ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಘೋಷಣೆಯಾದ ಮೇಲೆ ಬಹಳಷ್ಟು ಜನ ಖುಷಿ ಪಡುತ್ತಿದ್ದಾರೆ. ಹಳ್ಳಿ ಹೈದ, ಬಡ ಕುಟುಂಬದಿಂದ ಬಂದಂತಹ ಪ್ರತಿಭಾವಂತ ಮಂಜು ಪಾವಗಡ ಸೀಸನ್ ಎಂಟರ ವಿನ್ನರ್ ಆಗಿ ಹೊರ ಹೊಮ್ಮಿರುವುದು ಅನೇಕರಿಗೆ ಬಹಳ ಸಂತೋಷವನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಂಜು ಅವರ ಯಶಸ್ಸಿಗೆ ಬಹಳಷ್ಟು ಜನರು ಕಾಮೆಂಟ್ ಗಳನ್ನು ಮಾಡುವ ಮೂಲಕ ಮಂಜು ಪಾವಗಡ ಅವರ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತಿದ್ದಾರೆ. ಇನ್ನು ಬಿಗ್ ಬಾಸ್ ಟ್ರೋಫಿಯನ್ನು ಗೆದ್ದ ಮಂಜು ಪಾವಗಡ ಅವರಿಗೆ ಬಿಗ್ ಬಾಸ್ ಟ್ರೋಫಿ ಮಾತ್ರವೇ ಅಲ್ಲದೇ ಅದರ ಜೊತೆಗೆ 53 ಲಕ್ಷ ರೂಪಾಯಿಗಳು ಬಹುಮಾನವಾಗಿ ದೊರೆತಿದೆ. ಆದರೆ ನಿಜವಾಗಿಯೂ ಈ 53 ಲಕ್ಷಗಳು ಅವರ ಕೈ ಸೇರುತ್ತದೆಯೇ?? ಈ ಪ್ರಶ್ನೆ ನಿಮಗೆ ಮೂಡಿದ್ದರೆ, ಇದಕ್ಕೆ ಉತ್ತರ ಖಂಡಿತಾ ಇಲ್ಲ ಎಂದೇ ಹೇಳಬಹುದು.
ಇಲ್ಲ ಎಂದು ಹೇಳಿದ ಕೂಡಲೇ ಬಹಳಷ್ಟು ಜನರಿಗೆ ಆಶ್ಚರ್ಯ ಆಗಬಹುದು. ಹಾಗಾದರೆ ಏಕೆ ಸಂಪೂರ್ಣ ಮೊತ್ತ ಅವರ ಕೈ ಸೇರುವುದಿಲ್ಲ ಎನ್ನುವ ವಿಚಾರಕ್ಕೆ ಬಂದರೆ, ರಿಯಾಲಿಟಿ ಶೋಗಳು ಅಥವಾ ಇನ್ನಾವುದೇ ಶೋ ಗಳಲ್ಲಿ ಕಲಾವಿದರಿಗೆ ಬಹುಮಾನದ ರೂಪದಲ್ಲಿ ಹಣವು ದೊರೆತಾಗ ಅದರಲ್ಲಿ 34% ತೆರಿಗೆಯ ರೂಪದಲ್ಲಿ ಕಡಿತಗೊಳ್ಳುತ್ತದೆ. ಈಗ ಮಂಜು ಪಾವಗಡ ಅವರು ಗಳಿಸಿರುವ 53 ಲಕ್ಷ ರೂಪಾಯಿಗಳಲ್ಲಿ 34% ತೆರಿಗೆಯಾಗಿ ಕಡಿತಗೊಂಡ ನಂತರ ಅವರ ಕೈ ಸೇರಲಿರುವ ಹಣ 34 ಲಕ್ಷ 92 ಸಾವಿರ ರೂಪಾಯಿಗಳು ಮಾತ್ರ. ಆದರೆ ಇದೇ ವೇಳೆ ಬಿಗ್ ಬಾಸ್ ನ ಸುದೀರ್ಘ ಜರ್ನಿಯಲ್ಲಿ ಕೊನೆಯ ಹಂತದವರೆಗೂ ಉಳಿದುಕೊಂಡಿದ್ದ ಮಂಜು ಅವರಿಗೂ ಸಹ ಇತರ ಸ್ಪರ್ಧಿಗಳ ಹಾಗೆ ಸಂಭಾವನೆ ಕೂಡಾ ದೊರೆಯಲಿದೆ.
ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರಿಗೆ ವಾರವೊಂದಕ್ಕೆ 30, 000 ರೂ ಸಂಭಾವನೆಯನ್ನು ನಿಗದಿ ಮಾಡಲಾಗಿತ್ತು. ಅವರು ಬಿಗ್ ಬಾಸ್ ಮನೆಯಲ್ಲಿ ಒಟ್ಟು 17 ವಾರಗಳ ಕಾಲ ಇದ್ದ ಕಾರಣ ಒಟ್ಟು ಐದು ಲಕ್ಷದ ಹತ್ತು ಸಾವಿರ ರೂಪಾಯಿಗಳು ಸಂಭಾವನೆಯಾಗಿ ಸಿಗಲಿದೆ. ಸಂಭಾವನೆಯ ಮೊತ್ತದಲ್ಲಿ ಯಾವುದೇ ರೀತಿಯ ಕಡಿತವನ್ನು ಮಾಡಲಾಗುವುದಿಲ್ಲ. ಕೇವಲ ಬಹುಮಾನದ ಮೊತ್ತದಲ್ಲಿ ಮಾತ್ರವೇ 34% ಹಣವನ್ನು ಕಡಿತಗೊಳಿಸಲಾಗುತ್ತದೆ. ಬಹುಮಾನ ಗೆದ್ದ ಮಂಜು ಪಾವಗಡ ಮಾಧ್ಯಮವೊಂದರಲ್ಲಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ನನ್ನ ಮಹದಾಸೆ ಎಂದು ಹೇಳಿದ್ದಾರೆ. ಅವರ ಈ ಆಸೆ ನಿಜವಾಗಲಿ ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಅವಕಾಶಗಳನ್ನು ಪಡೆದುಕೊಂಡು ಮತ್ತಷ್ಟು ಯಶಸ್ಸು ಪಡೆಯಲಿ ಎಂದು ಹಾರೈಸೋಣ.