ಬಿಗ್ ಬಾಸ್ ನಿರೂಪಣೆಯ ಜವಾಬ್ದಾರಿ ಜನಪ್ರಿಯ ನಟಿಯ ಹೆಗಲಿಗೆ: ಇದು ಖಂಡಿತ ಊಹೆಗೂ ಮೀರಿದ್ದು

Written by Soma Shekar

Published on:

---Join Our Channel---

ಭಾರತೀಯ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಈಗಾಗಲೇ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಬಂಗಾಳಿ ಭಾಷೆಗಳಲ್ಲಿ ಪ್ರಸಾರವನ್ನು ಕಾಣುತ್ತಿದ್ದು, ಎಲ್ಲಾ ಭಾಷೆಗಳಲ್ಲಿಯೂ ಸಹಾ ಬಿಗ್ ಬಾಸ್ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬಿಗ್ ಬಾಸ್ ಶೋ ನಲ್ಲಿ ಬಿಗ್ ಹೌಸ್ ಪ್ರವೇಶ ಮಾಡುವ ಸೆಲೆಬ್ರಿಟಿಗಳು, ಮನೆಯೊಳಗೆ ಅವರು ಆಡುವ ಆಟ, ಮಾಡುವ ಕಿತ್ತಾಟ, ವಾಗ್ವಾದ, ನಡೆಸುವ ಪ್ರೇಮ ಕಹಾನಿಗಳಿಂದ ಮಾತ್ರವೇ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಅದಕ್ಕಿಂತಲೂ ಮಹತ್ವದ ವಿಷಯ ಏನೆಂದರೆ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ನಿರೂಪಕರ ಪಾತ್ರ ಸೆಲೆಬ್ರಿಟಿ ಸ್ಪರ್ಧಿಗಳಿಗಿಂತ ಮುಖ್ಯವಾಗಿದೆ. ಶೋ ನಲ್ಲಿ ನಿರೂಪಕರ ಪಾತ್ರ ಬಹಳ ತೂಕದ್ದಾಗಿದೆ. ಅವರ ನಿರೂಪಣೆಯ ಮೇಲೆ ಇಡೀ ಶೋ ನಿರ್ಧರಿತವಾಗುತ್ತದೆ. ಆದ್ದರಿಂದಲೇ ಶೋ ನಿರೂಪಣೆ ಮಾಡಲು ಆಯಾ ಭಾಷೆಯ ಬಹಳ ಜನಪ್ರಿಯ ಹಾಗೂ ಎನರ್ಜಿಟಿಕ್ ಆಗಿರುವವರನ್ನೇ ಕರೆ ತರಲಾಗುತ್ತದೆ. ಕನ್ನಡದಲ್ಲಿ ಆರಂಭದಿಂದಲೂ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಿರುವುದು ಗೊತ್ತಿರುವ ವಿಷಯವೇ ಆಗಿದೆ.

ಇನ್ನು ದಕ್ಷಿಣದ ಅನ್ಯ ಭಾಷೆಗಳ ಬಿಗ್ ಬಾಸ್ ಶೋ ಗಳ ಬಗ್ಗೆ ಹೇಳುವುದಾದರೆ ತೆಲುಗಿನಲ್ಲಿ ನಾಗಾರ್ಜುನ, ತಮಿಳಿನಲ್ಲಿ ಕಮಲ ಹಾಸನ್, ಮಲೆಯಾಳಂ ನಲ್ಲಿ ಮೋಹನ್ ಲಾಲ್ ಅವರು ನಿರೂಪಣೆ ಮಾಡಿದರೆ, ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಮರಾಠಿಯಲ್ಲಿ ಮಹೇಶ್ ಮಾಂಜ್ರೇಕರ್ ನಿರೂಪಣೆ ಮಾಡುವುದು ಗಮನಾರ್ಹವಾದ ವಿಷಯವಾಗಿ. ಬಹುತೇಕ ಎಲ್ಲರೂ ಶೋ ನೊಂದಿಗೆ ಬೆಸೆದು ಹೋಗಿದ್ದಾರೇನೋ ಎನ್ನುವ ಮಟ್ಟಕ್ಕೆ ಶೋ ಗಳು ಜನಪ್ರಿಯತೆ ಪಡೆದಿವೆ.

