ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು! ಬಿಗ್ ಬಾಸ್ ಗೆ ವಾರ್ನಿಂಗ್ ಕೊಟ್ಟ ಸೋನು ಗೌಡ, ಮುಂದೆ ಏನಾಗಲಿದೆ?

0 3

ಬಿಗ್ ಬಾಸ್ ಒಟಿಟಿ ಕನ್ನಡ ಮೊದಲನೇ ಸೀಸನ್ ಆರಂಭವಾಗಿ ಭರ್ಜರಿಯಾಗಿ ಸದ್ದು ಮತ್ತು ಸುದ್ದಿಯನ್ನು ಮಾಡುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ಆಟ ಬಹಳ ಜೋರಾಗಿ ನಡೆದಿದೆ‌. ಆದರೆ ಒಂದು ವಿಶೇಷ ಏನೆಂದರೆ ಬಿಗ್ ಬಾಸ್ ಇತಿಹಾಸದಲ್ಲೇ ನಡೆಯದ ಒಂದು ಬೆಳವಣಿಗೆ ಈ ಓಟಿಟಿ ಶೋ ನಲ್ಲಿ ನಡೆದಿದೆ. ಅದೇನು ಎನ್ನುವುದಾದರೆ ಬಿಗ್ ಬಾಸ್ ಮನೆಗೆ ಈ ವರೆಗೆ ಬಹಳಷ್ಟು ಜನ ಸೆಲೆಬ್ರಿಟಿಗಳು ಮತ್ತು ಸಾಮಾನ್ಯರು ಸಹಾ ಒಂದು ಸೀಸನ್ ನಲ್ಲಿ ಪ್ರವೇಶ ಮಾಡಿದ್ದಾರೆ. ಆದರೆ ಯಾವ ಸೀಸನ್ ನಲ್ಲೂ ಯಾವೊಬ್ಬ ಮನೆಯ ಸದಸ್ಯನೂ ಬಿಗ್ ಬಾಸ್ ಕಡೆ ಪಡೆಯದಷ್ಟು ವಾರ್ನಿಂಗ್ ಅನ್ನು ಈ ಬಾರಿ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಪಡೆದುಕೊಂಡು ಸುದ್ದಿಯಾಗಿದ್ದಾರೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಆಟ ಆಡುತ್ತಾ, ಎರಡು ಬಾರಿ ಎಲಿಮಿನೇಷನ್ ನಿಂದ ಸೇಫ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರು ಮನೆಯಲ್ಲಿ ತಮ್ಮ ಮಾತಿನ ವಿಚಾರವಾಗಿ, ಮೈಕ್ ಧರಿಸದೇ ನಿಯಮ ಮುರಿಯುವ ವಿಚಾರದಲ್ಲಿ, ತಮ್ಮ ಜಗಳಗಳು, ನಿಯಮಗಳ ಉಲ್ಲಂಘನೆ ಹೀಗೆ ಹಲವು ವಿಚಾರಗಳಿಂದಾಗಿ ಬಿಗ್ ಬಾಸ್ ಕಡೆಯಿಂದ ವಾರ್ನಿಂಗ್ ಅಥವಾ ಬುದ್ಧಿ ಮಾತನ್ನು ಪದೇ ಪದೇ ಹೇಳಿಸಿಕೊಳ್ಳುತ್ತಲೇ ಇರುತ್ತಾರೆ. ಈ ಮೂಲಕ ಬಿಗ್ ಬಾಸ್ ಕಡೆಯಿಂದ ಎಲ್ಲರಿಗಿಂತ ಹೆಚ್ಚು ಸಲ ವಾರ್ನಿಂಗ್ ಗಳನ್ನು ಪಡೆದ ಮನೆಯ ಸದಸ್ಯರಾಗಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಮೈಕ್ ಸರಿಯಾಗಿ ಹಾಕಿಕೊಳ್ಳದ ಕಾರಣಕ್ಕೆ ಬಿಗ್ ಬಾಸ್ ಸೋನು ಶ್ರೀನಿವಾಸ್ ಗೌಡ ಅವರಿಗೆ ವಾರ್ನ್ ಮಾಡಿದ್ದಾರೆ. ಬಿಗ್ ಬಾಸ್ ಕೊಟ್ಟ ಎಚ್ಚರಿಕೆಯಿಂದ ಸೋನು ಸಿಟ್ಟಾಗಿದ್ದಾರೆ. ಸಿಟ್ಟಿನಿಂದ ಸೋನು, ಬಿಗ್ ಬಾಸ್ ನಾನು ಮೈಕ್ ಸರಿಯಾಗಿ ಹಾಕಿಕೊಂಡಿದ್ದೇನೆ. ಯಾಕೆ ನೀವು ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿರುವಿರಿ? ನನ್ನ ಮೇಲೆ ನಿಮಗೇಕೆ ಕೋಪ? ಬೇರೆಯವರಿಗೆ ನೀವು ಹೇಳುತ್ತಿಲ್ಲ. ಬೇರೆಯವರಿಗೆ ನೀವು ಹೇಳುವುದಿಲ್ಲ. ಹೆಚ್ಚು ನನಗೆ ಹೇಳುತ್ತಿದ್ದೀರಿ. ಬೇರೆಯವರಿಗೆ ಹೇಳಬೇಕಾಗಿರುವುದನ್ನು ನನ್ನ ಮೂಲಕ ಹೇಳ್ತಾ ಇದ್ದೀರಾ? ಎಂದು ಬಿಗ್ ಬಾಸ್ ಗೆ ಆವಾಜ್ ಹಾಕಿದ್ದಾರೆ ಸೋನು.

ತನ್ನ ಕೋಪ ಮುಂದುವರೆಸಿದ ಸೋನು, ಪಟ್ಟು ಹಿಡಿದು ಬಿಗ್ ಬಾಸ್ ನನಗೆ ಕ್ಷಮೆ ಕೇಳಬೇಕು ಎಂದಿದ್ದಾರೆ. ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಬಿಗ್ ಬಾಸ್ ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸೋನು ಗೌಡ ಬಿಗ್ ಬಾಸ್ ಮೇಲೆ ಕೋಪ ಮಾಡಿಕೊಂಡು ಆಡಿದ ಮಾತುಗಳ ಪ್ರೊಮೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವೈವಿದ್ಯಮಯ ಕಾಮೆಂಟ್ ಗಳು ಹರಿದು ಬರುತ್ತಿದೆ. ‌ಸೋನು ಅವರ ಬೆಂಬಲಿಗರು ಸೋನುಗೆ ಮೆಚ್ಚುಗೆಗಳನ್ನು ಹರಿಸಿದ್ದಾರೆ.

Leave A Reply

Your email address will not be published.