ಬಿಗ್ ಬಾಸ್ ಮನೆಯಲ್ಲಿ ಖುಲ್ಲಂಖುಲ್ಲಾ ರೊಮ್ಯಾನ್ಸ್: ಜೋಡಿಯ ಕ್ಲಾಸ್ ತೆಗೆದುಕೊಂಡ ಸಲ್ಮಾನ್ ಖಾನ್
ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಆರಂಭವಾಗುತ್ತಿದೆ ಎಂದೊಡನೆ ಅದೊಂದು ಕುತೂಹಲವನ್ನು ಹುಟ್ಟು ಹಾಕುತ್ತದೆ. ಹಿಂದಿಯಲ್ಲಿ ಈಗಾಗಲೇ ಯಶಸ್ವಿ ಹದಿನಾಲ್ಕು ಸೀಸನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಇದೀಗ ತನ್ನ ಹದಿನೈದನೇ ಸೀಸನ್ ಆರಂಭಿಸಿದ್ದು, ಸೀಸನ್ ಆರಂಭವಾಗಿ ಎರಡು ವಾರ ಮುಗಿಯುವ ಮೊದಲೇ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಒಂದಷ್ಟು ಟೀಕೆಗಳಿಗೆ ಗುರಿಯಾಗಿದೆ. ಮನೆಯ ಸದಸ್ಯರು ಮೂರನೇ ವಾರಕ್ಕೆ ಎಂಟ್ರಿ ನೀಡುವ ಮೊದಲೇ ನೀತಿ ನಿಯಮಗಳನ್ನು ಗಾಳಿಗೆ ತೂರಿದಂತೆ ವರ್ತಿಸುತ್ತಿದ್ದಾರೆ.
ಹಿಂದಿ ಬಿಗ್ ಬಾಸ್ ನ ಪ್ರತಿ ಸೀಸನ್ ಕೂಡಾ ಒಂದಷ್ಟು ಕಾಂಟ್ರವರ್ಸಿ, ಒಂದಷ್ಟು ರೊಮ್ಯಾನ್ಸ್ ಹಾಗೂ ಒಂದಷ್ಟು ಬೈಗುಳ, ಜಗಳಗಳಿಗೆ ವೇದಿಕೆಯಾಗುತ್ತದೆ. ಪ್ರಾದೇಶಿಕ ಭಾಷೆಗಳ ಬಿಗ್ ಬಾಸ್ ನಲ್ಲಿ ಇವೆಲ್ಲಾ ಒಂದು ಮಿತಿಯೊಳಗೆ ನಡೆದರೆ ಹಿಂದಿಯಲ್ಲಿ ಆ ಮಿತಿಯನ್ನು ದಾಟಿ ಎಲ್ಲಾ ನಡೆದು ವಿ ವಾದಗಳನ್ನು ಹುಟ್ಟು ಹಾಕುತ್ತದೆ. ಈ ಬಾರಿ ಕೂಡಾ ಇದೆಲ್ಲಾ ಮೊದಲ ವಾರದಲ್ಲೇ ನಡೆದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ, ನೆಟ್ಟಿಗರು ಮನೆಯ ಸದಸ್ಯರ ನಡೆ ಅತಿಯಾಯ್ತು ಎಂದು ಟೀಕೆ ಮಾಡಿದ್ದಾರೆ.
ಮೊದಲ ವಾರದಲ್ಲೇ ಬಿಗ್ ಹೌಸ್ ನ ಪ್ರಾಪರ್ಟಿ ಡ್ಯಾಮೇಜ್, ಮನೆಯ ಸದಸ್ಯರು ಹಿಗ್ಗಾಮುಗ್ಗಾ ಹೊಡೆದಾಟಗಳ ನಡುವೆಯೇ ಮನೆಯ ಇಬ್ಬರು ಸದಸ್ಯರ ಎಲ್ಲಾ ಎಲ್ಲೆಗಳನ್ನು ಮೀರಿದ ರೋಮ್ಯಾನ್ಸ್ ಕೂಡಾ ದೊಡ್ಡ ಸಂಚಲನ ಸೃಷ್ಟಿಸಿದೆ. ಹೌದು ಬಿಗ್ ಬಾಸ್ ಮನೆಯ ಸದಸ್ಯರಾದ ಇಶಾನ್ ಸೆಹಗಲ್ ಹಾಗೂ ಮಾಯೆಷಾ ಅಯ್ಯರ್ ನಡುವೆ ಎರಡನೇ ದಿನದಿಂದಲೇ ಪ್ರೇಮ ಪುರಾಣ ಆರಂಭವಾಗಿದ್ದು, ಎರಡನೇ ವಾರದಲ್ಲಿ ಅವರ ರೋಮ್ಯಾನ್ಸ್ ಎಲ್ಲೆಗಳನ್ನು ಮೀರಿ ಹೋಗಿದೆ.
