ಬಿಗ್ ಬಾಸ್ ಮನೆಗೆ ಅರವಿಂದ್ ಗಾಗಿ ಬಂದ್ರು ಒಬ್ಬ ವಿಶೇಷ ಅತಿಥಿ: ನೋಡಿ ಭಾವುಕರಾದ ಅರವಿಂದ್

0 1

ಬಿಗ್ ಬಾಸ್ ಸೀಸನ್ ಎಂಟರ ಫಿನಾಲೆ ವಾರ ಆರಂಭವಾಗಿದೆ. ಇನ್ನು ಈ ವಾರಾಂತ್ಯದ ಎಪಿಸೋಡ್ ಗಳಲ್ಲಿ ಶುಭಾ ಪೂಂಜಾ ಹಾಗೂ ಶಮಂತ್ ಹೊರಗಡೆ ಬಂದ ನಂತರ ಮನೆಯಲ್ಲಿ ಈಗ ಆರು ಜನ ಅಂದರೆ ಪ್ರಶಾಂತ್ ಸಂಬರ್ಗಿ, ಅರವಿಂದ್ ಕೆಪಿ, ಮಂಜು ಪಾವಗಡ, ದಿವ್ಯ ಸುರೇಶ್, ದಿವ್ಯ ಉರುಡುಗ ಮತ್ತು ವೈಷ್ಣವಿ ಗೌಡ ಮನೆಯಲ್ಲಿ ಉಳಿದಿದ್ದಾರೆ. ಈ ಆರು ಜನರಲ್ಲಿ ಒಬ್ಬರು ಮನೆಯಿಂದ ಹೊರಗೆ ಬರುವುದು ಕೂಡಾ ಖಚಿತ,‌ ಅದು ಕೂಡಾ ನಾಳೆ ಮನೆಯಿಂದ ಒಬ್ಬರು ಹೊರಗೆ ಬರಲಿದ್ದಾರೆ ಎನ್ನಲಾಗಿದ್ದು, ಆ ಒಬ್ಬರು ಯಾರು? ಎನ್ನುವುದು ಈಗ ದೊಡ್ಡ ಪ್ರಶ್ನೆ. ಅಲ್ಲಿಗೆ ಬಿಗ್ ಬಾಸ್ ನ ಫಿನಾಲೆ ವಾರದ ಟಾಪ್ ಐದು ಜನ ಸದಸ್ಯರು ಯಾರಾಗಲಿದ್ದಾರೆ ಎನ್ನುವುದು ನಮಗೆ ತಿಳಿಯಲಿದೆ. ಇನ್ನು ಇವೆಲ್ಲವುಗಳ ನಡುವೆಯೇ ಬಿಗ್ ಬಾಸ್ ಮನೆಯಲ್ಲಿ ಇರುವ ಸದಸ್ಯರಿಗೆ ಒಂದು ಸರ್ಪ್ರೈಸ್ ಅನ್ನು ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕಿವಿಯೊಂದನ್ನು ಇಟ್ಟು ಅದರಲ್ಲಿ ಮನೆಯ ಸದಸ್ಯರು ತಮ್ಮ ಇಚ್ಛೆಯನ್ನು ಹೇಳುವಂತೆ ಸೂಚನೆಯನ್ನು ನೀಡಿದ್ದರು. ಈ ವೇಳೆ ಅರವಿಂದ್ ಹೇಳಿದ ಅವರ ವಿಶ್ ಪೂರ್ತಿಯಾಗಿದ್ದು , ಬಿಗ್ ಬಾಸ್ ಮನೆಗೆ ತನಗಾಗಿ ಬಂದ ವಿಶೇಷ ಅತಿಥಿಯನ್ನು ಕಂಡು ಅರವಿಂದ್ ಭಾವುಕರಾಗಿದ್ದಾರೆ. ಬಿಗ್ ಬಾಸ್ ನ ಪ್ರತಿ ಸೀಸನ್ ಕೊನೆಯಲ್ಲಿ ಸ್ಪರ್ಧಿಗಳ ಕುಟುಂಬದ ಸದಸ್ಯರು ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಬರುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಹೊಸದೊಂದು ಟ್ವಿಸ್ಟ್ ನೀಡಿ, ಮನೆಯ ವಾತಾವರಣವನ್ನು ಕಲರ್ ಫುಲ್ ಮಾಡಲು ಹೊರಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇಟ್ಟ ದೊಡ್ಡ ಕಿವಿಯಲ್ಲಿ ಅರವಿಂದ್ ಒಂದು ಮನವಿಯನ್ನು ಮಾಡಿದ್ದರು. ಅವರು ಮಾಡಿದ ಮನವಿಯಾದರೂ ಏನು ಎನ್ನುವುದಾದರೆ, ಅರವಿಂದ್ ಬೈಕ್ ರೇಸರ್ ಆಗಿ ಜನಪ್ರಿಯತೆ ಪಡೆದವರು, ಅವರ ಪರಿಚಯವೇ ಒಬ್ಬ ಬೈಕ್ ರೇಸರ್ ಆಗಿ ಅನೇಕರಿಗೆ ಆಗಿದೆ. ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ ಆರಂಭವಾದಾಗ ಪ್ರೀಮಿಯರ್ ವೇಳೆಯಲ್ಲಿ ಸಹಾ ಅರವಿಂದ್ ತಮ್ಮ ಬೈಕ್ ನಲ್ಲಿ ಭರ್ಜರಿ ಎಂಟ್ರಿ ಯನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಈಗ ಬಿಗ್ ಬಾಸ್ ಮನವಿಯೊಂದನ್ನು ಮಾಡಲು ಹೇಳಿದಾಗ ಅರವಿಂದ್ ಅದೇ ಬೈಕಿನ ವಿಚಾರ ಹೇಳಿದ್ದಾರೆ.

