ಬಿಗ್ ಬಾಸ್ ಮನೆಗೆ ರೇ” ಪ್ ಪ್ರಕರಣದ ಆ”ರೋಪಿ ಎಂಟ್ರಿ?? ಈ ಬಗ್ಗೆ ಆಯೋಜಕರು ಹೇಳಿದ್ದೇನು??

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ 8 ಕಳೆದ ಭಾನುವಾರ ವಷ್ಟೇ ಮುಗಿದಿದೆ. ಸೀಸನ್ 9 ಯಾವಾಗ ?? ಎನ್ನುವುದು ಸದ್ಯಕ್ಕೆ ಬಿಗ್ ಬಾಸ್ ಅಭಿಮಾನಿಗಳ ಕುತೂಹಲವಾಗಿದೆ. ಇನ್ನು ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ತೆಲುಗಿನ ಬಿಗ್ ಬಾಸ್ ಸೀಸನ್ 5 ರ ದಿನಗಣನೆ ಪ್ರಾರಂಭವಾಗಿದೆ. ತೆಲುಗು ಬಿಗ್ ಬಾಸ್ ಸೀಸನ್ ಐದರ ಪ್ರಾರಂಭದ ಕುರಿತಾಗಿ ವಾಹಿನಿಯು ಈಗಾಗಲೇ ಪ್ರಮೋ ಒಂದನ್ನು ಬಿಡುಗಡೆ ಮಾಡಿದೆ. 5ನೇ ಸೀಸನ್ ಅನ್ನೂ ತೆಲುಗಿನ ಖ್ಯಾತ ನಟ ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಪ್ರೋಮೋ ಚಿತ್ರೀಕರಣವನ್ನು ಕೂಡಾ ಮುಗಿಸಿದ್ದಾರೆ ಎನ್ನಲಾಗಿದೆ. ಇನ್ನು ಬಿಗ್ ಬಾಸ್ ನ 5ನೇ ಆವೃತ್ತಿ ಬರಲಿದೆ ಎನ್ನುವ ವಿಷಯ ಸುದ್ದಿಯಾದ ಕೂಡಲೇ ಸೋಶಿಯಲ್ ಮೀಡಿಯಾಗಳು ಹಾಗೂ ಮಾದ್ಯಮಗಳಲ್ಲಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳಾಗಿ ಬರಲಿದ್ದಾರೆ ಎನ್ನುವ ನಿರೀಕ್ಷಿತ, ಸಂಭಾವ್ಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಒಂದಷ್ಟು ಹೆಸರುಗಳು ಸುತ್ತುತ್ತಿದೆ.

ನಿರೀಕ್ಷಿತ ಸ್ಪರ್ಧಿಗಳ ಹೆಸರಿನಲ್ಲಿ ಟಿಕ್ ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ್ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಡಿದ್ದು, ಇದು ಸಾಕಷ್ಟು ಸದ್ದನ್ನು ಮಾಡಿರುವುದು ಮಾತ್ರವಲ್ಲದೇ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಫನ್ ಬಕೆಟ್ ಭಾರ್ಗವ್ ಬಿಗ್ ಬಾಸ್ ಮನೆಯನ್ನು ಪ್ರವೇಶಿಸುವುದು ಬಹುತೇಕ ಖಚಿತ ಎನ್ನುವ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಬಿಗ್ ಬಾಸ್ ನ ಆಯೋಜಕರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಅಲ್ಲದೇ ಆಯೋಜಕರಿಗೆ ಭಾರ್ಗವ್ ಅವರನ್ನು ಕರೆತರುವುದು ಇಷ್ಟವಿಲ್ಲ ಎನ್ನುವ ಮಾತು ಕೂಡಾ ಕೇಳಿಬಂದಿದೆ.

ಫನ್ ಬಕೆಟ್ ಭಾರ್ಗವ್ ಎಂದೇ ದೊಡ್ಡ ಹೆಸರಾಗಿರುವ ಭಾರ್ಗವ ಅವರು ಅಪ್ರಾಪ್ತೆಯ ಮೇಲೆ ಲೈಂ” ಗಿ ಕ ದೌ” ರ್ಜ ನ್ಯವನ್ನು ನಡೆಸಿ ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದಾರೆ ಎನ್ನುವ ಆರೋಪವನ್ನು ಎದುರಿಸಿ ಜೈ ಲ‌ ನ್ನು ಸೇರಿದ್ದರು. ಪ್ರಸ್ತುತ ಜಾಮೀನನ್ನು ಪಡೆದು ಹೊರಗೆ ಬಂದಿರುವ ಭಾರ್ಗವ್ ಅವರು ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರೆ ಎನ್ನುವ ಸುದ್ದಿ ಬಹಳಷ್ಟು ಚರ್ಚೆಯನ್ನು ಹುಟ್ಟು ಹಾಕಿದ, ಬೆನ್ನಲ್ಲೇ ಆಯೋಜಕರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಭಾರ್ಗವ್ ಅವರ ಪ್ರಕರಣವು ಆಂಧ್ರ ರಾಷ್ಟ್ರಗಳಲ್ಲಿ ಸಾಕಷ್ಟು ಸಂಚಲನವನ್ನೇ ಹುಟ್ಟುಹಾಕಿದ್ದು ಮಾತ್ರವೇ ಅಲ್ಲದೇ ಎಲ್ಲರಿಗೂ ಅದೊಂದು ಶಾ ಕ್ ನೀಡಿತ್ತು.

ಈ ಹಿನ್ನೆಲೆಯಲ್ಲಿ ಭಾರ್ಗವ್ ನನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆತಂದರೆ ಅದರಿಂದ ಶೋಗೆ ಅವಮಾನವಾಗುತ್ತದೆ ಎನ್ನುವ ಕಾರಣದಿಂದ ಆಯೋಜಕರಿಗೆ ಅವರನ್ನು ಕರೆತರುವುದು ಸ್ವಲ್ಪವೂ ಇಷ್ಟವಿಲ್ಲ ಎನ್ನುವ ವಿಷಯ ತಿಳಿದುಬಂದಿದೆ. ಪ್ರಸ್ತುತ ವಿಜೆ ಸನ್ನಿ, ಆರ್ ಜೆ ಕಾಜಲ್, ಲೋಬೋ, ಮಾನಸ್, ಸಿರಿ ಹನ್ಮಂತ್, ಆಂಕರ್ ರವಿ, ಷಣ್ಮುಖ ಜಶ್ವಂತ್, ಇಶಾ ಚಾವ್ಲಾ, ಶ್ವೇತಾ, ನಟಿ ಪ್ರಿಯಾ, ಟ್ರಾನ್ಸ್ ಜೆಂಡರ್ ಪ್ರಿಯಾಂಕಾ ಸಿಂಗ್, ವರ್ಷಿಣಿ, ಯಾನಿ ಮಾಸ್ಟರ್, ಕಾರ್ತಿಕದೀಪಂ ಭಾಗ್ಯ ಅಲಿಯಾಸ್ ಉಮಾ, ನಟಿ ಲಹರಿ, ಪ್ರಿಯಾಂಕ, ನವ್ಯಸ್ವಾಮಿ, ಯೂಟ್ಯೂಬರ್ ನಿಖಿಲ್ ಮತ್ತು ಸಂದೀಪ್ ಪತ್ನಿ ಜ್ಯೋತಿ ಸಂಭಾವ್ಯ ಬಿಗ್ ಬಾಸ್ ಸ್ಪರ್ಧಿಗಳು ಎನ್ನಲಾಗಿದೆ.

Leave a Comment