ಬಿಗ್ ಬಾಸ್ ನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ರಾಕೇಶ್ ಗೆ ಸಿಗ್ತಿರೋ ಸಂಭಾವನೆ ಎಷ್ಟು? ಖಂಡಿತ ಇದು ಅಚ್ಚರಿ ವಿಷಯ

Entertainment Featured-Articles Movies News

ಕನ್ನಡದಲ್ಲಿ ಬಿಗ್ ಬಾಸ್ ಶೋ ಈ ಬಾರಿ ಟಿವಿಗಿಂತಲೂ ಮೊದಲು ಓಟಿಟಿಯಲ್ಲಿ ತನ್ನ ಮೊದಲ ಸೀಸನ್ ಆರಂಭಿಸಿದೆ. ಓಟಿಟಿಯಲ್ಲಿ ಬಿಗ್ ಬಾಸ್ ಎಂದಾಗ ಸಹಜವಾಗಿಯೇ ಒಂದು ಅನುಮಾನ, ಗೊಂದಲ ಪ್ರೇಕ್ಷಕರಲ್ಲಿ ಇತ್ತು. ಆದರೆ ಈ ಎಲ್ಲಾ ಅನುಮಾನಗಳು ಮತ್ತು ಗೊಂದಲಗಳಿಗೆ ಉತ್ತರ ನೀಡುವಂತೆ ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲನೇ ಸೀಸನ್ ಭರ್ಜರಿ ಯಶಸ್ಸನ್ನು ಪಡೆದುಕೊಂಡು, ಐದು ವಾರ ಮುಗಿಸಿದ್ದು, ಕೊನೆಯ ಹಂತಕ್ಕೆ ಬಂದು ತಲುಪಿದೆ. ಶೀಘ್ರದಲ್ಲೇ ಫಿನಾಲೇ ನಡೆಯಲಿದೆ. ಓಟಿಟಿ ಬಿಗ್ ಬಾಸ್ ನ ಮೊದಲ ಸೀಸನ್ ನ ಮೊದಲ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಸಹಾ ತೆರೆ ಬೀಳಲಿದೆ. ಅದಾದ ನಂತರ ಟಿವಿ ಬಿಗ್ ಬಾಸ್ ಶೋ ನ ಒಂಬತ್ತನೇ ಸೀಸನ್ ಆರಂಭವಾಗಲಿದೆ.

ಬಿಗ್ ಬಾಸ್ ಓಟಿಟಿಯಲ್ಲಿ ಸಿನಿಮಾ, ಟಿವಿ ಸೆಲೆಬ್ರಿಟಿಗಳು ಮಾತ್ರವೇ ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಸ್ಟಾರ್ ಗಳಾಗಿರುವವರು ಸಹಾ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ನೀಡುವವರಲ್ಲಿ ಫಿನಾಲೆಯಲ್ಲಿ ಗೆದ್ದವರಿಗೆ ಟ್ರೋಫಿ ಮತ್ತು ನಗದು ಬಹುಮಾನ ಸಿಗುತ್ತದೆ. ಉಳಿದಂತೆ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಸಹಾ ವಾರಕ್ಕೆ ಇಷ್ಟು ಎಂದು ಸಂಭಾವನೆಯನ್ನು ನಿಗಧಿ ಮಾಡಲಾಗಿರುತ್ತದೆ. ಈ ಸಂಭಾವನೆಯು ಸ್ಪರ್ಧಿಯ ಜನಪ್ರಿಯತೆ ಹಾಗೂ ಸ್ಟಾರ್ ಡಂ ಆಧಾರದಲ್ಲಿ ನಿರ್ಧರಿತವಾಗಿರುತ್ತದೆ. ಹಾಗಾದರೆ ಈ ಬಾರಿ ಮನೆಯಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸದಸ್ಯ ಯಾರು? ತಿಳಿಯೋಣ ಬನ್ನಿ.

