ಬಿಗ್ ಬಾಸ್ ಓಟಿಟಿ ಕನ್ನಡ ಸೀಸನ್ ಒಂದರ ಐದನೇ ವಾರ ಕೊನೆಯ ಹಂತಕ್ಕೆ ಬಂದಿದೆ. ಇನ್ನೊಂದು ವಾರ ಕಳೆದರೆ ಕಿರುತೆರೆಯ ಪ್ರೇಕ್ಷಕರ ನಿರೀಕ್ಷೆಗಳ ಬಿಗ್ ಬಾಸ್ ನ ಸೀಸನ್ ಒಂಬತ್ತು ಟಿವಿ ಯಲ್ಲಿ ಪ್ರಸಾರ ಆರಂಭಿಸಲಿದೆ. ಈಗ ಇನ್ನೊಂದು ವಾರ ಉಳಿದಿರುವ ಓಟಿಟಿ ಬಿಗ್ ಬಾಸ್ ನ ವಿನ್ನರ್ ಯಾರಾಗುವರು ಎನ್ನುವುದು ಸಹಾ ಈಗ ಕುತೂಹಲದ ವಿಚಾರವಾಗಿದೆ. ಈಗ ಇವೆಲ್ಲವುಗಳ ನಡುವೆ ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲ ಸೀಸನ್ ನ ಐದನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಸಹಾ ಮುಗಿದಿದ್ದು, ಈ ವಾರ ಎಂದರೆ ಫಿನಾಲೆ ವಾರಕ್ಕೂ ಮೊದಲು ಮನೆಯಿಂದ ಹೊರಗೆ ಬಂದಿದ್ದಾರೆ ನಂದಿನಿ ಅವರು.
ಬಿಗ್ ಬಾಸ್ ಮನೆಯಿಂದ ಪ್ರತಿವಾರ ಒಬ್ಬ ಸ್ಪರ್ಧಿ ಹೊರಗೆ ಬರುವುದು ಕೂಡಾ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆಯೇ ಆಗಿದ್ದರೂ ಸಹಾ, ಯಾರು ಮನೆಯಿಂದ ಹೊರಗೆ ಬರುವರು ಎನ್ನುವ ಕುತೂಹಲ ಸಹಜವಾಗಿಯೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಕೊನೆಯ ವಾರಗಳಲ್ಲಿ ಮನೆಯಿಂದ ಯಾರೇ ಹೊರಗೆ ಬಂದರು ಸಹಾ ಇದು ವೀಕ್ಷಕರಿಗೆ ಹಾಗೂ ಅವರ ಅಭಿಮಾನಿಗಳಿಗೆ ಇದು ಬೇಸರವನ್ನು ಮೂಡಿಸುತ್ತದೆ. ಏಕೆಂದರೆ ಇಲ್ಲಿಯವರೆಗೆ ಬಂದಿದ್ದಾರೆ ಎಂದರೆ ಖಂಡಿತ ಅವರು ಸಹಾ ಮನೆಯ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿರುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಮನೆಯಲ್ಲಿರುವ ಸದಸ್ಯರಲ್ಲಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಈಗಾಗಲೇ ಫಿನಾಲೇ ವೀಕ್ ಪ್ರವೇಶ ಮಾಡಿದ್ದರು. ಇನ್ನುಳಿದಂತೆ ಆರ್ಯವರ್ಧನ್ ಗುರೂಜಿ, ಜಶ್ವಂತ್ ಬೋಪಣ್ಣ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ ಹಾಗೂ ನಂದಿನಿ ಈ ವಾರದ ನಾಮಿನೇಷನ್ ಲಿಸ್ಟ್ನಲ್ಲಿ ಸ್ಥಾನವನ್ನು ಪಡೆದಿದ್ದರು. ಇವರಲ್ಲಿ ಆರ್ಯವರ್ಧನ್ ಮೊದಲು ಸೇವ್ ಆದರೆ ಅನಂತರ ಸೋಮಣ್ಣ, ಸೋನು, ಜಯಶ್ರೀ ಸೇವ್ ಆದರು. ಆದರೆ ಎಲ್ಲರಿಗಿಂತ ಕಡಿಮೆ ವೋಟ್ ಪಡೆದು ನಂದಿನಿ ಮನೆಯಿಂದ ಹೊರಗೆ ಬಂದಿದ್ದಾರೆ.