ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಹಿಂದಿನ, ದಿಗ್ಗಜ ನಟಿಯರ ಲುಕ್ ಗಳನ್ನು ರೀಕ್ರಿಯೇಟ್ ಮಾಡುವುದು ಒಂದು ಹೊಸ ಟ್ರೆಂಡ್ ಮತ್ತು ಕ್ರೇಜಾಗಿದೆ. ಸಾಕಷ್ಟು ಜನ ಕಿರುತೆರೆ ಹಾಗೂ ಹಿರಿತೆರೆಯ ನವ ಕಲಾವಿದರು ಹಿರಿಯ ಕಲಾವಿದರ ಲುಕ್ ಗಳನ್ನು ರೀಕ್ರಿಯೇಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಈ ರೀತಿ ಹಳೆಯ ನಟಿಯರು ಲುಕ್ ರೀಕ್ರಿಯೇಟ್ ಆಗಿರುವ ಫೋಟೋಗಳನ್ನು ನೋಡಿ ನೆಟ್ಟಿಗರು ಸಹಾ ಖುಷಿ ಪಡುತ್ತಿದ್ದಾರೆ. ಈಗ ಇಂತಹುದೇ ಒಂದು ಲುಕ್ಕನ್ನು ರೀಕ್ರಿಯೇಟ್ ಮಾಡುವ ಮೂಲಕ ಸದ್ದು ಮಾಡಿದ್ದಾರೆ ಕಿರುತೆರೆಯ ಪ್ರಖ್ಯಾತ ನಟಿ, ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅವರು.
ನಟಿ ವೈಷ್ಣವಿ ಗೌಡ ಅವರು ಕನ್ನಡ ಚಿತ್ರರಂಗ ಎಂದೂ, ಎಂದೆಂದಿಗೂ ಮರೆಯಲಾಗದ ಅಪ್ರತಿಮ ಕಲಾವಿದೆ, ಅಪ್ಪಟ ನಟಿ, ಮಿನುಗುತಾರೆ ಕಲ್ಪನಾ ಅವರ ಲುಕ್ ಅನ್ನು ರೀ ಕ್ರಿಯೇಟ್ ಮಾಡುವ ಪ್ರಯತ್ನಕ್ಕೆ ಕೈ ಹಾಕುವ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆದಿದ್ದಾರೆ. ಬಿಗ್ ಬಾಸ್ ನಂತರ ಫೋಟೋ ಶೂಟ್ ಗಳಲ್ಲಿ ಬ್ಯುಸಿಯಾಗಿರುವ ನಟಿ ವೈಷ್ಣವಿ ಗೌಡ ಅವರು ಇದೀಗ ಕಲ್ಪನಾ ಅವರ ಲುಕ್ ಮೂಲಕ ಫೋಟೋ ಶೂಟ್ ಮಾಡಿಸಿದ್ದಾರೆ. ಅಲ್ಲದೇ ಫೋಟೋ ಶೂಟ್ ವೀಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಸಹಾ ಶೇರ್ ಮಾಡಿಕೊಂಡಿದ್ದಾರೆ.
ಕಲ್ಪನಾ ಅವರ ಲುಕ್ ನಲ್ಲಿನ ವೈಷ್ಣವಿ ಗೌಡ ಅವರ ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ನೀವು ಕಲ್ಪನಾ ಅವರಂತೆ ಕಾಣುತ್ತಿರುವಿರಿ ಎಂದು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಈ ವೀಡಿಯೋದಲ್ಲಿ ವೈಷ್ಣವಿ ಅವರು ಕಲ್ಪನಾ ಅವರಂತೆ ಮೇಕಪ್ ಮಾಡಲು ಬೇಕಾಗಿರುವ ಸಾಮಗ್ರಿಗಳು, ಸ್ಕಿನ್ ಕೇರ್, ತ್ವಚೆಯ ಆರೈಕೆ ಇತರೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರು ಕಲ್ಪನಾ ಮೇಡಂ ನನಗೆ ತುಂಬಾ ಇಷ್ಟ, ಅವರ ಸಿನಿಮಾ, ನಟನೆ ನೋಡಿ ನಾನು ನಟನೆಯನ್ನು ಕಲಿಯುವ ಪ್ರಯತ್ನವನ್ನು ಮಾಡುತ್ತಿದೆ ಎಂದಿದ್ದಾರೆ.
ಸಾಕಷ್ಟು ಜನ ಕಲಾವಿದರಿಂದ ಕಲ್ಪನಾ ಅವರ ಬಗ್ಗೆ ಕೇಳಿ ತಿಳಿದುಕೊಂಡಿದ್ದೆ. ಮನೆಯಲ್ಲಿ ಅವರ ಹಾಡುಗಳನ್ನು ಕೇಳುತ್ತಿದ್ದೆ. ಅವರ ಲುಕ್ಕನ್ನು ಏಕೆ ಪ್ರಯತ್ನ ಮಾಡಬಾರದು ಎನಿಸಿ, ಅದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಸಂಗ್ರಹಿಸಿ, ಮಾಡೇ ಬಿಡೋಣ ಎನ್ನುವ ನಿರ್ಧಾರವನ್ನು ಮಾಡಿದೆ. ಅದರ ಫಲಿತಾಂಶ ಇಂದು ನಿಮ್ಮ ಮುಂದೆ ಇದೆ. ಹೇಗಿದೆ ಎನ್ನುವುದನ್ನು ನೀವೇ ಹೇಳಬೇಕು ಎಂದು ವೈಷ್ಣವಿ ಗೌಡ ಅವರು ಹೇಳಿದ್ದಾರೆ. ಈಗ ಮೇಕಿಂಗ್ ವೀಡಿಯೋ ಮಾತ್ರ ಅವರು ಹೊರಗೆ ಬಿಟ್ಟಿದ್ದಾರೆ. ಫೋಟೋಗಳು ಶೀಘ್ರದಲ್ಲೇ ಹೊರ ಬರಬಹುದು.