ಹೊರ ಬಂದಿರುವ ಸುದ್ದಿಗಳ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಇರುವ ಸದಸ್ಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸದಸ್ಯ ಯಾರು ಎನ್ನುವುದಾದರೆ ಅದು ನಟ ರಾಕೇಶ್ ಅಡಿಗ ಎನ್ನಲಾಗಿದೆ. ರಾಕೇಶ್ ಅಡಿಗ ಅವರು ಸ್ಯಾಂಡಲ್ವುಡ್ ನಲ್ಲಿ ಜನಪ್ರಿಯತೆ ಪಡೆದಿರುವ ನಟನಾಗಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ಅವರು ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತವಾದ ಮುಖವಾಗಿದ್ದಾರೆ. ತಮ್ಮದೇ ಆದ ಸ್ಥಾನ ಮತ್ತು ವರ್ಚಸ್ಸನ್ನು ಅವರು ಪಡೆದುಕೊಂಡಿದ್ದಾರೆ ಎನ್ನುವುದು ಸಹಾ ಸತ್ಯವಾದ ವಿಷಯವಾಗಿದೆ.

ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಯಾಗಿ ಎಂಟ್ರಿ ನೀಡಿದ ಅವರು, ಮನೆಯಲ್ಲಿ ತಮ್ಮ ಆಟದ ಮೂಲಕ ಈಗಾಗಲೇ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದಾರೆ. ಬಿಗ್ ಬಾಸ್ ವೀಕ್ಷಕರಿಗೆ ರಾಕೇಶ್ ಅಡಿಗ ಆಟ ಬಹಳ ಇಷ್ಟವಾಗಿದೆ. ಅವರ ಅಭಿಮಾನಿಗಳು ರಾಕೇಶ್ ಅಡಿಗ ಅವರೇ ಓಟಿಟಿ ಬಿಗ್ ಬಾಸ್ ನ ಮೊದಲ ಸೀಸನ್ ಗೆಲ್ಲಬೇಕೆಂದು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಸಹಾ ಹಂಚಿಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆ ರಾಕೇಶ್ ಅವರು ಬಿಗ್ ಬಾಸ್ ಗಾಗಿ ಪಡೆಯುತ್ತಿರುವ ಸಂಭಾವನೆಯ ವಿಚಾರ ಈಗ ಸುದ್ದಿಯಾಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಹಾಗಾದ್ರೆ ರಾಕೇಶ್ ಅಡಿಗ ಅವರು ಬಿಗ್ ಬಾಸ್ ನಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ತಿಳಿಯೋಣ ಬನ್ನಿ‌. ಹೊರ ಬಂದಿರುವ ಸುದ್ದಿಗಳ ಪ್ರಕಾರ ನಟ ರಾಕೇಶ್ ಅಡಿಗ ಅವರಿಗೆ ವಾರಕ್ಕೆ ಸುಮಾರು ನಲ್ವತ್ತರಿಂದ ನಲ್ವತ್ತೈದು ಸಾವಿರ ರೂಪಾಯಿಗಳ ಸಂಭಾವನೆಯನ್ನು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೇ ಬಿಗ್ ಬಾಸ್ ಮನೆಯಲ್ಲಿ ಇರುವ ಸದಸ್ಯರಲ್ಲಿ ರಾಕೇಶ್ ಅವರ ಸಂಭಾವನೆಯೇ ಹೆಚ್ಚು ಎಂದು ಸಹಾ ಹೇಳಲಾಗಿದೆ. ಹೀಗೆ ವಾರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ರಾಕೇಶ್ ಅವರು ಬಿಗ್ ಬಾಸ್ ಕನ್ನಡ ಓಟಿಟಿಯ ಮೊದಲ ಸೀಸನ್ ಗೆಲ್ತಾರಾ? ಕಾದು ನೋಡಬೇಕಾಗಿದೆ.

Leave a Reply

Your email address will not be published.