ಬಿಗ್ ಬಾಸ್ ಮನೆ ಮುಂದೆ ಹೈಡ್ರಾಮಾ ಮಾಡಿ ಕೊನೆಗೂ ಮನೆಯೊಳಕ್ಕೆ ಪ್ರವೇಶ ಪಡೆದ ಮಾಜಿ ಸ್ಪರ್ಧಿ

Written by Soma Shekar

Published on:

---Join Our Channel---

ಭಾಷೆ ಯಾವುದೇ ಆದರೂ ಪ್ರತಿಭಾಷೆಯ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿರುವ ಏಕೈಕ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಾಕಷ್ಟು ದೊಡ್ಡ ಹೆಸರನ್ನು ಮಾಡಿರುವ ಬಿಗ್ ಬಾಸ್, ಹಿಂದಿಯಲ್ಲಿ ಈಗಾಗಲೇ 14 ಸೀಸನ್ ಗಳನ್ನು ಮುಗಿಸಿ, ಹದಿನೈದ‌ನೇ ಸೀಸನ್ ಆರಂಭಕ್ಕೆ ಸಜ್ಜಾಗುತ್ತಿದೆ. ಇನ್ನು ಬಿಗ್ ಬಾಸ್ ನ ಪ್ರತಿ ಸೀಸನ್ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದು ಮಾತ್ರವೇ ಅಲ್ಲದೇ, ಟಿ ಆರ್ ಪಿ ವಿಷಯದಲ್ಲಿ ಹೊಸ ದಾಖಲೆಗಳನ್ನು ಬರೆದರೆ, ಅದೇ ಮಟ್ಟದಲ್ಲಿ ವಿವಾದಗಳನ್ನು ಸೃಷ್ಟಿಸುತ್ತದೆ. ಇಂತಹ ಬಿಗ್ ಬಾಸ್ ಇದೇ ಮೊದಲ ಬಾರಿಗೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಆರಂಭವಾಗಿದ್ದು, ವೂಟ್ ನಲ್ಲಿ ಅದಿ ಪ್ರಸಾರವಾಗುತ್ತಿದೆ. ಓಟಿಟಿ ಬಿಗ್ ಬಾಸ್ ಈಗಾಗಲೇ ದೊಡ್ಡ ಮಟ್ಟದಲ್ಲಿ ವಿವಾದಗಳಿಗೆ ಕಾರಣವಾಗಿದ್ದು, ಅದೇ ವೇಳೆ ಪ್ರೇಕ್ಷಕರಿಗೆ ಸಖತ್ ಮನರಂಜನೆಯನ್ನು ಸಹ ನೀಡುವಲ್ಲಿ ಯಶಸ್ಸನ್ನು ಪಡೆದುಕೊಂಡಿದೆ.

ಬಾಲಿವುಡ್ ನಲ್ಲಿ  ಡ್ರಾಮಾ ಕ್ವೀನ್ ಎನ್ನುವ ಹೆಸರನ್ನು ಪಡೆದುಕೊಂಡಿರುವ ನಟಿ ರಾಖಿ ಸಾವಂತ್ ಈಗಾಗಲೇ ಬಿಗ್ ಬಾಸ್ ಕೆಲವು ಸೀಸನ್ ಗಳಲ್ಲಿ ಕಾಣಿಸಿಕೊಂಡಿದ್ದು, ಪ್ರತಿ ಬಾರಿಯೂ ಸಕ್ಕತ್ ಸುದ್ದಿಯನ್ನು ಮಾಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ರಾಖಿ ಸಾವಂತ್ ಬಿಗ್ ಬಾಸ್ ಓಟಿಟಿ ಆವೃತ್ತಿಗೆ ತನಗೆ ಆಹ್ವಾನವನ್ನು ನೀಡಿಲ್ಲ ಎನ್ನುವ ಕಾರಣಕ್ಕೆ ಸ್ಪೈಡರ್ ವುಮನ್ ವೇಷವನ್ನು ಧರಿಸಿಕೊಂಡು, ಬಿಗ್ ಬಾಸ್ ಮನೆಯ ಮುಂದೆ ದೊಡ್ಡ ಹೈಡ್ರಾಮಾ ವನ್ನೇ ನಡೆಸಿದ್ದರು. ರಾಖಿ ಸಾವಂತ್ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿತ್ತು.

ಸ್ಪೈಡರ್ ವುಮನ್ ಆಗಿ ರಾಖಿ ಮಾಡಿದ ಹೈಡ್ರಾಮಾದ ನಂತರ ಬಿಗ್ ಬಾಸ್ ರಾಖಿ ಸಾವಂತ್ ಗೆ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲು ಆಹ್ವಾನವನ್ನು ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಬಹಳ ಖುಷಿ ಪಟ್ಟಿರುವ ರಾಖಿ ಸಾವಂತ್, ಕಿತ್ತಳೆ ಬಣ್ಣದ ಗೌನ್ ಧರಿಸಿಕೊಂಡು ಬಹಳ ಸಂತಸದಿಂದ ತನಗೆ ಬಿಗ್ ಬಾಸ್ ಮನೆಗೆ ಆಹ್ವಾನ ಬಂದಿರುವ ವಿಚಾರವನ್ನು ಹಂಚಿಕೊಂಡು, ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ. ರಾಖಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡುತ್ತಿರುವ ವಿಡಿಯೋ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ.

ಕಳೆದ ಬಾರಿ ಬಿಗ್ ಬಾಸ್ 14ನೇ ಸೀಸನ್ ನಲ್ಲಿ ಮನೆಯಲ್ಲಿ ಎಂಟರ್ಟೈನ್ಮೆಂಟ್ ಕಡಿಮೆಯಾಗಿದೆ ಎಂದು ಪ್ರೇಕ್ಷಕರ ಅಸಮಾಧಾನ ಹೊರ ಬಂದ ಕೂಡಲೇ ಬಿಗ್ ಬಾಸ್ ಆಯೋಜಕರು ರಾಖಿ ಸಾವಂತ್ ಅನ್ನು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿಸಿದ್ದರು. ರಾಖಿ ಪ್ರವೇಶದ ನಂತರ 14ನೇ ಸೀಸನ್ ಎಂಟರ್ಟೈನ್ಮೆಂಟ್ ವಿಚಾರದಲ್ಲಿ ಮತ್ತೊಂದು ಹಂತಕ್ಕೆ ತಲುಪಿತ್ತು. ಇದೀಗ ಹೈಡ್ರಾಮದ ನಂತರ ಓಟಿಟಿ ಬಿಗ್ ಬಾಸ್ ಗೂ ಪ್ರವೇಶ ಮಾಡಿರುವ ರಾಖಿ ಮನೆಯೊಳಗೆ ಏನೆಲ್ಲಾ ಮಾಡಲಿದ್ದಾರೆ ಎನ್ನುವುದನ್ನು ವೀಕ್ಷಕರು ಕಾದುನೋಡಬೇಕಾಗಿದೆ.

Leave a Comment