ಬಿಗ್ ಬಾಸ್ ಮನೆಯಲ್ಲಿ ತನ್ನ ಮೊದಲ ಬಾಯ್ ಫ್ರೆಂಡ್ ಬಗ್ಗೆ ಶಾಕಿಂಗ್ ವಿಚಾರ ಬಾಯ್ಬಿಟ್ಟ ಶಮಿತಾ ಶೆಟ್ಟಿ

Entertainment Featured-Articles News
82 Views

ಓಟಿಟಿ ಬಿಗ್ ಬಾಸ್ ಸಖತ್ ಸದ್ದು ಮಾಡಿದೆ. ಅದರಲ್ಲೂ ವಿಶೇಷವಾಗಿ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಬಿಗ್ ಬಾಸ್ ಮನೆಯಲ್ಲಿ ಮುಖ್ಯ ಆಕರ್ಷಣೆಯಾಗಿದ್ದು, 42 ವರ್ಷವಾದರೂ ವಿವಾಹವಾಗದೇ ಒಂಟಿಯಾಗಿ ಉಳಿದಿದ್ದ ಶಮಿತಾ ತನಗೆ ಅನುರೂಪನಾದ, ತನಗೆ ಹಿಡಿಸುವಂತಹವರು ಸಿಕ್ಕಿಲ್ಲ, ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮದುವೆ, ಸಂಬಂಧಗಳ ಬಗ್ಗೆ ಗಂಡ, ಹೆಂಡತಿ ನಡುವೆ ಅಷ್ಟೊಂದು ಭಾವನಾತ್ಮಕ ಸಂಬಂಧ ಇಲ್ಲ ಎಂದು ಹಿಂದೊಮ್ಮೆ ಹೇಳಿದ್ದ ಶಮಿತಾ ಬಿಗ್ ಬಾಸ್ ಮನೆಯಲ್ಲಿ ಮತ್ತೊಬ್ಬ ಸ್ಪರ್ಧಿಯಾದ ರಾಕೇಶ್ ಬಾಪಟ್ ಅವರೊಡನೆ ಆತ್ಮೀಯರಾಗಿದ್ದಾರೆ.

ಇಬ್ಬರ ನಡುವೆ ಏನೋ ಇದೆ ಎಲ್ಲರೂ ಭಾವಿಸುವಾಗಲೇ, ಅವರ ಈ ಆತ್ಮೀಯತೆಯನ್ನು ಮೆಚ್ಚುವಾಗಲೇ ಇಬ್ಬರ ನಡುವೆ ಎಲ್ಲಾ ಸರಿಯಾಗಿಲ್ಲ ಎನ್ನುವ ಅನುಮಾನದ ಹೊಗೆ ಆಡಿದೆ. ಅದೂ ಸಾಲದೆಂಬಂತೆ ಶಮಿತಾ ತಮ್ಮ ಹಳೆಯ ಬಾಯ್ ಫ್ರೆಂಡ್ ಬಗ್ಗೆ ಬಾಯಿ ಬಿಡುವ ಮೂಲಕ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದ್ದಾರೆ.‌ ಶಮಿತಾ ಈ ಮೊದಲು ತಾನು ರಿಲೇಶನ್ ಶಿಪ್ ನಲ್ಲಿ ಇದ್ದುದ್ದಾಗಿ ಬಹಿರಂಗ ಪಡಿಸಿದ್ದಾರೆ.

ಶಮಿತಾ ಹೇಳಿದಂತಹ ಈ ಹೊಸ ವಿಷಯವನ್ನು ಕೇಳಿ ಅನೇಕರು ಶಾ ಕ್ ಆಗಿದ್ದಾರೆ. ಶಮಿತಾ ಅವರು ರಿಲೇಶನ್ ಶಿಪ್ ನಲ್ಲಿ ಇದ್ದುದ್ದು ನಿಜವಾದರೂ, ಈಗ ಅವರ ಬಾಯ್ ಫ್ರೆಂಡ್ ಇಲ್ಲ. ಶಮಿತಾ ಅವರು ಶೋ ನಲ್ಲಿ ತಮ್ಮ ಸಹ ಸ್ಪರ್ಧಿಯಾಗಿರುವಂತಹ ನೇಹಾ ಬಸೀನ್ ಬಳಿಯಲ್ಲಿ ಈ ವಿಚಾರಗಳನ್ನು ಹಂಚಿಕೊಂಡು ನಮ್ಮ ಮನಸ್ಸಿನಲ್ಲಿದ್ದಂತಹ ವಿಚಾರಗಳನ್ನು ಅವರು ಬಹಿರಂಗ ಪಡಿಸಿದ್ದಾರೆ.

ಶಮಿತಾ ಅವರು, “ನನ್ನ ಮೊದಲ ಬಾಯ್ ಫ್ರೆಂಡ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಅದಾದ ನಂತರ ತಾನು ತನ್ನ ಜೀವನದಲ್ಲಿ ಇನ್ನಾರಿಗೂ ಸಹಾ ಪ್ರವೇಶವನ್ನು ನೀಡಿರಲಿಲ್ಲ. ಅದೆಲ್ಲಾ ಇಷ್ಟು ವರ್ಷ ಹಿಡಿಯಿತು” ಎನ್ನುವ ಮೂಲಕ ವರ್ಷಗಳ ನಂತರ ತಾನು ರಾಕೇಶ್ ಬಾಪಟ್ ಅವರ ಜೊತೆಗೆ ಆತ್ಮೀಯವಾಗಿರುವ ವಿಚಾರವನ್ನು ಅವರು ಒಪ್ಪಿಕೊಳ್ಳುವ ಮೂಲಕ ಮನಸ್ಸಿನಲ್ಲಿ ರಾಕೇಶ್ ಪರವಾಗಿ ತಮಗಿರುವ ಒಲವು ನಿಜ ಎಂದಿದ್ದಾರೆ.

ರಾಕೇಶ್ ಮತ್ತು ಶಮಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಹತ್ತಿರವಾಗಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಸಹಾ ಇಬ್ಬರ ನಡುವಿನ ಭಾವನೆಗಳನ್ನು ನೋಡಿ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದರು. ಆದರೆ ಇತ್ತೀಚಿಗೆ ಇಬ್ಬರ ನಡುವೆ ಜಗಳಗಳು ನಡೆಯುತ್ತಿದೆ. ಇದು ಖುದ್ದು ಈ ಇಬ್ಬರನ್ನೂ ಸಹಾ ಚಿಂತೆಗೆ ದೂಡಿದ್ದು, ಇಬ್ಬರು ಬೇಸರ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮನಸ್ಸಿನ ಮಾತನ್ನು ಹೇಳಲು ಅವಕಾಶ ಮಾಡಿಕೊಟ್ಟಾಗ, ರಾಕೇಶ್ ಶಮಿತಾ ಅವರ ಬಗ್ಗೆ ಮಾತನಾಡುತ್ತಾ ಭಾವುಕರಾದರು, ಶಮಿತಾ ಮನಸ್ಸು ಶುದ್ದ, ಆಕೆಯನ್ನು ತಾನು ತುಂಬಾ ಇಷ್ಟಪಡುತ್ತೇನೆ, ಶೋ ಮುಗಿದ ಮೇಲೂ ಸಹಾ ಅವರೊಡನೆ ಸಂಪರ್ಕದಲ್ಲಿ ಇರುತ್ತೇನೆ ಎನ್ನುವ ಮಾತುಗಳನ್ನು ಹೇಳಿಕೊಂಡಿದ್ದರು.

Leave a Reply

Your email address will not be published. Required fields are marked *