ಆಯಾ ಭಾಷೆಯಲ್ಲಿ ಈಗಿರುವ ನಿರೂಪಕರ ಜಾಗದಲ್ಲಿ ಬೇರೆಯವರನ್ನು ಊಹಿಸಿಕೊಳ್ಳುವುದು ಸಹಾ ಕಠಿಣವೇ. ತಮಿಳಿನ ಬಿಗ್ ಬಾಸ್ ಅನ್ನು ಕಮಲ ಹಾಸನ್ ಅವರು ನಿರೂಪಣೆ ಮಾಡುತ್ತಾ ಬರುತ್ತಿದ್ದು, ಅವರ ಜಾಗದಲ್ಲಿ ಬೇರೆಯವನ್ನು ಊಹಿಸುವುದು ಕಷ್ಟ. ತಮಿಳಿನಲ್ಲಿ ಹೊಸ ಸೀಸನ್ ಈಗಾಗಲೇ ಬಿಗ್ ಬಾಸ್ ನಡೆಯುತ್ತಿದ್ದು, ಕಮಲ ಹಾಸನ್ ಅವರೇ ಈ ಹೊಸ ಸೀಸನ್ ನ ನಿರೂಪಣೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು, ಶೋ ನಿರೂಪಣೆ ಯನ್ನು ಉತ್ಸಾಹದಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಆದರೆ ಎರಡು ದಿನಗಳ ಹಿಂದೆಯಷ್ಟೇ ಯುಎಸ್ ಪ್ರವಾಸ ಮುಗಿಸಿಕೊಂಡು ಬಂದ ಕಮಲ ಹಾಸನ್ ಅವರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಬಿಗ್ ಬಾಸ್ ಅಭಿಮಾನಿಗಳು ಕಮಲ ಹಾಸನ್ ಅವರ ಗೈರು ಹಾಜರಿಯಲ್ಲಿ ಶೋ ನಿರೂಪಣೆ ಯಾರು ಮಾಡಲಿದ್ದಾರೆ ಎನ್ನುವ ಗೊಂದಲದಲ್ಲಿ ಇರುವಾಗಲೇ ಅದಕ್ಕೆ ಉತ್ತರ ದೊರೆತಿದೆ. ಈ ವಾರ ಕಮಲ ಹಾಸನ್ ಅವರ ಜಾಗಕ್ಕೆ ಮತ್ತೊಬ್ಬರು ಬರುತ್ತಿದ್ದಾರೆ.

ಹೌದು, ಕಮಲ ಹಾಸನ್ ಅವರು ಆಸ್ಪತ್ರೆಯಲ್ಲಿ ಇರುವ ಕಾರಣ ಬಿಗ್ ಬಾಸ್ ನ ವಾರಾಂತ್ಯದ ಎಪಿಸೋಡ್ ನಿರೂಪಣೆ ಮಾಡಲು ಕಮಲ ಹಾಸನ್ ಅವರ ಪುತ್ರಿ ಶೃತಿ ಹಾಸನ್ ಅವರು ಬರುತ್ತಿದ್ದಾರೆ. ಅಪ್ಪನ ಜಾಗದಲ್ಲಿ ನಿಂತು ತಾನೇ ಸ್ಪರ್ಧಿಗಳ ಜೊತೆ ಮಾತನಾಡಲಿದ್ದು, ಟಾಸ್ಕ್ ಗಳ ಕುರಿತು ವಿಮರ್ಶೆ ಮಾಡಲಿದ್ದಾರೆ. ಐದು ಸೀಸನ್ ಗಳನ್ನು ಕಮಲ ಹಾಸನ್ ಅವರೇ ನಿರೂಪಣೆ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಕಮಲ ಹಾಸನ್ ಅವರು ಗೈರು ಹಾಜರಾಗುತ್ತಿದ್ದಾರೆ.

Leave a Comment