ಬಿಗ್ ಬಾಸ್ ಮನೆಯಲ್ಲಿ VIP ಟಿಕೆಟ್ ಸಿಗಲಿಲ್ಲ ಎಂದು, ಚಾ ಕು ಹಿಡಿದು ವೈ ಲೆಂ ಟಾದ ಸ್ಪರ್ಧಿ: ಸಿಕ್ತು ಊಹಿಸಿರದ ಶಿಕ್ಷೆ

0 0

ಬಿಗ್ ಬಾಸ್ ಬಹು ದೊಡ್ಡ ಹಾಗೂ ಬಹು ಜನಪ್ರಿಯ ರಿಯಾಲಿಟಿ ಶೋ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಈಗಾಗಲೇ ಅದು ಪ್ರಾದೇಶಿಕ ಭಾಷೆಗಳಲ್ಲಿ ಕೂಡಾ ಪ್ರಸಾರಗೊಂಡು ಜನ ಮನ್ನಣೆಯನ್ನು ಪಡೆದುಕೊಂಡಿದೆ. ಇನ್ನು ಈ ಬಾರಿ ಹಿಂದಿಯಲ್ಲಿ ಬಿಗ್ ಬಾಸ್ ಓಟಿಟಿಗೆ ಕೂಡಾ ಕಾಲಿಟ್ಟು ತನ್ನ ಮೊದಲ ಯಶಸ್ವಿ ಸೀಸನ್ ಅನ್ನು ಮುಗಿಸಿಯಾಗಿದೆ. ಇದಲ್ಲದೇ ಹಿಂದಿಯ 15 ನೇ ಸೀಸನ್ ಆರಂಭವಾಗಿ, ಆರನೇ ಯಶಸ್ವಿ ವಾರ ನಡೆಯುತ್ತಿದೆ. ಇನ್ನು ಈ ಬಾರಿ ಬಿಗ್ ಬಾಸ್ ಆರಂಭದಲ್ಲೇ ಸಿಕ್ಕಾಪಟ್ಟೆ ಸದ್ದು ಮಾಡಿದೆ,‌ ಜಗಳ ಮತ್ತು ಗಲಾಟೆ ಗಳ ಅಬ್ಬರ ತುಂಬಿದೆ.

ಈಗ ಇವೆಲ್ಲವುಗಳ ನಡುವೆಯೇ ಬಿಗ್ ಬಾಸ್ ಮನೆಯಿಂದ ಪಂಜಾಬಿ ಗಾಯಕಿ ಅಪ್ಸಾನಾ ಖಾನ್ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ. ಹೌದು ಈ ವಾರದ ಆರಂಭದಿಂದಲೇ ಫಿನಾಲೆ ಕಡೆಗೆ ಜರ್ನಿ ಆರಂಭವಾಗಿದ್ದು, ಮೂವರಿಗೆ ವಿಐಪಿ ಟಿಕೆಟ್ ನೀಡಲು ಕ್ಯಾಪ್ಟನ್ ಗೆ ಅಧಿಕಾರಿ ನೀಡಿ , ನಾಲ್ಕು ಜನ ಮನೆಯ ಸದಸ್ಯರ ಹೆಸರನ್ನು ಬಿಗ್ ಬಾಸ್ ನೀಡಿದ್ದರು. ನಿಶಾಂತ್ ಭಟ್, ಕರನ್ ಕುಂದ್ರಾ, ತೇಜಸ್ವಿ ಪ್ರಕಾಶ್ ಹಾಗೂ ಅಫ್ಸಾನಾ ಆ ನಾಲ್ಕು ಜನರಾಗಿದ್ದರು. ಕ್ಯಾಪ್ಟನ್ ಉಮರ್ ಅಫ್ಸಾನಾ ಬಿಟ್ಟು ಉಳಿದ ಮೂವರಿಗೆ ವಿಐಪಿ ಟಿಕೆಟ್ ನೀಡಿದರು.

ತನಗೆ ಯಾವಾಗ ವಿಐಪಿ ಟಿಕೆಟ್ ಸಿಗಲಿಲ್ಲವೋ ಅದನ್ನು ನೋಡಿ ಅಫ್ಸಾನಾ ತಾ ಳ್ಮೆ ಕಳೆದುಕೊಂಡಿದ್ದಾರೆ. ಎಲ್ಲರಿಗೂ ನಾನೇ ಟಾ ರ್ಗೆ ಟ್ ಎಂದು ಅರಚಾಡಿ, ಕೂಗಾಡಿ, ತನಗೆ ತಾನೇ ದೈಹಿಕ ಹಿಂ ಸೆ ಕೊಟ್ಟುಕೊಂಡಿದ್ದಾರೆ ಅಫ್ಸಾನಾ. ಈ ಹಿಂದೆ ಕೂಡಾ ಅಫ್ಸಾನಾ ಇಂತ ಕೆಲಸ ಮಾಡಿದಾಗ ಬಿಗ್ ಬಾಸ್ ಹಾಗೂ ಸಲ್ಮಾನ್ ಖಾನ್ ಸಹಾ ಅಫ್ಸಾನಾ ಗೆ ಎಚ್ಚರಿಕೆ ನೀಡಿದ್ದರು. ವೈದ್ಯರ ನೆರವನ್ನು ನೀಡಲಾಗಿತ್ತು. ಅನಂತರ ಶಾಂತವಾಗಿದ್ದ ಆಕೆ ಈಗ ವಿಐಪಿ ಟಿಕೆಟ್ ಸಿಗಲಿಲ್ಲವೆಂದು ವೈ ಲೆಂ ಟ್ ಆಗಿದ್ದಾರೆ.

ಅಲ್ಲದೇ ಶಮಿತಾ ಶೆಟ್ಟಿ ಹಾಗೂ ಅಫ್ಸಾನಾ ನಡುವೆ ಜಗಳ ನಡೆದಿದ್ದು, ಅಫ್ಸಾನಾ ತನ್ನನ್ನು ತಾನು ಹಿಂಸಿಸಿಕೊಳ್ಳಲು ಚಾ ಕು ಎತ್ತಿ ಕೊಂಡಿದ್ದಾರೆ. ಈ ಬೆಳವಣಿಗೆ ಕಂಡು ಎಲ್ಲರೂ ಬೆಚ್ಚಿದ್ದಾರೆ. ಮನೆಯ ಅನ್ಯ ಸದಸ್ಯರು ಅಫ್ಸಾನಾ ರನ್ನು ಶಾಂತಗೊಳಿಸಲು ಪ್ರಯತ್ನ ಮಾಡಿದ್ದಾರೆ. ಈ ಎಲ್ಲವುಗಳ ನಡುವೆಯೇ ಬಿಗ್ ಬಾಸ್ ಮನೆಯ ಸದಸ್ಯರೆಲ್ಲಾ ಒಂದು ಕಡೆ ಸೇರಲು ಹೇಳಿ, ಅಫ್ಸಾನಾ ಖಾನ್ ಮನೆಯಿಂದ ಕೂಡಲೇ ಹೊರ ಬರುವಂತೆ ಆದೇಶ ನೀಡಿದ್ದಾರೆ ಎಂದು ಮಾದ್ಯಮಗಳು ಸುದ್ದಿ ಮಾಡಿವೆ.

Leave A Reply

Your email address will not be published.