ಬಿಗ್ ಬಾಸ್ ಮನೆಯಲ್ಲಿ ಭೀಭತ್ಸ: ಕಚ್ಚೋದು, ಕಲ್ಲಲ್ಲಿ ಹೊಡೆಯೋದು!! ಮುರಿದು ಬಿತ್ತಾ ಬಿಗ್ ಬಾಸ್ ಮನೆ ನಿಯಮಗಳು??

0 2

ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳು ಯಾವಾಗ? ಹೇಗೆ?? ಬದಲಾಗುತ್ತದೆ ಎಂದು ಹೇಳುವುದು ಸಾಧ್ಯವೇ ಇಲ್ಲ. ಇಲ್ಲಿನ ಸದಸ್ಯರ ನಡುವಿನ ಸಂಬಂಧಗಳು ದಿನ ದಿನವೂ ಬದಲಾಗುತ್ತಲೇ ಇರುತ್ತದೆ. ಇಲ್ಲಿನವರ ಒಡನಾಟವು ಇಂದು ಆತ್ಮೀಯವಾಗಿದ್ದರೆ, ನಾಳೆ ವಾ ಗ್ವಾದದಲ್ಲಿ ಕೊನೆಯಾದರೂ ಆಶ್ಚರ್ಯ ಪಡುವಂತಿಲ್ಲ.‌ ಹಿಂದಿಯ ಬಿಗ್ ಬಾಸ್ ನಲ್ಲಿ ಇಂತಹ ಘಟನೆಗಳು ಮಾತಿನಲ್ಲೇ ಅಲ್ಲದೇ ಮಾ ರಾ ಮಾ ರಿಗಳೇ ನಡೆದು ಹಿಂದಿನ ಸೀಸನ್ ಗಳು ದೊಡ್ಡ ಸದ್ದನ್ನು ಮಾಡಿರುವುದು ಉಂಟು.

ಈ ಬಾರಿ ಹಿಂದಿಯಲ್ಲಿ ಬಿಗ್ ಬಾಸ್ ಸೀಸನ್ 15 ನಡೆಯುತ್ತಿದ್ದು, ಶೋ ನ ಅವಧಿಯನ್ನು ಸಹಾ ಮೂರು ವಾರಗಳ ಕಾಲ ಹೆಚ್ಚುವರಿ ವಿಸ್ತರಣೆ ಮಾಡಲಾಗಿದೆ. ಈ ಬಾರಿ ಬಿಗ್ ಬಾಸ್ ಟಿ ಆರ್ ಪಿ ವಿಷಯದಲ್ಲಿ ಮೇಲೇಳಲು ಬಹಳ ಇಷ್ಟಪಡುತ್ತಿದೆ. ಅದರ ಭಾಗವಾಗಿಯೇ ವಿಐಪಿ ಸ್ಪರ್ಧಿಗಳಾಗಿ ಹಿಂದಿನ ಸೀಸನ್ ಗಳ ಸ್ಪರ್ಧಿಗಳನ್ನು ಹಾಗೂ ಮರಾಠಿ ಬಿಗ್ ಬಾಸ್ ನಲ್ಲಿ ಸದ್ದು ಮಾಡಿದ್ದ ಅಭಿಜಿತ್ ಬಿಚುಕ್ಲೇಯನ್ನು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ನೀಡಲಾಗಿದೆ.

