ಬಿಗ್ ಬಾಸ್ ಮನೆಗೆ ಹೋಗೋಕೆ ಖತರ್ನಾಕ್ ಐಡಿಯಾ ಮಾಡಿದ ಕಾಫಿ ನಾಡು ಚಂದು: ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾ??
ಬಿಗ್ ಬಾಸ್ ಇದೇ ಮೊದಲ ಬಾರಿ ಟಿವಿ ಗಿಂತ ಮೊದಲು ಓಟಿಟಿಯಲ್ಲಿ ತನ್ನ ಮೊದಲ ಸೀಸನ್ ಆರಂಭ ಮಾಡುತ್ತಿದೆ ಎಂದಾಗ ಸಹಜವಾಗಿಯೇ ಒಂದು ಅಚ್ಚರಿಯ ಜೊತೆಗೆ ಕುತೂಹಲ ಸಹಾ ಮೂಡಿತ್ತು. ಅಲ್ಲದೇ ಓಟಿಟಿ ಬಿಗ್ ಬಾಸ್ ಗೆ ಸ್ಪರ್ಧಿಗಳಾಗಿ ಯಾರೆಲ್ಲಾ ಬರಲಿದ್ದಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಗಳನ್ನು ಮನೆಯೊಳಗೆ ಸ್ಪರ್ಧಿಗಳಾಗಿ ಕಳುಹಿಸಲಾಗುತ್ತದೆ ಎನ್ನುವ ಒಂದು ಸುದ್ದಿ ಕೂಡಾ ಹೊರ ಬಂದಾಗ ಅಂತಹವರಲ್ಲಿ ಒಂದು ಹೆಸರು ಬಹಳ ಸದ್ದು ಮಾಡಿತ್ತು.
ಹೌದು, ಕರ್ನಾಟಕದಲ್ಲಿ ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿದ್ದು ಯಾರು ಎಂದರೆ ಅನುಮಾನವೇ ಇಲ್ಲದೇ ಕೇಳಿ ಬರುವ ಉತ್ತರ ಕಾಫಿ ನಾಡು ಚಂದು ಹೆಸರು. ಕಾಫಿ ನಾಡು ಚಂದು ಯಾವ ಮಟ್ಟಕ್ಕೆ ಸಂಚಲನ ಸೃಷ್ಟಿಸಿದ್ದಾರೆ ಎಂದರೆ ಇನ್ಸ್ಟಾಗ್ರಾಂ ನಲ್ಲಿ ಸಿನಿಮಾ ಮತ್ತು ಟಿವಿ ಸೆಲೆಬ್ರಿಟಿಗಳನ್ನು ಸಹಾ ಹಿಂದಿಕ್ಕುವ ಮಟ್ಟಕ್ಕೆ ಫಾಲೋಯರ್ಸ್ ಅನ್ನು ಪಡೆದುಕೊಂಡಿದ್ದಾರೆ. ಆದ್ದರಿಂದಲೇ ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ ಕಾಫಿ ನಾಡು ಚಂದು ಪಕ್ಕಾ ಬಿಗ್ ಬಾಸ್ ಗೆ ಸ್ಪರ್ಧಿಯಾಗುತ್ತಾರೆ ಎನ್ನಲಾಯಿತು, ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲೂ ಅವರ ಹೆಸರು ಇತ್ತು.
ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಕಾಫಿ ನಾಡು ಚಂದು ಬಿಗ್ ಬಾಸ್ ಗೆ ಹೋಗಬೇಕು ಎಂದು ಅಭಿಪ್ರಾಯಗಳನ್ನು ಹಂಚಿಕೊಂಡರು. ಆದರೆ ಬಿಗ್ ಬಾಸ್ ಓಟಿಟಿ ಆರಂಭವಾದಾಗ ಮಾತ್ರ ಎಲ್ಲರಿಗೂ ಒಂದು ನಿರಾಶೆ ಎದುರಾಯಿತು. ಏಕೆಂದರೆ ಎಲ್ಲರೂ ನಿರೀಕ್ಷಿಸಿದ್ದ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಯೊಳಗೆ ಹೋಗಲಿಲ್ಲ. ಅವರಿಗೆ ಬಿಗ್ ಬಾಸ್ ಗೆ ಆಹ್ವಾನ ನೀಡಿಲ್ಲ ಎಂದು ತಿಳಿದಾಗ ಅನೇಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಕಾಫಿ ನಾಡು ಚಂದು ಅವರ ಗ್ರ್ಯಾಂಡ್ ಎಂಟ್ರಿ ನಿರೀಕ್ಷೆ ಮಾಡಿದ್ದವರಿಗೆ ಸಿಕ್ಕಾಪಟ್ಟೆ ನಿರಾಸೆ ಮೂಡಿತು.
ಆದರೆ ಈಗ ಕಾಫಿ ನಾಡು ಚಂದು ಅವರು ಬಿಗ್ ಬಾಸ್ ಮನೆಗೆ ಬರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಾಫಿ ನಾಡು ಚಂದು ಸಹಾ ಬಿಗ್ ಬಾಸ್ ಮನೆಗೆ ಹೋಗುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಆದರೆ ಅವರ ಆಸೆ ಕೈಗೂಡಲಿಲ್ಲ. ಆದರೆ ಕಾಫಿ ನಾಡು ಚಂದು ಅಷ್ಟಕ್ಕೆ ಸುಮ್ಮನಾಗಿಲ್ಲ. ಅವರು ತಾವೇ ಹೊಸ ಅಭಿಯಾನವೊಂದನ್ನು ಶುರು ಮಾಡಿದ್ದಾರೆ.ಜನರ ಬಳಿ ತಾವೇ ತೆರಳಿ ಕಾಫಿ ನಾಡು ಚಂದು ಬಿಗ್ ಬಾಸ್ ಗೆ ಹೋಗಬೇಕು, ಅವರನ್ನು ಕಳುಹಿಸುವ ಹಾಗೆ ಜನರಿಂದ ಹೇಳಿಸಿ ವೀಡಿಯೋ ಮಾಡಿಸಿ ಅದನ್ನು ಶೇರ್ ಮಾಡಿಕೊಳ್ಳುತ್ತಿದ್ದು, ದೊಡ್ಡ ಚರ್ಚೆಗೆ ಅವರು ಕಾರಣರಾಗಿದ್ದಾರೆ.