ಬಿಗ್ ಬಾಸ್ ಗೆ ಬರಲು ಸ್ಟಾರ್ ಗಳನ್ನು ಮೀರಿಸೋ ಹಾಗೆ ಸಂಭಾವನೆ ಪಡೆದ ನಂದಿನಿ:ಹಾಗಾದ್ರೆ ನಂದಿನಿ ಪಡೆದ ಸಂಭಾವನೆ ಎಷ್ಟು?

Entertainment Featured-Articles Movies News

ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲನೇ ಸೀಸನ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಕನ್ನಡ ಬಿಗ್ ಬಾಸ್ ಓಟಿಟಿ ಯಲ್ಲಿ ಪ್ರಸಾರ ಆರಂಭಿಸಿದಾಗ ಅದೊಂದು ಹೊಸ ಪ್ರಯತ್ನವಾಗಿತ್ತು. ಈ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಕೂಡಾ ಬೆಂಬಲವನ್ನು ನೀಡುವ ಮೂಲಕ ಬಿಗ್ ಬಾಸ್ ನ ಓಟಿಟಿಯ ಮೊದಲನೇ ಸೀಸನ್ ಭರ್ಜರಿ ಯಶಸ್ಸನ್ನು ಪಡೆದುಕೊಂಡು, ಮೊದಲ ಯಶಸ್ವಿ ಸೀಸನ್ ನ ಕೊನೆಯ ಹಂತವನ್ನು ಬಂದು ಸೇರಿದೆ. ಇನ್ನು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದ ನಂದಿನಿ ಅವರು ಸಖತ್ ಸದ್ದು ಮಾಡಿದ್ದರು. ಐದನೇ ವಾರದ ಕೊನೆಯಲ್ಲಿ ಎಲಿಮಿನೇಷನ್ ಎದುರಿಸಿ ಮನೆಯಿಂದ ಹೊರಗೆ ಬಂದಿದ್ದಾರೆ ನಂದಿನಿ ಅವರು. ನಂದಿನಿ ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಪ್ರತಿಯೊಬ್ಬ ಸ್ಪರ್ಧಿಗೂ ಸಹಾ ಅವರ ಜನಪ್ರಿಯತೆ ಹಾಗೂ ಸ್ಟಾರ್ ಡಂ, ಫ್ಯಾನ್ ಫಾಲೋಯಿಂಗ್ ಹೀಗೆ ವಿವಿಧ ಮಾನದಂಡಗಳ ಆಧಾರದಲ್ಲಿ ವಾರಕ್ಕೆ ಇಷ್ಟು ಎಂದು ಸಂಭಾವನೆಯನ್ನು ನಿಗಧಿ ಮಾಡಲಾಗಿರುತ್ತದೆ. ಅದರಂತೆ ನಂದಿನಿ ಅವರಿಗೂ ಸಹಾ ಸಂಭಾವನೆಯನ್ನು ನಿಗಧಿ ಮಾಡಲಾಗಿತ್ತು. ಹೌದು, ನಂದಿನಿ ಅವರು ಬಿಗ್ ಬಾಸ್ ಮನೆಗೆ ಬರಲು ಭರ್ಜರಿ ಸಂಭಾವನೆಯನ್ನು ಪಡೆದಿದ್ದಾರೆ ಎನ್ನುವ ವಿಚಾರವೊಂದು ಸುದ್ದಿಯಾಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ‌ ಹಾಗೂ ಜನರು ನಂದಿನಿ ಅವರ ಸಂಭಾವನೆಯ ಬಗ್ಗೆ ತಿಳಿದುಕೊಂಡು ಬಹಳ ಅಚ್ಚರಿ ಪಡುತ್ತಿದ್ದಾರೆ.

ಬಿಗ್ ಬಾಸ್ ಓಟಿಟಿ ಫಿನಾಲೆಗೆ ಕೌಂಟ್ ಡೌನ್ ಆರಂಭವಾಗಿದೆ‌. ವಾರಾಂತ್ಯಕ್ಕೆ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ನ ವಿನ್ನರ್ ಯಾರು ಎನ್ನುವ ವಿಚಾರವು ಹೊರಗೆ ಬರಲಿದೆ. ಇವೆಲ್ಲವುಗಳ ನಡುವೆಯೇ ಈಗ ಕಳೆದ ಅವರ ಮನೆಯಿಂದ ಹೊರ ಬಂದಿರುವ ನಂದಿನಿ ಅವರು ಮಾದ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದ್ದಾರೆ. ನಂದಿನಿ ಅವರ ಬಗ್ಗೆ ಎಲ್ಲಾ ಕಡೆ ಚರ್ಚೆಗಳು ನಡೆಯುತ್ತಿದೆ. ನಂದಿನಿ ಅವರ ಅನಿರೀಕ್ಷಿತ ಎಲಿಮಿನೇಷನ್ ನಂತರ ಇದೀಗ ಅವರು ಪಡೆದಿರುವ ಸಂಭಾವನೆಯ ವಿಚಾರವು ಸಹಾ ಈಗ ಮುನ್ನೆಲೆಗೆ ಬಂದಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಹಾಗಾದರೆ ನಂದಿನಿ ಅವರು ಪಡೆದ ಸಂಭಾವನೆ ಎಷ್ಟು? ಬನ್ನಿ ತಿಳಿಯೋಣ. ದೊಡ್ಮನೆಯಲ್ಲಿ ಭರ್ಜರಿ ಕಾಂಪಿಟೇಷನ್ ನೀಡುತ್ತಾ ಟಫ್ ಸ್ಪರ್ಧಿ ಎನಿಸಿಕೊಂಡಿದ್ದ ನಂದಿನಿ ಅವರು ವಾರಕ್ಕೆ 5 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಅಂದರೆ ಒಟ್ಟು ಐದು ವಾರಗಳ ಕಾಲ ಮನೆಯೊಳಗೆ ಇದ್ದ ನಂದಿನಿ ಅವರು ಒಟ್ಟು 25 ಲಕ್ಷ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎನ್ನುವು ಸುದ್ದಿ ಈಗ ಹರಿದಾಡಿದ್ದು, ಎಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಸುದ್ದಿಯಾಗಿದ್ದ ರಾಕೇಶ್ ಅಡಿಗ ಅವರಿಗಿಂತ ನಂದಿನಿ ಅವರ ಸಂಭಾವನೆ ಹೆಚ್ಚಾಗಿರುವುದು ತಿಳಿದು ಅಚ್ಚರಿ ಯನ್ನು ಪಡುವಂತಾಗಿದೆ.

Leave a Reply

Your email address will not be published.