ಬಿಗ್ ಬಾಸ್ ಆರಂಭದಲ್ಲೇ ವಿಘ್ನ: ಶೋ ನಿರೂಪಕರನ್ನು ಬದಲಾಯಿಸಿ ಎಂದು ನೆಟ್ಟಿಗರ ಕೂಗು

Written by Soma Shekar

Published on:

---Join Our Channel---

ಕಿರುತೆರೆಯ ಲೋಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡದಲ್ಲಿ ಇತ್ತೀಚಿಗಷ್ಟೇ ಸೀಸನ್ ಎಂಟು ಮುಗಿದಿದೆ. ಮಂಜು ಪಾವಗಡ ಟ್ರೋಫಿ ಗೆದ್ದಾಗಿದೆ.‌ ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಮಿನಿ ಬಿಗ್ ಬಾಸ್ ಕೂಡಾ ಆರಂಭವಾಗಿದೆ. ಇನ್ನು ಬಿಗ್ ಬಾಸ್ ಕ್ರೇಜ್ ಯಾವ ಮಟ್ಟಕ್ಕೆ ಇದೆ ಎಂದರೆ ಹಿಂದಿಯಲ್ಲಿ ಇದೇ ಮೊದಲ ಬಾರಿಗೆ ಓಟಿಟಿ ಯಲ್ಲಿ ಸಹಾ ಬಿಗ್ ಬಾಸ್ ಆರಂಭವಾಗಿ ಈಗಾಗಲೇ ದೊಡ್ಡ ಸದ್ದನ್ನು ಮಾಡುತ್ತಿದೆ. ಒಂದಂತೂ ನಿಜ. ಬಿಗ್ ಬಾಸ್ ಆರಂಭಕ್ಕೂ ಮೊದಲು ಚರ್ಚೆ, ಆರಂಭದ ನಂತರವೂ ಚರ್ಚೆ ಹಾಗೂ ಮುಗಿದ ಮೇಲೂ ಕೂಡಾ ಚರ್ಚೆಗಳನ್ನು ಹುಟ್ಟು ಹಾಕುತ್ತದೆ. ಇದೀಗ ತೆಲುಗಿನಲ್ಲಿ ಬಿಗ್ ಬಾಸ್ ನ ಐದನೇ ಸೀಸನ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ವಾಹಿನಿ ಈಗಾಗಲೇ ಸೀಸನ್ ಐದರ ಪ್ರೊಮೊ ಕೂಡಾ ಬಿಡುಗಡೆ ಮಾಡಿದೆ.

ತೆಲುಗಿನಲ್ಲಿ ಬಿಗ್ ಬಾಸ್ ಗೆ ಇದು ಐದನೇ ಯಶಸ್ವಿ ಸೀಸನ್. ಐದನೇ ಸೀಸನ್ ಆರಂಭದ ಸೂಚನೆ ದೊರೆತ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರೆ ಎನ್ನಲಾಗುವ ಸಂಭಾವ್ಯ ಸೆಲೆಬ್ರಿಟಿಗಳ ಪಟ್ಟಿ ಕೂಡಾ ಸುದ್ದಿಯಾಗಿದೆ. ಈಗ ಇವೆಲ್ಲವುಗಳ ನಡುವೆ ವಾಹಿನಿ ಶೋ ನ ನಿರೂಪಕ ತೆಲುಗಿನ ಸ್ಟಾರ್ ನಟ ನಾಗಾರ್ಜುನ ಅವರ ಕಾಣಿಸಿಕೊಂಡಿರುವ ಸೀಸನ್ ಐದರ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸೀಸನ್ ಐದನ್ನು ನಟ ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದಾರೆ ಎನ್ನುವುದನ್ನು ವಾಹಿನಿ ಸ್ಬಷ್ಟ ಪಡಿಸಿದೆ.

ವಾಹಿನಿ ಪ್ರೊಮೋ ಬಿಡುಗಡೆ ಮಾಡಿದ ನಂತರ ಇದೀಗ ನೆಟ್ಟಿಗರಿಂದ ಹೊಸ ಬೇಡಿಕೆಯೊಂದು ಹೊರ ಬಂದಿದೆ. ಅನೇಕ ಮಂದಿ ಕಾಮೆಂಟ್ ಗಳನ್ನು ಮಾಡುವ ಮೂಲಕ ಬಿಗ್ ಬಾಸ್ ಶೋ ನ ನಿರೂಪಕರನ್ನು ಬದಲಿಸಿ ಎಂದು ಹೇಳುತ್ತಿದ್ದಾರೆ. ಹೌದು ತೆಲುಗಿನ ಬಿಗ್ ಬಾಸ್ ಅನ್ನು ನಾಗಾರ್ಜುನ ಅವರು ಸರಿಯಾಗಿ ನಿರೂಪಣೆ ಮಾಡುವುದಿಲ್ಲ, ಅವರ ನಿರೂಪಣೆ ಸಮಾಧಾನವನ್ನು ನೀಡಿಲ್ಲ ಎನ್ನುವ ಕಾರಣಗಳನ್ನು ನೀಡಿದ ಬಹಳಷ್ಟು ಜನರು ಐದನೇ ಸೀಸನ್ ಗೆ ನಿರೂಪಕರನ್ನು ಬದಲಿಸಿ ಎಂದು ಹೇಳಿದ್ದಾರೆ. ನಟ ನಾಗಾರ್ಜುನ ತೆಲುಗಿನ ಬಿಗ್ ಬಾಸ್ ಅನ್ನು ಮೂರನೇ ಸೀಸನ್ ನಿಂದ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ.

ತೆಲುಗಿನಲ್ಲಿ ಬಿಗ್ ಬಾಸ್ ಆರಂಭವಾದಾಗ ಮೊದಲ ಸೀಸನ್ ಅನ್ನು ನಟ ಜೂನಿಯರ್ ಎನ್ ಟಿ ಆರ್ ನಡೆಸಿಕೊಟ್ಟಿದ್ದರು. ಅದಾದ ನಂತರ ಎರಡನೇ ಸೀಸನ್ ಗೆ ಎನ್ ಟಿ ಆರ್ ಜಾಗಕ್ಕೆ ಬಂದವರು ನಟ ನಾನಿ. ಮೂರನೇ ಸೀಸನ್ ಗೆ ನಾನಿ ಕೂಡಾ ಬದಲಾದರು, ಅವರ ಜಾಗಕ್ಕೆ ಹಿರಿಯ ನಟ ನಾಗಾರ್ಜುನ ಬಂದರು. ಅವರು ನಂತರ ನಾಲ್ಕನೇ ಸೀಸನ್ ಕೂಡಾ ತಾನೇ ನಿರೂಪಣೆ ಮಾಡಿದ್ದರು. ಇದೀಗ ಐದನೇ ಸೀಸನ್ ಕೂಡಾ ಅವರೇ ನಿರೂಪಣೆ ಮಾಡುವುದು ಖಚಿತವಾಗಿದೆ. ಇದೇ ವೇಳೆ ನೆಟ್ಟಿಗರ ಒಂದು ಅಸಮಾಧಾನ ಸಹಾ ಹೊರ ಬಂದಿದೆ.

Leave a Comment