ಕಿರುತೆರೆಯಲ್ಲಿ ಬಹಳ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಭಾಷೆ ಯಾವುದೇ ಆದರೂ ಕೂಡಾ ಬಿಗ್ ಬಾಸ್ ಕಾರ್ಯಕ್ರಮಗಳು ಪ್ರತಿಯೊಂದು ಭಾಷೆಯಲ್ಲಿಯೂ ತನ್ನದೇ ಆದಂತಹ ಜನಪ್ರಿಯತೆಯನ್ನು ಪಡೆದುಕೊಂಡು ಒಂದು ಸೀಸನ್ ನಿಂದ ಮತ್ತೊಂದು ಸೀಸನ್ ಗೆ ಇನ್ನಷ್ಟು, ಮತ್ತಷ್ಟು ಎನ್ನುವಂತೆ ಜನಪ್ರಿಯತೆಯನ್ನು ಪಡೆದುಕೊಳ್ಳುವ ಮೂಲಕ ಯಶಸ್ವಿ ಕಾರ್ಯಕ್ರಮವಾಗಿ ಮುಂದುವರಿಯುತ್ತಿದೆ. ಒಂದು ವರ್ಗದ ಪ್ರೇಕ್ಷಕರಿಂದ ತೀವ್ರವಾಗಿ ಟೀಕೆ-ಟಿಪ್ಪಣಿಗಳು ಕೇಳಿ ಬಂದರೂ ಸಹಾ ಬಿಗ್ ಬಾಸ್ ನೋಡುವಂತಹ ಪ್ರೇಕ್ಷಕರ ಸಂಖ್ಯೆ ಕೂಡ ಕಡಿಮೆಯೇನಿಲ್ಲ ಎನ್ನಬಹುದು. ಬಿಗ್ ಬಾಸ್ ನ ಹೊಸ ಸೀಸನ್ ಘೋಷಣೆಯ ನಂತರ ಪ್ರೀಮಿಯರ್ ಗೂ ಮುನ್ನ ಹಾಗೂ ಪ್ರಸಾರ ಪ್ರಾರಂಭವಾದ ಕೂಡಲೇ ಸೋಶಿಯಲ್ ಮೀಡಿಯಾ ಗಳಲ್ಲಿ ಈ ಶೋ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿ ಬಿಡುತ್ತದೆ.
ತೆಲುಗು ಬಿಗ್ ಬಾಸ್ ಈಗಾಗಲೇ ನಾಲ್ಕು ಯಶಸ್ವಿ ಸೀಸನ್ ಗಳನ್ನು ಮುಗಿಸಿದೆ. ಇದೀಗ ತೆಲುಗಿನಲ್ಲಿ ಸೀಸನ್ ಐದಕ್ಕೆ ವೇದಿಕೆಯು ಸಜ್ಜಾಗುತ್ತಿದೆ. ತೆಲುಗಿನಲ್ಲಿ ವಾಹಿನಿಯು ಕಳೆದ ಜೂನ್ ತಿಂಗಳಿನಲ್ಲಿ ಬಿಗ್ ಬಾಸ್ ನ 5ನೇ ಸೀಸನ್ ಪ್ರಾರಂಭ ಮಾಡುವ ಯೋಜನೆಯನ್ನು ಮಾಡಿತ್ತು. ಆದರೆ ಕೊರೊನಾ ಇದಕ್ಕೆ ಒಂದು ದೊಡ್ಡ ಅಡ್ಡಗಾಲಾಗಿ ಪರಿಣಿಮಿಸಿತ್ತು. ಇದೇ ಕಾರಣದಿಂದ ಅಂದು ಕೊಂಡಂತೆ ಸೀಸನ್ ಐದನ್ನು ಆರಂಭಿಸುವುದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ವಾಹಿನಿಯು ತೆಲುಗು ಬಿಗ್ ಬಾಸ್ ಸೀಸನ್ 5 ಪ್ರಾರಂಭ ಯಾವಾಗ ಆಗಲಿದೆ ?? ಎನ್ನುವ ಕುರಿತಾಗಿ ಪ್ರೋಮೊ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದಿದೆ.
ಕೊರೊನಾ ಎರಡನೇ ಅಲೆಯ ಅಬ್ಬರದ ಕಾರಣದಿಂದಾಗಿ ಮುಂದೂಡಲಾಗಿದ್ದ ತೆಲುಗು ಬಿಗ್ ಬಾಸ್ ಸೀಸನ್ 5, ಇದೀಗ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ. ಬಿಗ್ ಬಾಸ್ ಸೀಸನ್ ಪ್ರಾರಂಭವಾಗುತ್ತಿದೆ ಎಂದ ಕೂಡಲೇ ಸಹಜವಾಗಿಯೇ, ಮಾಧ್ಯಮಗಳಲ್ಲಿ ಬಿಗ್ ಬಾಸ್ ಪ್ರವೇಶ ಮಾಡುವ ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಕೂಡಾ ಸಾಕಷ್ಟು ದೊಡ್ಡ ಸದ್ದು ಮತ್ತು ಸುದ್ದಿಯನ್ನು ಮಾಡುತ್ತವೆ. ಈಗ ತೆಲುಗಿನಲ್ಲಿ ಕೂಡಾ ಒಂದು ಸಂಭಾವ್ಯ ಸೆಲೆಬ್ರಿಟಿಗಳ ಹೆಸರು ಮಾಧ್ಯಮಗಳಲ್ಲಿ ಹರಿದಾಡುವ ಮೂಲಕ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ತೆಲುಗಿನಲ್ಲಿ ರಾಬರ್ಟ್ ಸಿನಿಮಾದಲ್ಲಿ ಹಾಡು ಹಾಡಿದ ಸುಪ್ರಸಿದ್ಧ ಗಾಯಕಿ ಮಂಗ್ಲಿ, ತೆಲುಗು ಕಿರುತೆರೆಯ ಜನಪ್ರಿಯ ನಿರೂಪಕ ರವಿ, ನಟ ಶರಣ್ ಅವರ ಜೊತೆಯಲ್ಲಿ ಅಧ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ಹೆಬ್ಬಾ ಪಟೇಲ್ ಈ ಬಾರಿ ತೆಲುಗಿನ ಬಿಗ್ ಬಾಸ್ ಶೋಗೆ ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಶೋ ನಲ್ಲಿ ಮೂರನೇ ಸೀಸನ್ ನಿಂದ ಅದರ ನಿರೂಪಣೆಯ ಜವಾಬ್ದಾರಿ ಹೊತ್ತಿರುವ ಅಕ್ಕಿನೇನಿ ನಾಗಾರ್ಜುನ ಅವರೇ ಈ ಹೊಸ ಸೀಸನ್ ಅನ್ನು ನಿರೂಪಣೆ ಮಾಡಬಹುದು ಎನ್ನಲಾಗಿದೆ.