ಬಿಗ್ ಬಾಸ್ ಮನೆಗೆ ಸ್ಪೈಡರ್ ವುಮೆನ್ ರೂಪದಲ್ಲಿ ರಾಖಿ ಎಂಟ್ರಿ?? ಫೋಟೋ ನೀಡುತ್ತಿದೆಯಾ ಸುಳಿವು

Written by Soma Shekar

Published on:

---Join Our Channel---

ಬಾಲಿವುಡ್ ನ ಡ್ರಾಮಾ ಕ್ವೀನ್ ಎನ್ನುವ ಹೆಸರನ್ನು ಪಡೆದುಕೊಂಡಿರುವ ನಟಿ ರಾಖಿ ಸಾವಂತ್ ಯಾವ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟರೆ ಆ ಕಾರ್ಯಕ್ರಮದ ಟಿ ಆರ್ ಪಿ ಹೆಚ್ಚಾಗುತ್ತದೆ ಎನ್ನುವ ಮಾತು ಬಾಲಿವುಡ್ ನಲ್ಲಿ ಇದೆ. ರಾಖಿ ಇರುವ ಕಡೆ ಎಂಟರ್ಟೈನ್ಮೆಂಟ್ ಕೊರತೆಯಿಲ್ಲ ಎನ್ನುವುದು ಒಂದು ನಂಬಿಕೆಯಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಬಾರಿ ಅಂದರೆ ಹಿಂದಿಯ ಬಿಗ್ ಬಾಸ್ ಸೀಸನ್ ಹದಿನಾಲ್ಕರ ವೇಳೆಯಲ್ಲೂ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯೇ ಇಲ್ಲ ಎನ್ನುವ ಮಾತುಗಳು ಮಾಧ್ಯಮಗಳಲ್ಲಿ ಕೇಳಿ ಬಂದ ಕೂಡಲೇ ಬಿಗ್ ಬಾಸ್ ಆಯೋಜಕರು ರಾಖಿ ಸಾವಂತ್ ಅವರನ್ನು ಮನೆಯೊಳಗೆ ಪ್ರವೇಶ ಮಾಡಿಸಿದ್ದರು. ರಾಖಿ ಪ್ರವೇಶದ ನಂತರ ಬಿಗ್ ಬಾಸ್ ಸೀಸನ್ 14 ರಲ್ಲಿ ಬಹಳಷ್ಟು ಹೈಡ್ರಾಮಗಳೇ ನಡೆದುಹೋದವು. ಅಲ್ಲದೇ ಶೋ ಮಧ್ಯದಲ್ಲಿ ಮನೆ ಪ್ರವೇಶಿಸಿದ್ದ ರಾಖಿ ಟಾಪ್ ಫೈವ್ ಕಂಟೆಸ್ಟೆಂಟ್ ಆಗಿದ್ದು ವಿಶೇಷ.

ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರತಿದಿನ ರಾಖಿ ಸಾವಂತ್ ಅವರ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ರಾಖಿ ಎಲ್ಲೇ ಹೋದರೂ ಮಾದ್ಯಮಗಳವರು ರಾಖಿಯ ಹಿಂದೆ ಇರುತ್ತಾರೆ. ಈಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾ ಗಳಲ್ಲಿ ರಾಖಿ ಸಾವಂತ್ ಅವರ ಹೊಸ ಫೋಟೋಗಳು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಹೌದು ವೈರಲ್ ಆಗಿರುವ ಫೋಟೋಗಳಲ್ಲಿ ರಾಖಿ ಸಾವಂತ್ ಸ್ಪೈಡರ್ ವುಮೆನ್ ಗೆಟಪ್ ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ರಾಖಿಯ ಈ ಹೊಸ ಅವತಾರವನ್ನು ನೋಡಿ ನೆಟ್ಟಿಗರು ಕೂಡ ಆಶ್ಚರ್ಯ ಪಡುತ್ತಿದ್ದಾರೆ.

ರಾಖಿ ಸ್ಪೈಡರ್ ವುಮೆನ್ ಗೆಟಪ್ ನಲ್ಲಿ ಫೋಟೋ ನಡೆಸುತ್ತಿರುವುದು ಕಂಡು ಬಂದಿದ್ದು ಬಹುಶಃ ಇದು ಯಾವುದೋ‌ ಶೋ ಗಾಗಿ ನಡೆಯುತ್ತಿರುವ ಚಿತ್ರೀಕರಣ ಇರಬೇಕು ಎನ್ನಲಾಗಿದೆ. ಈ ವೇಳೆ ರಾಖಿ ಸಾವಂತ್ ಇದೇ ಮೊದಲ ಬಾರಿಗೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಾರಂಭವಾಗಿರುವ ಬಿಗ್ ಬಾಸ್ ಗೆ ನನಗೂ ಆಹ್ವಾನ ನೀಡಿ ಬಿಗ್ ಬಾಸ್, ನನ್ನನ್ನು ಮನೆಯೊಳಗೆ ಕಳಿಸಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ನನ್ನನ್ನು ಮನೆಯೊಳಗೆ ಕಳುಹಿಸಿದರೆ ಜೇಡರ ಬಲೆಯಿಂದ ಎಲ್ಲರನ್ನೂ ಎತ್ತಿ ಮನೆಯಿಂದ ಹೊರ ಹಾಕುತ್ತೇನೆ ಎಂದು ಹೇಳಿದ್ದಾರೆ.

Leave a Comment