ಬಿಗ್ ಬಾಸ್ ಮನೆಯಲ್ಲಿ ಶಿಲ್ಪಾ ಶೆಟ್ಟಿ ತಂಗಿ ಮುತ್ತಿನಾಟ:ನನಗೆ ಈಗಲೇ ಕಿಸ್ ಮಾಡು ಎಂದ ಶಮಿತಾ ಶೆಟ್ಟಿ

Written by Soma Shekar

Published on:

---Join Our Channel---

ಹೊರ ಜಗತ್ತಿನಲ್ಲಿ ನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಬಂ ಧ ನ ದ ನಂತರ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಎಲ್ಲವನ್ನೂ ನಿಭಾಯಿಸುತ್ತಾ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಸಾಮಾನ್ಯ ಜೀವನದ ಕಡೆ ಮರಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮತ್ತೊಂದು ಕಡೆ ಅವರ ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್ ನ ಓಟಿಟಿ ಆವೃತ್ತಿಯಲ್ಲಿ ಮನೆಯೊಳಗೆ ಭಾರೀ ಸದ್ದು ಮಾಡುತ್ತಿದ್ದಾರೆ‌. ತಮ್ಮ ಹೊಸ ಪ್ರೇಮ್ ಕಹಾನಿಯೊಂದಿಗೆ ಧೂಳೆಬ್ಬಿಸುತ್ತಾ ಭಾರೀ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಓಟಿಟಿ ಪ್ಲಾಟ್ ಫಾರಂ ನಲ್ಲಿ ಆರಂಭವಾಗಿರುವ ಬಿಗ್ ಬಾಸ್ ನಲ್ಲಿ ಶಮಿತಾ ಶೆಟ್ಟಿ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ಮನೆಯೊಳಗೆ ಶಮಿತಾ ಹಾಗೂ ರಾಕೇಶ್ ಬಾಪಟ್ ನಡುವಿನ ಕುಚ್ ಕುಚ್ ಕಥೆಗಳು ಹೊರಗೆ ಸಖತ್ ಸದ್ದು ಮಾಡುವ ಮೂಲಕ ದೊಡ್ಡ ಸುದ್ದಿಯಾಗುತ್ತಿದೆ.

ವಯಸ್ಸು 42 ಆದರೂ ಜೀವನದಲ್ಲಿ ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಕ್ಕಿಲ್ಲ ಎಂದು ಮದುವೆಯಾಗದೇ ಉಳಿದಿದ್ದ ಶಮಿತಾ ಇದೀಗ ಬಿಗ್ ಬಾಸ್ ಮನೆಯಲ್ಲಿ ಮತ್ತೋರ್ವ ಸ್ಪರ್ಧಿ ರಾಕೇಶ್ ಬಾಪಟ್ ಜೊತೆಗೆ ನಡೆದುಕೊಳ್ಳುವ ವಿಧಾನ, ಅವರ ನಡುವಿನ ಮುತ್ತಿನಾಡ, ಆಪ್ತ ಒಡನಾಟ ಎಲ್ಲವೂ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದೆ. ಇದೀಗ ಅಡುಗೆ ಮನೆಯಲ್ಲಿ ರಾಕೇಶ್ ಅಡುಗೆ ಕೆಲಸದಲ್ಲಿ ಬ್ಯುಸಿಯಿದ್ದಾಗ ಶಮಿತಾ ಅಡುಗೆ ವಿಚಾರದಲ್ಲಿ ಒಂದು ಸಲಹೆ ನೀಡಿದ್ದಾರೆ. ಆಗ ರಾಕೇಶ್ ಮತ್ತೇ ಏನಾದರೂ ಹೇಳುವುದಿದೆಯೇ? ಎಂದು ಕೇಳಿದಾಗ ಶಮಿತಾ ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಆದರೆ ಅವರಿಗೆ ಕೂಡಲೇ ವಿಷಯದ ಅರಿವು ಆಗಿದೆ.

ಶಮಿತಾ ತಾನು ಕುಳಿತಿರುವ ಕಡೆಯಿಂದಲೇ ರಾಕೇಶ್ ಬಾಪಟ್ ಅವರನ್ನು ಕರೆದು, ಈ ಕೂಡಲೇ ನೀನು ಇಲ್ಲಿಗೆ ಬಂದು ನನಗೆ ಮುತ್ತು ನೀಡಬೇಕು ಎಂದು ಆರ್ಡರ್ ನೀಡಿದ್ದಾರೆ. ಕೂಡಲೇ ಬಾಸ್ ನೀಡಿದ ಆಜ್ಞೆ ಎನ್ನುವಂತೆ ರಾಕೇಶ್ ಶಮಿತಾ ಬಳಿ ಬಂದು ಕೆನ್ನೆಗೆ ಮುತ್ತಿಟ್ಟಿದ್ದಾರೆ. ಈ ರೋಮ್ಯಾಂಟಿಕ್ ಸೀನ್ ಗೆ ಸಾಕ್ಷಿಯಾದ ಮನೆಯ ಮತ್ತೋರ್ವ ಸ್ಪರ್ಧಿ ಗಾಯಕಿ ನೇಹಾ ಬಸೀನ್ ಆ ದೃಶ್ಯವನ್ನು ನೋಡಿ, ಸೋ ಸ್ವೀಟ್ ಎಂದು ಉದ್ಗಾರ ‌ತೆಗೆದಿದ್ದಾರೆ. ಆಗ ಶಮಿತಾ, ರಾಕೇಶ್ ತುಂಬಾ ಕ್ಯೂಟ್ ಎಂದು ಹೇಳಿದ್ದಾರೆ. ಶಮಿತಾ ಹಾಗೂ ರಾಕೇಶ್ ನಡುವಿನ ಲವ್ವಿ ಡವ್ವಿ ನೋಡಿ ಪ್ರೇಕ್ಷಕರು ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

Leave a Comment