ಬಿಗ್ ಬಾಸ್ ಮನೆಯಿಂದ ಔಟ್ ಆದ ಚಕ್ರವರ್ತಿ ಚಂದ್ರಚೂಡ್ ಗೆ ಸಿಕ್ಕಿತು ಆಕರ್ಷಕ ಸಂಭಾವನೆ

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಅವರು ಏಪ್ರಿಲ್ 1ರಂದು ಬಿಗ್ ಬಾಸ್ ಮನೆಯನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶಿಸಿದ್ದರು. ಆದರೂ ಮನೆಯಲ್ಲಿದ್ದಷ್ಟು ಕಾಲವೂ ಒಂದಲ್ಲ ಒಂದು ವಿಚಾರಕ್ಕೆ ಜಗಳ, ವಿ ವಾ ದ, ಕೋಪ ಹಾಗೂ ಮನಸ್ತಾಪ ಗಳಿಂದಲೇ ಹೆಚ್ಚು ಸದ್ದು ಮಾಡಿದರು. ಅವರು ಆಡಿದ ಮಾತುಗಳಿಂದ ಮನೆಯ ಸದಸ್ಯರು ಬೇಸರ ಪಟ್ಟುಕೊಂಡರು. ಕೆಲವರಿಗೆ ಚಂದ್ರಚೂಡ್ ಅವರ ಕುರಿತಾಗಿ ಭಿನ್ನಾಭಿಪ್ರಾಯಗಳು ಮೂಡಿದವು. ಚಕ್ರವರ್ತಿಯವರ ಮಾತು, ಸನ್ನೆಗಳಿಂದ ಹುಟ್ಟಿಕೊಂಡ ವಿ ವಾ ದಗಳ ಕಾರಣ ಹೊರಗಡೆ ವೀಕ್ಷಕರು ಕೂಡಾ ಚಕ್ರವರ್ತಿ ಅವರನ್ನು ಹೊರಗೆ ಹಾಕಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹವನ್ನು ಮಾಡಿದರು.

ಈಗ ಇವೆಲ್ಲವುಗಳ ಬೆನ್ನಲ್ಲೇ ಚಕ್ರವರ್ತಿ ಚಂದ್ರಚೂಡ್ ಅವರು ವಾರದ ಮಧ್ಯಭಾಗದಲ್ಲಿ ಎಲಿಮಿನೇಟ್ ಆಗುವ ಮೂಲಕ ತಮ್ಮ ಬಿಗ್ ಬಾಸ್ ಜರ್ನಿ ಅನ್ನು ಮುಗಿಸಿಕೊಂಡು ಹೊರಗಡೆ ಬಂದಿದ್ದಾರೆ. ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲಿ ಬಹುತೇಕ ಯಾವುದಾದರೂ ವಿಚಾರಗಳಿಂದಾಗಿ ಹೊರ ಜಗತ್ತಿನಲ್ಲಿ ಸಾಕಷ್ಟು ಸದ್ದು-ಸುದ್ದಿ ಮಾಡಿರುವಂತಹ ಸೆಲೆಬ್ರಿಟಿಗಳನ್ನು ಸ್ಪರ್ಧಿಗಳಾಗಿ ಮನೆಯೊಳಗೆ ಪ್ರವೇಶ ನೀಡಲಾಗುತ್ತದೆ. ಅಲ್ಲದೇ ಪ್ರತಿಯೊಬ್ಬ ಸ್ಪರ್ಧಿಗೂ ಸಹಾ ವಾರಕ್ಕೆ ಎಷ್ಟು ಎನ್ನುವಂತೆ ಸಂಭಾವನೆಯನ್ನು ನಿಗಧಿ ಮಾಡಲಾಗುತ್ತದೆ. ಅದರಂತೆ ಚಕ್ರವರ್ತಿ ಚಂದ್ರಚೂಡ್ ಅವರಿಗೂ ನಿರ್ಧಿಷ್ಟ ಸಂಭಾವನೆ ನಿಗದಿಯಾಗಿತ್ತು.

ಹಾಗಾದರೆ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ನಿಗದಿ ಮಾಡಲಾಗಿದ್ದ ಸಂಭಾವನೆಯಾದರೂ ಎಷ್ಟು?? ಹನ್ನೆರಡು ವಾರಗಳ ಜರ್ನಿಯ ನಂತರ ಅವರು ಎಷ್ಟು ಸಂಭಾವನೆಯನ್ನು ಪಡೆದುಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನುವ ವಿಷಯದ ಸಂಪೂರ್ಣ ಮಾಹಿತಿ ಇಲ್ಲಿದೆ. ವೈಲ್ಡ್ ಕಾರ್ಡ್ ಮೂಲಕ ಮನೆಯನ್ನು ಪ್ರವೇಶಿಸಿದ ನಂತರ ಚಂದ್ರಚೂಡ್ ಅವರು ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಕೂಡಾ ವಾಸ್ತವ. ಒಂದು ಕಡೆ ಅವರ ಜನಪ್ರಿಯತೆಗೆ ಕಾರಣವಾದದ್ದು ನಟಿ ಶೃತಿಯವರು ಎಂದು ನಾವು ಹೇಳಬಹುದು.

ಏನೇ ಆದರೂ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಚರ್ಚೆಗಳಿಗೆ ಕಾರಣವಾದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ವಾರಕ್ಕೆ 20000 ರೂ. ಸಂಭಾವನೆ ನಿಗದಿಯಾಗಿತ್ತು. ಅವರು ಒಟ್ಟು 12 ವಾರಗಳ ಕಾಲವನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದು, ಚಕ್ರವರ್ತಿ ಚಂದ್ರಚೂಡ್ ಅವರಿಗೆ ಒಟ್ಟು 2,40,000 ರೂಪಾಯಿಗಳ ಸಂಭಾವನೆಯೂ ದೊರೆತಿದೆ ಎಂದು ಹೇಳಲಾಗಿದೆ. ಕೆಲವು ಕಟುವಾದ ಮಾತುಗಳಿಂದ ಹಾಗೂ ವರ್ತನೆಯಿಂದ ಹುಟ್ಟು ಹಾಕಿದ ವಿವಾದಗಳಿಂದಲೇ ಎಲ್ಲೆಡೆ ಸುದ್ದಿ ಆದಂತಹ ಚಕ್ರವರ್ತಿ ಚಂದ್ರಚೂಡ್ ಅವರು ಕೊನೆಗೂ ಬಿಗ್ ಬಾಸ್ ಮನೆಯ ಪಯಣವನ್ನು ಮುಗಿಸಿ ಹೊರ ಬಂದಿದ್ದಾರೆ.

Leave a Comment