ಬಿಗ್ ಬಾಸ್ ಮನೆಯಲ್ಲಿ ಸಲ್ಮಾನ್ ಗೆ ಶಮಿತಾ ಶೆಟ್ಟಿ ಹೇಳಿದ ಮಾತಿಗೆ ಖುಷಿಪಟ್ಟ ತುಳು ನಾಡಿನ ಜನತೆ

0 3

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಕೂಡಾ ಬಾಲಿವುಡ್ ಚಿತ್ರರಂಗದಲ್ಲಿ ಹೆಸರನ್ನು ಮಾಡಿರುವ ನಟಿಯಾಗಿದ್ದಾರೆ. ಆದರೆ ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುವಲ್ಲಿ ಮಾತ್ರ ಶಮಿತಾ ತಮ್ಮ ಸಹೋದರಿಯಷ್ಟು ಅದೃಷ್ಟ ಪಡೆಯಲಿಲ್ಲ ಎಂದು ಹೇಳಬಹುದು.‌ ಸಿನಿಮಾ ರಂಗದಲ್ಲಿ ಪಡೆದುಕೊಳ್ಳದ ಜನಪ್ರಿಯತೆಯನ್ನು ಇದೀಗ ಶಮಿತಾ ಬಿಗ್ ಬಾಸ್ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಶಮಿತಾ ಅವರ ಆಟ, ಅವರ ವರ್ತನೆ ಹಾಗೂ ಅವರ ನಡವಳಿಕೆ ಅನೇಕರಿಗೆ ಇಷ್ವವಾಗುತ್ತಿದೆ.

ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಮತ್ತು ಹಂಚಿಕೆ ವಿಚಾರದಲ್ಲಿ ಜೈಲಿನಲ್ಲಿರುವ ವೇಳೆಯಲ್ಲೇ ಶಮಿತಾಗೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಾರಂಭವಾದ ಮೊದಲ ಬಿಗ್ ಬಾಸ್ ಶೋ ಅವಕಾಶ ಅರಸಿ ಬಂದು ಅವರು ಅದನ್ನು ಒಪ್ಪಿಕೊಂಡರು. ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿ ಅಲ್ಲಿ ಹೆಚ್ಚು ಜನಪ್ರಿಯತೆ ಪಡೆದರು. ಶಮಿತಾ ಶೋ ಗೆಲ್ಲದಿದ್ದರೂ ಪ್ರೇಕ್ಷಕರಿಂದ ಮೆಚ್ಚುಗೆ ಹಾಗೂ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡರು.

ಈಗ ಅದರ ಫಲವಾಗಿ ಟಿವಿಯಲ್ಲಿ ಪ್ರಸಾರ ಆರಂಭಿಸಿರುವ ಬಿಗ್ ಬಾಸ್ ನ 15 ನೇ ಸೀಸನ್ ನಲ್ಲೂ ಶಮಿತಾ ಪ್ರವೇಶ ಪಡೆದಿದ್ದಾರೆ. ಶಮಿತಾ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ ನಂತರ ಮೊದಲನೇ ವೀಕೆಂಡ್ ಎಪಿಸೋಡ್ ನಲ್ಲಿ ತನ್ನ ಮಾತೃಭಾಷೆಯ ಮೇಲಿನ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಇಬ್ಬರೂ ಮಂಗಳೂರು ಮೂಲದವರು ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ದಶಕಗಳ ಕಾಲದಿಂದ ಅವರು ಮುಂಬೈ ಮಹಾ ನಗರದಲ್ಲಿ ನೆಲೆಸಿದ್ದಾರೆ.

ಮುಂಬೈ ನಗರದಲ್ಲಿ ಇದ್ದರೂ, ಬಾಲಿವುಡ್ ನಲ್ಲಿ ಹೆಸರನ್ನು ಮಾಡಿದ್ದರೂ ಅವರು ತಮ್ಮ ಮಾತೃ ಭಾಷೆ ತುಳು ಭಾಷೆಯನ್ನು ಎಂದೂ ಮರೆತಿಲ್ಲ. ಶಿಲ್ಪಾ ಶೆಟ್ಟಿ ಈಗಾಗಲೇ ಹಲವು ವೇದಿಕೆಗಳಲ್ಲಿ ತುಳು ಭಾಷೆಯನ್ನು ಬಳಸಿ ಗಮನ ಸೆಳೆದಿದ್ದಾರೆ. ಅದೇ ರೀತಿ ಶಮಿತಾ ಸಹಾ ಬಿಗ್ ಬಾಸ್ ನ ಮೊದಲ ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಸಲ್ಮಾನ್ ಖಾನ್ ಗೆ ತುಳು ಭಾಷೆ ಮಾತನಾಡುವುದನ್ನು ಹೇಳಿ ಕೊಟ್ಟಿದ್ದಾರೆ. ‘ಹೇಗಿದ್ದೀರಿ?’ ‘ಚೆನ್ನಾಗಿದ್ದೇನೆ’ ಎನ್ನುವ ಮಾತುಗಳನ್ನು ಶಮಿತಾ ಹೇಳಿಕೊಟ್ಟಿದ್ದಾರೆ.

ಶಮಿತಾ ತುಳು ಮಾತನಾಡಿದ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ ಶೋ ನಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡುವಾಗ ಆ ಭಾಷೆಯ ಪದಗಳು ಅವರಿಗೆ ತಿಳಿಯದೇ ಹೋದಾಗ, ಮನೆಯ ಅನ್ಯ ಸ್ಪರ್ಧಿಗಳು ಹಾಗೂ ಸಲ್ಮಾನ್ ಖಾನ್ ಅವರು ಅವರಿಗೆ ಮರಾಠಿ ಪದಗಳನ್ನು ಹೇಳಿ ಕೊಟ್ಟಿದ್ದಾರೆ. ಶಮಿತಾ ಬಿಗ್ ಬಾಸ್ ಮನೆಯಲ್ಲಿ ತುಳು ಭಾಷೆ ಮಾತನಾಡಿದ್ದು ತುಳು ನಾಡಿನ ಜನತೆಗೆ ಬಹಳ ಖುಷಿ ನೀಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡು ಸವಿತಾ ಅವರ ಮಾತೃಭಾಷೆಯ ಪ್ರೀತಿಯ ಬಗ್ಗೆ ಹಾಗೂ ಮುಂಬೈನಲ್ಲಿ ಇದ್ದರೂ ಮಾತೃ ಭಾಷೆಯನ್ನು ಬಳಸುತ್ತಿರುವುದಕ್ಕೆ ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಶಮಿತಾ ಹಾಗೂ ಸಲ್ಮಾನ್ ಖಾನ್ ತುಳು ಭಾಷೆ ಮಾತನಾಡಿದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

Leave A Reply

Your email address will not be published.