ಹೀಗೆ ಬಂದ ಸೆಲೆಬ್ರಿಟಿ ಸ್ಪರ್ಧಿ ಸೀರಿಯಲ್ ಗಳ ಸೊಸೆ ಖ್ಯಾತಿಯ ಸೀಸನ್ 13 ರ ಸ್ಪರ್ಧಿ ದೆವೋಲಿನಾ ಭಟ್ಟಾಚಾರ್ಜಿ ಹಾಗೂ ಅಭಿಜಿತ್ ಬಿಚುಕ್ಲೇ ನಡುವೆ ಸ್ನೇಹ ಚೆನ್ನಾಗೇ ಇತ್ತು‌. ಆದರೆ ಅನಂತರ ಅಭಿಜಿತ್ ಎಲ್ಲಾ ಎಲ್ಲೆಯನ್ನು ಮೀರಿ ಆಡಿದ ಮಾತುಗಳಿಂದು ದೆವೋಲಿನಾ ಸೇರಿದಂತೆ ಮನೆಯ ಅನ್ಯ ಸದಸ್ಯರು, ನಿರೂಪಕ ಸಲ್ಮಾನ್ ಖಾನ್ ಹಾಗೂ ಪತ್ರಕರ್ತರು ಸಹಾ ಅಭಿಜಿತ್ ಬಿಚುಕ್ಲೇಯನ್ನು ತರಾಟೆಗೆ ತೆಗೆದುಕೊಂಡು, ಸಲ್ಮಾನ್ ಆತನ ಜುಟ್ಟು ಹಿಡಿದು ಮನೆಯಿಂದ ಹೊರ ಹಾಕುವುದಾಗಿ ಎಚ್ಚರಿಕೆ ಸಹಾ ನೀಡಿದ್ದರು.

ಈಗ ಇವೆಲ್ಲವುಗಳ ನಡುವೆ ಟಿಕೆಟ್ ಟು ಫಿನಾಲೇ ಟಾಸ್ಕ್ ಒಂದರಲ್ಲಿ ದೆವೋಲಿನಾ ಮತ್ತು ಅಭಿಜಿತ್ ನಡುವೆ ದೊಡ್ಡ ಗ ಲಾ ಟೆಯೇ ನಡೆದು ಹೋಗಿದೆ. ಹೌದು ಟಾಸ್ಕ್ ವೇಳೆ ದೇವೋ ಅಭಿಜಿತ್ ಕೈ ಯನ್ನು ಕಚ್ಚಿದ್ದಾರೆ. ಇದರಿಂದ ತಾ ಳ್ಮೆ ಕಳೆದು ಕೊಂಡ ಬಿಚುಕ್ಲೇ ಕ್ಯಾಮೆರಾಗಳ ಮುಂದೆ ಕೈ ತೋರಿಸಿ, ಬಿಗ್ ಬಾಸ್ ಆಟದಲ್ಲಿ ಕಚ್ಚೋದು ಒಂದು ಭಾಗವೇ?? ಅವಳನ್ನು ಈಗಲೇ ಎಲಿಮಿನೇಟ್ ಮಾಡಿ, ಮನೆಯಿಂದ ಹೊರಗೆ ಹಾಕಿ, ಬಾಗಿಲು ತೆಗೆಯಿರಿ ಇಲ್ಲವಾದರೆ ನಾನು ಅವಳನ್ನು ಕಲ್ಲಿನಿಂದ ಹೊಡೆಯುತ್ತೇನೆ ಎಂದು ಅರಚಾಡಿದ್ದಾರೆ.

ಅಷ್ಟು ಮಾತ್ರವೇ ಅಲ್ಲದೇ ಕಲ್ಲಿನಿಂದ ಆಕೆಯನ್ನು ಹೊ ಡೆ ಯಲು ಹೋಗಿದ್ದು, ಅದನ್ನು ನೋಡಿ ರಶ್ಮಿ ದೇಸಾಯಿ ಕಿರುಚಿದ್ದು, ಆಗ ಮನೆಯಲ್ಲಿರುವ ಮತ್ತೋರ್ವ ಸ್ಪರ್ಧಿ ಪ್ರತೀಕ್ ದೇಸಾಯಿ ಅವರು ಓಡಿ ಬಂದು ಬಿಚುಕ್ಲೇ ಯನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಇನ್ನು ಈ ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ಈ ಘಟನೆಯ ಬಗ್ಗೆ ಹೇಗೆ ಪ್ರತಿಕ್ರಿಯೆಯನ್ನು ನೀಡಲಿದ್ದಾರೆ ಎನ್ನುವುದು ಈಗ ಕುತೂಹಲದ ವಿಷಯವಾಗಿದೆ.

Leave A Reply

Your email address will not be published.