ಇಶಾನ್ ಹಾಗೂ ಮಾಯೆಷಾ ಒಬ್ಬರನ್ನೊಬ್ಬರು ಮುದ್ದಾಡಿರುವ, ಚುಂಬಿಸಿರುವ ವೀಡಿಯೋ ತುಣುಕುಗಳು ವೈರಲ್ ಆಗಿದೆ. ನೆಟ್ಟಿಗರು ಇವರನ್ನು ಇದು ಮಿತಿಮೀರಿದ ವರ್ತನೆ ಎಂದರೆ, ಕೆಲವು ಸೆಲೆಬ್ರಿಟಿಗಳು ಸಹಾ ಅವರಿಬ್ಬರ ನಡುವೆ ಇರುವುದು ಫೇಕ್ ಲವ್ ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಶೋ ನ ನಿರೂಪಕ ಸಲ್ಮಾನ್ ಖಾನ್ ಕೂಡಾ ಇವರಿಬ್ಬರ ನಡುವಿನ ಹದ್ದು ಮೀರಿದ ರೋಮ್ಯಾನ್ಸ್ ಗೆ ಖಡಕ್ ಎಚ್ಚರಿಕೆ ಕೂಡಾ ದಕ್ಕಿದೆ.
ಹೌದು, ಎರಡನೇ ವಾರದ ವೀಕೆಂಡ್ ಎಪಿಸೋಡ್ ನಲ್ಲಿ ನಟ ಸಲ್ಮಾನ್ ಖಾನ್ ಅವರು ಇಶಾನ್ ಮತ್ತು ಮಾಯೆಷಾಗೆ ನ್ಯಾಷನಲ್ ಟಿವಿಯಲ್ಲಿ ರೋಮಾನ್ಸ್ ಮಾಡಬೇಕು ಅಂತ ನಿರ್ಧಾರ ಮಾಡಿದ್ರೆ ಮಾಡಿ, ಅದಕ್ಕೆ ನೀವೆ ಜವಾಬ್ದಾರರು. ಭವಿಷ್ಯದಲ್ಲಿ ಒಂದು ವೇಳೆ ನೀವು ಜೊತೆಯಾಗಿಲ್ಲದಿದ್ದರೆ ಆಗ ಇದು ಹೇಗೆ ಕಾಣುತ್ತೆ ಯೋಚನೆ ಮಾಡಿ, ತೆರೆಯ ಮೇಲೆ ನಿಮ್ಮ ವರ್ತನೆ ಸರಿಯಾಗಿಲ್ಲ. ಬಿಗ್ ಬಾಸ್ ಮನೆಯಲ್ಲಿ ಎಷ್ಟು ಕ್ಯಾಮರಾಗಳಿವೆ, ಅದರ ಹಿಂದೆ ಎಷ್ಟು ಜನ ಕೆಲಸ ಮಾಡ್ತಾ ಇದ್ದಾರೆ, ನಿಮ್ಮನ್ನು ಎಷ್ಟು ಜನ ನೋಡ್ತಾ ಇದ್ದಾರೆ ಎನ್ನುವ ಅರಿವು ಇರಲಿ ಎಂದಿದ್ದಾರೆ ಸಲ್ಮಾನ್ ಖಾನ್.
ಅಲ್ಲದೇ ಸಲ್ಮಾನ್ ಖಾನ್ ಅವರು ನೀವು ಇನ್ನು ಮುಂದೆ ನಾನು ಹೇಳಿದ ವಿಚಾರವನ್ನು ತಲೆಯಲ್ಲಿ ಇಟ್ಟುಕೊಂಡು ಹೆಜ್ಜೆ ಇಡುವಿರಿ, ನಿಮ್ಮ ವರ್ತನೆ ಸುಧಾರಿಸಿ ಕೊಳ್ಳುವಿರಿ ಎಂದು ನಂಬುತ್ತೇನೆ. ಇದರ ಮೇಲೆ ನಿಮ್ಮ ಇಷ್ಟ ಎಂದು ಹೇಳಿದ್ದಾರೆ. ಅಲ್ಲದೇ ಇದೇ ಮಾಯೇಷಾ ಗೆ ಮನೆಯಲ್ಲಿ ಸ್ಮೋಕಿಂಗ್ ರೂಮ್ ಬಿಟ್ಟು ಎಲ್ಲೆಂದರಲ್ಲಿ ಸ್ಮೋಕ್ ಮಾಡುವುದಕ್ಕೂ ಸಹಾ ಸಲ್ಮಾನ್ ಖಾನ್ ಖಡಕ್ ಆಗಿ ಎಚ್ಚರಿಕೆ ನೀಡಿ, ಮನೆಯ ನಿಯಮಗಳ ಪಾಲನೆ ಮಾಡಬೇಕು ಎಂದಿದ್ದಾರೆ.