ಬಿಗ್ ಬಾಸ್ ಮನೇಲಿ ಆರ್ಯವರ್ಧನ್ ಗುರೂಜಿಗೆ ಸಾನ್ಯಾ ಮಾಡಿದ್ರು ಪ್ರಪೋಸ್: ಅಬ್ಬಾ ಎಂತಾ ಸುಂದರ ಮಾತುಗಳು ಗೊತ್ತಾ?

Entertainment Featured-Articles Movies News

ಬಿಗ್ ಬಾಸ್ ಓಟಿಟಿ ಬಹಳ ಕುತೂಹಲವನ್ನು ಕೆರಳಿಸುತ್ತಾ ಓಡುತ್ತಿದೆ. ಸ್ಪರ್ಧಿಗಳ ನಡುವೆ ಒಂದಷ್ಟು ಮನಸ್ತಾಪ, ಭಿನ್ನಾಭಿಪ್ರಾಯಗಳು ಪ್ರಾರಂಭವಾಗಿದೆ. ಅದರ ನಡುವೆಯೇ ಒಂದಷ್ಟು ಹಾಸ್ಯದ, ಆಸಕ್ತಿಕರ ಸಂಭಾಷಣೆಗಳು ಸಹಾ ನಡೆದಿವೆ. ಹೊಟ್ಟೆಯ ವಿಚಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಅವರು ಟೀಕೆ ಒಳಗಾಗಿದ್ದರು. ಅಲ್ಲದೇ ಟಾಸ್ಕ್ ಒಂದರ ವೇಳೆ ಸಹಾ ಆರ್ಯವರ್ಧನ್ ಅವರು ಕೆಂಡಾಮಂಡಲವಾಗಿ ಜೋರು ದನಿಯಲ್ಲಿ ಕೂಗಾಡಿದ್ದರು. ತಮ್ಮ‌ ಆಸ್ತಿಯ ವಿಚಾರವಾಗಿ ಮಾತನಾಡಿ ಒಂದಷ್ಟು ಸುದ್ದಿಯಾಗಿದ್ದರು. ಈಗ ಇವೆಲ್ಲವುಗಳ ನಂತರ ಮತ್ತೊಂದು ಘಟನೆ ನಡೆದಿದೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಅವರಿಗೆ ಲವ್ ಪ್ರಪೋಸಲ್ ಬಂದಿದೆ. ಇಷ್ಟಕ್ಕೂ ಈ ಲವ್ ಪ್ರಪೋಸಲ್ ಮಾಡಿದ್ದು ಯಾರು ಎನ್ನೋದಾದ್ರೆ ಅದು 22 ವರ್ಷ ವಯಸ್ಸಿನ ಸಾನ್ಯಾ ಅಯ್ಯರ್ ಕಡೆಯಿಂದ ಎಂದರೆ ಅಚ್ಚರಿಯಾಗುತ್ತದೆ. ಹಾಗಾದರೆ ಏನೀ ವಿಷಯ ಎನ್ನುವ ಕುತೂಹಲ ಅನ್ನೋದಾದ್ರೆ ಅವರ ಮಾಹಿತಿ ಇಲ್ಲಿದೆ. ಆರ್ಯವರ್ಧನ್ ಗುರೂಜಿ ಈಗ ಜಾಲಿ ಮೂಡ್ ನಲ್ಲಿ ಮನೆಯ ಸದಸ್ಯರೊಂದಿಗೆ ಗೇಮ್ ಆಡುತ್ತಿದ್ದಾರೆ. ಈ ವೇಳೆ ಅವರು ಮನೆಯ ಸದಸ್ಯರಿಗೆ ರೊಮ್ಯಾಂಟಿಕ್ ಆಗಿ ಮಾತನಾಡಬೇಕೆಂದು ಹೇಳಿದ ವೇಳೆ ಅವರು ಹಾಗೂ ಸಾನ್ಯಾ ನಡುವೆ ನಡೆದ ಸಂಭಾಷಣೆ ಈಗ ಗಮನ ಸೆಳೆದಿದೆ.

ಆರ್ಯವರ್ಧನ್ ಅವರು ಮಾತನ್ನು ಆರಂಭಿಸಿ ಸಖತ್ ಆಗಿ ಹೇಳುತ್ತೇನೆ.‌ಕಳೆದು ಹೋಗುವಿರಿ, ಆರಾಮಾಗಿರಿ, ನೀವೆಲ್ಲಾ ಬೆಚ್ಚಿ ಬೀಳುವರಿ, ಆದದ್ದು ಆಗಲೀ ಮಾತಾಡ್ತೀನಿ ಎಂದಿದ್ದಾರೆ. ಆಗ ಪ್ರತಿಕ್ರಿಯೆ ನೀಡಿದ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಬಂದಿದ್ದೀರಿ. ಹಾಗೆ ನನ್ನ ಮನಸ್ಸಿನೊಳಗೂ ನೀವೇ ಮೊದಲು ಕಾಲಿಡಬೇಕು ಎಂದಿದ್ದಾರೆ. ಅದಕ್ಕೆ ಆರ್ಯವರ್ಧನ್ ಅವರು ನಾನು ಈ ಮನೆಗೆ ಬಂದೆ, ಈ ಮನೆ ಸುಂದರವಾಗಿದೆ, ಇಲ್ಲಿ ಅಡುಗೆ ಮಾಡುವವರಿಲ್ಲ, ದೀಪ ಹಚ್ಚುವವರಿಲ್ಲ‌ ಆ ಸ್ಥಾನ ನಾನು ನಿಮಗೆ ಕೊಡುತ್ತೇನೆ ಎನ್ನುವ ಮಾತನ್ನು ಹೇಳಿದ್ದಾರೆ.

ಆಗ ಸಾನ್ಯಾ ನಾನು ಕೆಲಸದವಳಾ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್ಯವರ್ಧನ್ ಅವರು ಬೇರೆ ಪ್ರಶ್ನೆ ಕೇಳಿ, ಇದು ಬೇಡ ಎಂದಾಗ, ಸಾನ್ಯಾ ನೀವು ಕಂದನ ತರ ಇದ್ದೀರಾ, ಬಹಳ‌ ಮುದ್ದಾಗಿದ್ದೀರಾ, ನನ್ನ ಬಾಳಲ್ಲಿ ಬರುವಿರಾ ಎಂದು ಕೇಳಿದ್ದಾರೆ.‌ ಇದಕ್ಕೆ ಹಾಸ್ಯ ಚಟಾಕಿ ಹಾರಿಸುತ್ತಾ ಉತ್ತರ ನೀಡಿದ ಆರ್ಯವರ್ಧನ್ ಗುರೂಜಿ, ನೀವು ನನ್ನನ್ನು ಮುದ್ದಾಗಿದ್ದೀನಿ ಅಂತ ಹೇಳಿದ್ದೀರಿ. ಅದನ್ನು ಒಪ್ಪಿಕೊಳ್ಳೋಕೆ ಎರಡು ದಿನ ಟೈಮ್ ಕೊಡಿ ಎಂದು ಕೇಳಿದ್ದಾರೆ. ಈ ಮಾತು ಕೇಳಿದ ಕೂಡಲೇ ಮನೆಯ ಅನ್ಯ ಸದಸ್ಯರೆಲ್ಲಾ ನಗುವಂತಾಗಿದೆ.

Leave a Reply

Your email address will not be published.