಯದ ಎಪಿಸೋಡ್ ಗಳು ಭರ್ಜರಿ ಟಿ ಆರ್ ಪಿ ಯನ್ನು ಪಡೆದುಕೊಳ್ಳುತ್ತದೆ. ಅನೇಕ ಸಂದರ್ಭಗಳಲ್ಲಿ ನಿರೂಪಕರಿಂದಾಗಿಯೇ ಇಡೀ ವಾರ ಬರದ ಟಿ ಆರ್ ಪಿ ವಾರಾಂತ್ಯದ ಎಪಿಸೋಡ್ ಗಳಲ್ಲಿ ಬರುವುದು ಸಹಾ ಸಾಮಾನ್ಯವಾದಂತಹ ವಿಷಯವಾಗಿದೆ. ಬಿಗ್ ಬಾಸ್ ನಿರೂಪಕರಿಂದಾಗಿಯೇ ಅನೇಕರು ವಾರಾಂತ್ಯದ ಎಪಿಸೋಡ್ ಗಳನ್ನು ನೋಡುತ್ತಾರೆ.

ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ 4 ನೇ ಸೀಸನ್ ನಿಂದ ನಿರೂಪಣೆ ಆರಂಭಿಸಿ ಇದೀಗ 15 ನೇ ಯಶಸ್ವಿ ಸೀಸನ್ ಮುಗಿಸಿದ್ದಾರೆ. ಕನ್ನಡದಲ್ಲಿ ನಟ ಕಿಚ್ಚ ಸುದೀಪ್ ಅವರು, ತೆಲುಗಿನಲ್ಲಿ ನಟ ನಾಗಾರ್ಜುನ ಹಾಗೂ ತಮಿಳಿನಲ್ಲಿ ಕಮಲ ಹಾಸನ್ ಅವರು ಪ್ರತಿ ಸೀಸನ್ ನಲ್ಲಿ ನಿರೂಪಣೆ ಮಾಡುತ್ತಾ ಬಿಗ್ ಬಾಸ್ ರಿಯಾಲಿಟಿ ಶೋ ನ ಒಂದು ಪ್ರಮುಖ ಭಾಗವಾಗಿದ್ದಾರೆ. ಇವರಿಲ್ಲದೇ ಬಿಗ್ ಬಾಸ್ ಅನ್ನು ಊಹೆ ಮಾಡಿಕೊಳ್ಳುವುದು ಸಹಾ ಸಾಧ್ಯವಿಲ್ಲ. ಆದರೆ ಈ ವಿಚಾರದಲ್ಲಿ ಈಗ ದೊಡ್ಡ ಬದಲಾವಣೆ ಆಗಲಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ‌.

ಹೌದು, ತಮಿಳು ನಟ ಕಮಲ್ ಹಾಸನ್ ಅವರು ಪ್ರಸ್ತುತ ತಮ್ಮ ಸಿನಿಮಾಗಳ ವಿಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಟನೆ, ನಿರ್ಮಾಣ, ನಿರ್ದೇಶನ, ನಿರೂಪಣೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ತಮಿಳು ಕಿರುತೆರೆಯಲ್ಲಿ ಬಿಗ್ ಬಾಸ್ ದೊಡ್ಡ ಜನಪ್ರಿಯತೆ ಪಡೆದಿರುವ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಅಲ್ಟಿಮೇಟ್ ಹೆಸರಿನಲ್ಲಿ ಓಟಿಟಿಯಲ್ಲಿ ತಮಿಳು ಬಿಗ್ ಬಾಸ್ ಬರಲು ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಅದರ ಬೆನ್ನಲ್ಲೇ ಕಮಲ ಹಾಸನ್ ಅವರು ಒಂದು ಶಾ ಕಿಂ ಗ್ ಸುದ್ದಿಯನ್ನು ನೀಡಿದ್ದಾರೆ.

