ಬಿಗ್ ಬಾಸ್ ಮನೆಯಲ್ಲಿ ಬರೋಬ್ಬರಿ 16 ವಾರ ಕಳೆದ ಶುಭಾ ಪೂಂಜಾ ಅವರಿಗೆ ಸಿಕ್ಕ ಸಂಭಾವನೆ ಎಷ್ಟು??
ಕನ್ನಡ ಬಿಗ್ ಬಾಸ್ ಸೀಸನ್ 8 ತನ್ನ ಮುಕ್ತಾಯದ ಹಂತವನ್ನು ಯಶಸ್ವಿಯಾಗಿ ತಲುಪಿದೆ. ಈ ಬಾರಿ ಕೊರೋನಾ ಕಾರಣದಿಂದ ಅರ್ಧದಲ್ಲೇ ನಿಂತಿತ್ತು ಬಿಗ್ ಬಾಸ್. ಆದರೆ ಸೆಕೆಂಡ್ ಇನಿಂಗ್ಸ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಭರ್ಜರಿ ಯಶಸ್ಸನ್ನು ಪಡೆದುಕೊಂಡಿದ್ದು, ಬಿಗ್ ಬಾಸ್ ಗ್ರಾಂಡ್ ಫಿನಾಲೆ ಗೆ ಇನ್ನು ಕೇವಲ ಒಂಬತ್ತು ದಿನಗಳು ಮಾತ್ರ ಉಳಿದಿದೆ. ಈಗ ಎಲ್ಲರ ಕುತೂಹಲವೂ ಫಿನಾಲೆ ವಾರದಲ್ಲಿ ಮನೆಯಲ್ಲಿ ಉಳಿಯುವ ಟಾಪ್ 5 ಸ್ಪರ್ಧಿಗಳು ಯಾರಾಗಲಿದ್ದಾರೆ ಎನ್ನುವುದು ಹಾಗೂ ಈ ಬಾರಿ ಬಿಗ್ ಬಾಸ್ ವಿನ್ನರ್ ಟ್ರೋಫಿಯನ್ನು ಯಾರು ತಮ್ಮದಾಗಿಸಿಕೊಳ್ಳಲಿದ್ದಾರೆ ಎನ್ನುವ ಕಡೆಗೆ ಇದೆ. ಇನ್ನು ನಿನ್ನೆ ಶುಭಾ ಪೂಂಜಾ ಎಲಿಮಿನೇಷನ್ ಎದುರಿಸಿದ್ದು, ಅವರು ಮನೆಯಿಂದ ಹೊರಗೆ ಬಂದಿದ್ದಾರೆ.
ಬಿಗ್ ಬಾಸ್ ಸೀಸನ್ ಪ್ರತಿಬಾರಿ ಆರಂಭವಾದಾಗಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಸೆಲೆಬ್ರಿಟಿಗಳನ್ನು ಮನೆಯೊಳಗೆ ಸ್ಪರ್ಧಿಗಳಾಗಿ ಕಳುಹಿಸಲಾಗುತ್ತದೆ. ಹೀಗೆ ಮನೆ ಒಳಗೆ ಹೋಗುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಡೆಯಿಂದ ವಾರಕ್ಕೆ ಇಷ್ಟು ಸಂಭಾವನೆ ಎನ್ನುವ ಮಾತುಕತೆ ಆಗಿರುತ್ತದೆ. ಅದೇ ರೀತಿಯಲ್ಲಿ ನಿನ್ನೆ ಮನೆಯಿಂದ ಹೊರಗಡೆ ಬಂದಂತಹ ಜನಪ್ರಿಯ ನಟಿ ಶುಭಾ ಪೂಂಜಾ ಅವರು ತಮ್ಮ ಬಿಗ್ ಬಾಸ್ ಜರ್ನಿಗೆ ಪಡೆದಂತಹ ಸಂಭಾವನೆ ಎಷ್ಟಾಗಿರಬಹುದು? ಎನ್ನುವ ಒಂದು ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇರುತ್ತದೆ. ಸ್ಯಾಂಡಲ್ ವುಡ್ ನ ಜನಪ್ರಿಯ ನಟಿಯಾಗಿರುವುದರಿಂದ ಬಹುಶಃ ಅವರಿಗೆ ದೊಡ್ಡ ಮೊತ್ತದಲ್ಲಿ ಸಂಭಾವನೆ ಸಿಕ್ಕಿರಬಹುದು ಎನ್ನುವ ಅಭಿಪ್ರಾಯ ಕೂಡಾ ಕೆಲವರದ್ದು.
