ಬಿಗ್ ಬಾಸ್ ಮನೇಲಿ ಬಿಗ್ ಫೈಟ್: ಮಹಿಳಾ ಸದಸ್ಯರ ಪಾಡು ಹೀಗಾಗುತ್ತೆ ಅಂತ ಯಾರೂ ಊಹೆ ಮಾಡಿರ್ಲಿಲ್ಲ

Entertainment Featured-Articles News Viral Video
88 Views

ಹಿಂದಿ ಬಿಗ್ ಬಾಸ್ ಆರಂಭ ಆಗುತ್ತಿದೆ ಎಂದರೆ ಅದೊಂದು ದೊಡ್ಡ ಸಂಚಲನ ಸೃಷ್ಟಿಸುತ್ತದೆ. ಸೀಸನ್ ನಿಂದ ಸೀಸನ್ ಗೆ ಮತ್ತಷ್ಟು ಜನಪ್ರಿಯವಾಗುತ್ತಾ ಬರೋಬ್ಬರಿ 14 ಯಶಸ್ವಿ ಸೀಸನ್ ಗಳನ್ನು ಮುಗಿಸಿ ಇದೀಗ ತಂದ 15ನೇ ಸೀಸನ್ ಆರಂಭವಾಗಿದೆ. ಈ ಬಾರಿ ಬಿಗ್ ಬಾಸ್ ಫಾರೆಸ್ಟ್ ಥೀಮ್ ಅಡಿಯಲ್ಲಿ ನಡೆಯುತ್ತಿರುವ ಕಾರಣ ಬಿಗ್ ಬಾಸ್ ಮನೆಯನ್ನು ಸಹಾ ಕಾಡಿನ ರೀತಿಯಲ್ಲಿಯೇ ಡಿಸೈನ್ ಮಾಡಲಾಗಿದೆ. ಮನೆಯ ಹೊಸ ವಿನ್ಯಾಸವನ್ನು ನೋಡಿ ಬಿಗ್ ಬಾಸ್ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಈ ಬಾರಿ ಬಿಗ್ ಬಾಸ್ ಆರಂಭವಾದ ಮೊದಲನೇ ವಾರದಲ್ಲಿ ಸಾಕಷ್ಟು ಸದ್ದು ಸುದ್ದಿಯನ್ನು ಸಹಾ ಮಾಡಿದೆ.

ಮೊದಲನೆ ವಾರದಲ್ಲೇ ಅಬ್ಬರ ಎಬ್ಬಿಸಿದ್ದ ಬಿಗ್ ಬಾಸ್ ನ ಈ 2ನೇ ವಾರದಲ್ಲಿ ಆ ಸದ್ದು ಇನ್ನಷ್ಟು ಜೋರಾಗಿದೆ. ಕಳೆದ ವಾರ ಮೊದಲ ವೀಕೆಂಡ್ ಎಪಿಸೋಡ್ ನಲ್ಲಿ ಕಾರ್ಯಕ್ರಮದ ನಿರೂಪಕ, ನಟ ಸಲ್ಮಾನ್ ಖಾನ್ ಸಿಟ್ಟಿನಿಂದ ಮನೆಯ ಕೆಲವು ಸದಸ್ಯರಿಗೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದರು. ಅಲ್ಲದೇ ಅವರು ಮನೆಯ ಸದಸ್ಯರಲ್ಲಿ ಕೆಲವರಿಗೆ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎನ್ನುವ ಸಲಹೆಯನ್ನು ನೀಡಿದ್ದರು. ಆದರೆ ಈಗ ಎರಡನೇ ವಾರದಲ್ಲಿ ಮನೆಯಲ್ಲಿ ನಡೆದಿರುವ ದೊಡ್ಡ ಗಲಾಟೆ ಯೊಂದರ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಜನರು ಅತ್ಯಾಶ್ಚರ್ಯ ಪಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಒಂದು ದೊಡ್ಡ ಫೈಟ್ ನಡೆದಿದ್ದು, ಮನೆಯ ಪುರುಷ ಹಾಗೂ ಮಹಿಳಾ ಸದಸ್ಯರು ಈ ಫೈಟ್ ನ ಭಾಗವಾಗಿದ್ದಾರೆ. ಈ ವೇಳೆ ಅವರು ಒಬ್ಬರಿಗೊಬ್ಬರು ಹೊಡೆದಾಡಿ ಕೊಂಡಿದ್ದಾರೆ. ಈ ಹೊಡೆದಾಟದಲ್ಲಿ ಮಹಿಳಾ ಸ್ಪರ್ಧಿಗಳು ಕೂಡ ಏಟು ತಿಂದಿದ್ದಾರೆ. ವೈರಲ್ ಆದ ವಿಡಿಯೋವನ್ನು ನೋಡಿ ಬಿಗ್ ಬಾಸ್ ಪ್ರೇಕ್ಷಕರು ಹಾಗೂ ನೆಟ್ಟಿಗರು ಎರಡನೇ ವಾರಕ್ಕೆ ಇಂತಹದೊಂದು ಗಲಾಟೆ ನಿರೀಕ್ಷೆ ಮಾಡಿರಲಿಲ್ಲ, ಈ ಬಾರಿ ಮನೆಯ ಸದಸ್ಯರ ಆಟಗಳು ಅತಿಯಾಗಿದೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಿವುಡ್ ನಟಿ ಹಾಗೂ ಶಿಲ್ಪಾಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹಾಗೂ ಗಾಯಕಿ ಅಫ್ಸಾನಾ ನಡುವೆ ನಡೆದಿರುವ ತೀವ್ರವಾದ ಮಾತಿನ ಚಕಮಕಿ, ಅನಂತರಬತಾಳ್ಮೆ ಕಳೆದುಕೊಂಡು ಒಬ್ಬರಮೇಲೊಬ್ಬರು ಗಲಾಟೆ ಮಾಡಲು ಅವರು ಎದುರುಬದುರಾದ ಸನ್ನಿವೇಶ ಎಲ್ಲವೂ ಕೂಡ ಬಿಗ್ ಬಾಸ್ ಮನೆಯಲ್ಲಿ ಎದ್ದಿರುವ ಅಶಾಂತಿಯ ಬಿರುಗಾಳಿಯನ್ನು ಪ್ರದರ್ಶನ ಮಾಡಿವೆ. ಈ ವೀಕೆಂಡ್ ಸಲ್ಮಾನ್ ಖಾನ್ ಅವರ ಸಿಟ್ಟು ಹೇಗಿರುತ್ತದೆಯೋ ಏನೋ ಎಂದೇ ಹೇಳಲಾಗುತ್ತಿದ್ದು, ಎಲ್ಲರ ಕುತೂಹಲ ಈಗ ಬಿಗ್ ವೀಕೆಂಡ್ ಕಡೆಗೆ ಹರಿದಿದೆ.

Leave a Reply

Your email address will not be published. Required fields are marked *