ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಜಾಲಿ ರೈಡ್ ಅಡ್ವೆಂಚರಸ್ ರೈಡ್ ಆಗಿದ್ದು ಹೇಗೆ?

Written by Soma Shekar

Updated on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ ಏಳರಲ್ಲಿ ಸಾಕಷ್ಟು ಸದ್ದು, ಸುದ್ದಿ ಮಾಡಿದ ಸೆಲೆಬ್ರಿಟಿಗಳಲ್ಲಿ ನಟಿ ಭೂಮಿ ಶೆಟ್ಟಿ ಕೂಡಾ ಸೇರಿದ್ದಾರೆ. ಭೂಮಿ ಶೆಟ್ಟಿ ಅವರು ಪ್ರಕೃತಿಯನ್ನು ಬಹಳ ಪ್ರೀತಿಸುತ್ತಾರ. ಸುಂದರವಾದ ಪ್ರಕೃತಿಯಲ್ಲಿ ಸಮಯವನ್ನು ಕಳೆಯಲು ಬಹಳ ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಭೂಮಿ ಶೆಟ್ಟಿಯವರು ತಮ್ಮ ಸಿನಿಮಾ, ಧಾರಾವಾಹಿ ಅಥವಾ ನಿರೂಪಣೆಯ ಪ್ರಾಜೆಕ್ಟ್ ಗಳ ವಿಷಯಗಳ ಬದಲಾಗಿ ಜಾಲಿ ರೈಡ್ ಗಳಿಂದಲೇ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಕೆಲಸದ ನಡುವೆ ಸ್ವಲ್ಪ ವಿರಾಮ ಸಿಕ್ಕರೂ ತಮ್ಮ ಬುಲೆಟ್ ಏರಿ ಜಾಲಿ ರೈಡಿಗೆ ಹೊರಟು ಬಿಡುತ್ತಾರೆ ಭೂಮಿ ಶೆಟ್ಟಿ.

ಕೆಲವು ದಿನಗಳ ಹಿಂದೆಯಷ್ಟೇ ಮಲೆನಾಡಿನ ವನ ಸಿರಿಯನ್ನು, ಪ್ರಕೃತಿಯ ರಮಣೀಯತೆಯನ್ನು ಕಣ್ತುಂಬಿಕೊಳ್ಳಲು ಪ್ರಕೃತಿಯ ಮಡಿಲಿನಲ್ಲಿ ಅತ್ಯಮೂಲ್ಯವಾದ ಕ್ಷಣಗಳನ್ನು ಕಳೆಯಲು ಬೆಟ್ಟ, ಗುಡ್ಡ, ಕಾಡು, ನದಿ ಎಂದು ಸುತ್ತುತ್ತಾ, ಸಾಕಷ್ಟು ಸಂಭ್ರಮ ಪಟ್ಟಿದ್ದರು ಭೂಮಿ ಶೆಟ್ಟಿ. ಭೂಮಿ ಶೆಟ್ಟಿ ತಮ್ಮ ಸ್ನೇಹಿತರ ಜೊತೆಗೂಡಿ ಜಾಲಿ ರೈಡ್ ಹೋಗೋದು ಮಾತ್ರವೇ ಅಲ್ಲದೇ ಅವರು ಕೆಲವು ಸಂದರ್ಭಗಳಲ್ಲಿ ಒಂಟಿಯಾಗಿಯೇ ತಮ್ಮ ಬುಲೆಟ್ ಏರಿ ಜಾಲಿ ರೈಡ್ ಗೆ ತೆರಳುವುದು ಕೂಡಾ ಅವರ ಹವ್ಯಾಸವಾಗಿದೆ.

ಈ ಬಾರಿ ಸ್ನೇಹಿತರ ಜೊತೆಗೆ ಹೊಸದೊಂದು ಜಾಲಿ ಟ್ರಿಪ್ ಹೋಗಿದ್ದಾರೆ ಭೂಮಿ ಶೆಟ್ಟಿ. ಈ ಬಾರಿ ಅವರು ಹಿಮಾಲಯದ ಸೊಬಗನ್ನು ಸವಿಯಲು ಹೋಗಿದ್ದಾರೆ. ಹಿಮಾಲಯ ಹಾಗೂ ಅಲ್ಲಿನ ರಮ್ಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಅವರು ತಮ್ಮ ಸ್ನೇಹಿತರ ಜೊತೆಗೆ ಹಿಮಾಲಯದ ಈ ಜಾಲಿ ಟ್ರಿಪ್ ಗಾಗಿ ವಿಮಾನದಲ್ಲಿ ಅವರು ಹೋಗಿಲ್ಲ, ಬದಲಾಗಿ ಸ್ನೇಹಿತರ ಜೊತೆಗೂಡಿ ಬುಲೆಟ್ ನಲ್ಲೇ ಅವರು ಲಡಾಖ್ ಗೆ ಹೋಗಿದ್ದಾರೆ.

ಲಡಾಖ್ ನಲ್ಲಿ ಸುಂದರ ವಾತಾವರಣದಲ್ಲಿ ಅವರು ಅಲ್ಲಿನ ಜನರ ಜೊತೆಗೆ ಬೆರೆತು ಖುಷಿ ಪಟ್ಟಿದ್ದಾರೆ. ಅಲ್ಲಿನ ಮಕ್ಕಳೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿ ಕೊಂಡಿದ್ದಾರೆ. ಇನ್ನು ಭೂಮಿ ಶೆಟ್ಟಿಯವರು ತಮ್ಮ ಸ್ನೇಹಿತರ ಜೊತೆಗೆ ಮ್ಯಾಗ್ನೆಟಿಕ್ ಹಿಲ್ ನಲ್ಲಿ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಭೂಮಿ ಶೆಟ್ಟಿಯವರ ಈ ಜಾಲಿ ರೈಡ್ ಫೋಟೋಗಳು ಎಲ್ಲರ ಗಮನವನ್ನು ಸೆಳೆಯುತ್ತಿದೆ.

Leave a Comment