ಹಾಗಿದ್ದರೆ ಶುಭಾ ಪೂಂಜಾ ಅವರು ಬಿಗ್ ಬಾಸ್ ನ ತಮ್ಮ ಇಷ್ಟು ದಿನಗಳ ಜರ್ನಿಗೆ ಪಡೆದಂತಹ ಸಂಭಾವನೆ ಎಷ್ಟಾಗಿರಬಹುದು ಎನ್ನುವುದಕ್ಕೆ ನಾವೀಗ ಉತ್ತರವನ್ನು ಕೊಡಲಿದ್ದೇವೆ. ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ ನಟಿ ಶುಭಾ ಪೂಂಜಾ ಅವರು ಇಷ್ಟು ದಿನ ಇರುತ್ತಾರೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಹೌದು ಶುಭಾ ಪೂಂಜಾ ಅವರು ಒಟ್ಟು 16 ವಾರಗಳ ಕಾಲ ಮನೆಯಲ್ಲಿ ಉಳಿದಿದ್ದರು. ಇವರಿಗೂ ಸಹ ವಾರಕ್ಕೆ ಇಷ್ಟು ಎನ್ನುವಂತೆ ಸಂಭಾವನೆ ನಿಗದಿಯಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಒಟ್ಟು16 ವಾರಗಳನ್ನು ಕಳೆದ ಶುಭಪುಂಜ ಅವರ ಕೈಗೆ ಒಳ್ಳೆಯ ಸಂಭಾವನೆಯೇ ಸೇರಿದೆ ಎನ್ನಲಾಗುತ್ತಿದೆ.
ಶುಭ ಪೂಜಾ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ವಾರ ಒಂದಕ್ಕೆ ಮೂವತ್ತು ಸಾವಿರ ರೂಪಾಯಿಗಳ ಸಂಭಾವನೆಯೂ ನಿಗದಿಯಾಗಿತ್ತು ಎನ್ನಲಾಗಿದ್ದು, ಅವರು ಒಟ್ಟು 16 ವಾರಗಳ ಕಾಲದಲ್ಲೂ ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದರಿಂದ 16 ವಾರಗಳಿಗೆ ಲೆಕ್ಕಹಾಕಿ ವಾರಕ್ಕೆ 30 ಸಾವಿರದಂತೆ ಒಟ್ಟು 4 ಲಕ್ಷದ 80 ಸಾವಿರ ರೂಪಾಯಿಗಳನ್ನು ಶುಭ ಪೂಂಜಾ ಅವರು ಸಂಭಾವನೆಯಾಗಿ ಪಡೆದಿದ್ದಾರೆ.. ಇನ್ನು ಬಿಗ್ ಬಾಸ್ ನಿಂದಾಗಿ ಕೇವಲ ಬೆಳ್ಳಿ ತೆರೆಯ ಮೇಲೆ ಮಾತ್ರವೇ ವೈವಿಧ್ಯಮಯ ಪಾತ್ರಗಳಿಂದ ಕಾಣಿಸಿಕೊಂಡಿದ್ದ ಶುಭ ಪೂಂಜಾ ಅವರ ವ್ಯಕ್ತಿತ್ವದ ಇನ್ನೊಂದು ಮುಖದ ಪರಿಚಯ ಬಹಳಷ್ಟು ಜನರಿಗೆ ಆಯಿತು.
ಶುಭ ಪೂಂಜಾ ಅವರು ಮನೆಯ ಬೇರೆಲ್ಲ ಸದಸ್ಯರಿಗಿಂತ ಬಹಳ ವಿಭಿನ್ನವಾಗಿ ತಮ್ಮ ಜರ್ನಿಯನ್ನು ಬಹಳ ಸಂತೋಷದಿಂದ ಕಳೆದಿದ್ದಾರೆ. ಮನೆಯಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಸಮಯವನ್ನು ಕಳೆಯುತ್ತಾ, ಚಿಕ್ಕ ಮಕ್ಕಳಂತೆ ಮಾತನಾಡುತ್ತಾ, ಎಲ್ಲರೊಂದಿಗೆ ತಮಾಷೆ ಮಾಡುತ್ತಾ, ಮನೆಯ ಸದಸ್ಯರ ಜೊತೆಗೆ ಹಾಡಿ, ಕುಣಿದು, ಟಾಸ್ಕ್ ಗಳನ್ನು ಮಾಡಿ ತಮ್ಮ ಈ ಬಿಗ್ ಬಾಸ್ ಜರ್ನಿಯನ್ನು ಖುಷಿಯಿಂದ ಮುಗಿಸಿಕೊಂಡು ಹೊರಗೆ ಬಂದಿದ್ದಾರೆ. ಅಲ್ಲದೇ ಅನೇಕ ಮಂದಿ ಪ್ರೇಕ್ಷಕರ ಮನಸ್ಸನ್ನು ಸಹ ಗೆಲ್ಲುವಲ್ಲಿ ಶುಭ ಅವರು ಯಶಸ್ವಿಯಾಗಿದ್ದಾರೆ.