ಅವರು ಅಂದು ತಾನು ಬಂದ ಬೈಕನ್ನು ಗಾರ್ಡನ್ ಏರಿಯಾದಲ್ಲಿ ನೋಡಲು ಬಯಸುವುದಾಗಿ ಹೇಳಿದರು. ಬಿಗ್ ಬಾಸ್ ಅರವಿಂದ್ ಅವರ ಈ ಕೋರಿಕೆಯನ್ನು ತೀರಿಸಿದ್ದಾರೆ. ಅರವಿಂದ್ ಅವರ ಬೈಕ್ ಅನ್ನು ಮನೆಯೊಳಕ್ಕೆ ಕಳುಹಿಸಿದ್ದಾರೆ ಬಿಗ್ ಬಾಸ್. ತಮ್ಮ ಜೀವನದಲ್ಲಿ ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸಿರುವ, ಅವರ ಜೀವನದ ಒಂದು ಭಾಗವೇ ಆಗಿರುವ ಬೈಕನ್ನು ನೋಡಿ ಅರವಿಂದ್ ಅವರು ಬಹಳ ಖುಷಿ ಪಟ್ಟಿದ್ದಾರೆ. ಅಲ್ಲದೇ ತಮ್ಮ ಬೈಕ್ ನೋಡಿದ ಆ ಸುಂದರವಾದ ಸಮಯದಲ್ಲಿ ಅವರು ಭಾವುಕರಾಗಿದ್ದು ಕೂಡಾ ಹೌದು. ಅದು ಸಹಜವೇ ಅಲ್ಲವೇ ಎನಿಸುತ್ತದೆ.

ಇದು ಮಾತ್ರವೇ ಅಲ್ಲದೇ ವಾಲ್ ಮೇಲೆ ಅರವಿಂದ್ ಅವರ ದೊಡ್ಡ ಫೋಟೋ ಒಂದನ್ನು ಸಹಾ ಹಾಕಲಾಗಿತ್ತು. ಅದರಲ್ಲಿ ಅರವಿಂದ್ ಅವರ ಬಿಗ್ ಬಾಸ್ ಜರ್ನಿಯನ್ನು ತೋರಿಸಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆಯ ವಾಲ್ ಮೇಲೆ ಒಂದೊಂದು ದಿನ ಒಬ್ಬೊಬ್ಬ ಸದಸ್ಯರ ಫೋಟೋಗಳನ್ನು ಅಲಂಕರಿಸಲಾಗುವುದು ಎನ್ನಲಾಗಿದೆ. ಒಟ್ಟಾರೆ ಮೊದಲ ದಿನವೇ ಅರವಿಂದ್ ಅವರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ ಬಿಗ್ ಬಾಸ್… ವಾಹಿನಿ ಬಿಡುಗಡೆ ಮಾಡಿರುವ ಈ ಪ್ರೋಮೋ ಬಹಳ ಆಕರ್ಷಕವಾಗಿದೆ.

Leave A Reply

Your email address will not be published.