ಕಮಲ ಹಾಸನ್ ಅವರು ಪ್ರಸ್ತುತ ಬಹುನಿರೀಕ್ಷಿತ ವಿಕ್ರಮ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಜನಪ್ರಿಯ ನಿರ್ದೇಶಕ ಲೋಕೇಶ್ ಕನಗರಾಜು ನಿರ್ದೇಶನ ಮಾಡುತ್ತಿದ್ದು ದೊಡ್ಡ ಸ್ಟಾರ್ ನಟರುಗಳು ಈ ಸಿನಿಮಾದಲ್ಲಿ ಕಮಲ ಹಾಸನ್ ಜೊತೆಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ನಟ ಕಮಲ ಹಾಸನ್ ಅವರಿಗೆ ಬಿಗ್ ಬಾಸ್ ನಿಂದಾಗಿ ಈ ಸಿನಿಮಾದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಮಯವನ್ನು ನೀಡುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಅವರೀಗ ಬಿಗ್ ಬಾಸ್ ಅಲ್ಟಿಮೇಟ್ ನಿಂದ ಹೊರ ಬರುತ್ತಿರುವುದಾಗಿ ಹೇಳಿದ್ದಾರೆ.

ವಿಕ್ರಮ್ ಹಾಗೂ ಬಿಗ್ ಬಾಸ್ ನಡುವೆ ಯಾವುದೇ ಸಮಸ್ಯೆ ಆಗದಿರಲೆಂದು ಎರಡೂ ತಂಡಗಳು ಬಹಳ ಚೆನ್ನಾಗಿ ಯೋಜನೆ ಸಿದ್ಧಪಡಿಸಿದ್ದರು. ನಾನು ಎರಡು ಕಡೆ ಕೆಲಸ ಮಾಡುತ್ತಿದ್ದೆ. ಆದರೆ ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಸಿನಿಮಾದ ಕೆಲಸಗಳು ಮುಂದೂಡಲ್ಪಟ್ಟವು. ಅದೇ ಕಾರಣದಿಂದ ಈಗ ಬಿಗ್ ಬಾಸ್ ಡೇಟ್ ಗಳು ಸಿನಿಮಾ ಕೆಲಸಗಳಿಗೆ ಸಮಸ್ಯೆ ಆಗಲಿದ್ದು, ಸಿನಿಮಾ ಕೆಲಸವನ್ನು ಮುಗಿಸಲೇ ಬೇಕಾಗಿರುವುದರಿಂದ ಬೇರೆ ನಟರಿಗೆ, ತಂತ್ರಜ್ಞರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಬಿಗ್ ಬಾಸ್ ನಿಂದ ಹಿಂದೆ ಸರಿಯಬೇಕಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕಮಲ ಹಾಸನ್ ಅವರು ಓಟಿಟಿಯಲ್ಲಿ ಪ್ರಸಾರ ಆಗಲಿರುವ ಬಿಗ್ ಬಾಸ್ ಅಲ್ಟಿಮೇಟ್ ಅನ್ನು ‌ಲಾಂಚ್ ಮಾಡಿದ ವಿಚಾರದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈಗ ಕಮಲ ಹಾಸನ್ ಅವರು ಬಿಗ್ ಬಾಸ್ ನಿಂದ ಹಿಂದೆ ಸರಿದಿರುವುದರಿಂದ ಅವರ ಜಾಗಕ್ಕೆ ಯಾರು ಬರಲಿದ್ದಾರೆ ಎನ್ನುವ ಕುತೂಹಲ ಈಗ ಎಲ್ಲೆಡೆ ಹೆಚ್ಚಾಗಿದೆ. ಕಮಲ ಹಾಸನ್ ಅವರನ್ನು ಬಿಗ್ ಬಾಸ್ ನಲ್ಲಿ ನೋಡಿದ ಪ್ರೇಕ್ಷಕರು ಹೊಸ ನಿರೂಪಕನ ಆಗಮನಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *