ಬಿಗ್ಬಾಸ್ ಮನೆಯಿಂದ ಚಕ್ರವರ್ತಿ ಚಂದ್ರಚೂಡ್ ಔಟ್: ಎಲಿಮಿನೇಷನ್ ಹಿಂದಿನ ಅಸಲಿ ಕಾರಣ ಬೇರೇನೇ ಇದೆ.

0
196

ಕನ್ನಡ ಬಿಗ್ ಬಾಸ್ ಸೀಸನ್ ಎಂಟು ಫಿನಾಲೆಯ ಕಡೆಗೆ ದಾಪು ಗಾಲು ಹಾಕುತ್ತಿದೆ. ಇನ್ನೇನು ಅಗೋ ಇಗೋ ಎನ್ನುವ ವೇಳೆಗೆ ಫಿನಾಲೇ ದಿನ ಬಂದೇ ಬಿಡುವಂತೆ ಇದೆ. ಫಿನಾಲೆ ಹತ್ತಿರವಾದಂತೆ ಮನೆಯಲ್ಲಿ ಆಟವು ಜೋರಾಗಿ ನಡೆದಿದೆ. ಈ ನಡುವೆ ನಿನ್ನೆ ಮಿಡ್ ವೀಕ್ ಎವಿಕ್ಷನ್ ನಡೆದಿದೆ. ಕಳೆದ ಕೆಲವು ದಿನಗಳಿಂದಲೂ ಸೋಶಿಯಲ್ ಮೀಡಿಯಾಗಳಲ್ಲಿ ಜನರು ವ್ಯಕ್ತಪಡಿಸಿದ್ದ ಸಿ ಟ್ಟು, ಅಸಮಾಧಾನಗಳಿಗೆ ನಿನ್ನೆ ಉತ್ತರ ಸಿಕ್ಕಿತೆಂದು ಕೆಲವರು ತಮ್ಮ ಪೋಸ್ಟ್ ಗಳ ಮೂಲಕ ಬರೆದುಕೊಂಡಿದ್ದಾರೆ. ಹೌದು ಈ ವಾರ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆದು ಇಬ್ಬರು ಸದಸ್ಯರು ಮನೆಯಿಂದ ಹೊರಗೆ ಬರುತ್ತಾರೆ ಎನ್ನುವ ಊಹೆಗಳಿದ್ದವು. ಆದರೆ ಅನಂತರ ಅದರ ಬದಲಾಗಿ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಒಬ್ಬರು ಹೊರ ಬರಲಿದ್ದಾರೆ ಎನ್ನುವ ಟ್ವಿಸ್ಟ್ ನೀಡಲಾಯಿತು.

ಟಾಸ್ಕ್ ಒಂದರ ಮೂಲಕ ಯಾರು ಮುಖ್ಯ ದ್ವಾರದ ಮುಂದೆ ಬಂದಾಗ ಬಾಗಿಲು ತೆರೆದುಕೊಳ್ಳುವುದೋ ಅವರೇ ಎಲಿಮಿನೇಟ್ ಆಗಿ ಹೊರ ಬರಲಿದ್ದಾರೆ ಎನ್ನುವ ಸೂಚನೆಯನ್ನು ನೀಡಲಾಗಿತ್ತು. ‌ಅದರಂತೆ ನಾಮಿನೇಟ್ ಆಗಿದ್ದವರಲ್ಲಿ ಚಕ್ರವರ್ತಿ ಚಂದ್ರಚೂಡ್ ಬಾಗಿಲ ಎದುರು ಬಂದಾಗ ಬಾಗಿಲು ತೆರೆದುಕೊಂಡು ಅವರು ಎಲಿಮಿನೇಷನ್ ಎದುರಿಸಿ ಮನೆಯಿಂದ ಹೊರ ಬಂದಾಗಿದೆ. ಅಲ್ಲದೇ ಚಕ್ರವರ್ತಿ ಅವರನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಸಿಟ್ಟು ತೋರಿದ್ದ ಅನೇಕ ಮಂದಿ ಈ ಎಲಿಮಿನೇಷನ್ ನೋಡಿ ಖುಷಿ ಪಟ್ಟಿದ್ದಾರೆ. ಮೊದಲೇ ಈ ಕೆಲಸ ಮಾಡಬೇಕಿತ್ತು ಎಂದಿದ್ದಾರೆ.

ಇನ್ನು ಚಕ್ರವರ್ತಿ ಚಂದ್ರಚೂಡ್ ಮನೆಯಿಂದ ಹೊರ ಬಂದ ಮೇಲೆ ಅವರ ಎಲಿಮಿನೇಷನ್ ಓಟಿನಿಂದ ಆದುದ್ದಲ್ಲ ಬದಲಾಗಿ ಅದಕ್ಕೆ ಬೇರೆಯೇ ಕಾರಣವಿದೆ ಎನ್ನುವ ಸುದ್ದಿಗಳು ಈಗ ಹರಿದಾಡಲು ಆರಂಭಿಸಿದೆ. ಹೌದು ಚಕ್ರವರ್ತಿ ಹೊರ ಬರಲು ಕಾರಣ ಓಟಲ್ಲ‌ ಬದಲಾಗಿ ಅವರ ವರ್ತನೆ ಎನ್ನುವುದು ಕೆಲವರ ವಿಚಾರವಾಗಿದೆ. ಚಕ್ರವರ್ತಿ ಅವರು ಮಾಡಿದ ತಪ್ಪುಗಳನ್ನು ಒಪ್ಪದೇ ತನ್ನನ್ನು ತಾನು ಸಮರ್ಥಿಸಿ ಕೊಳ್ಳುವುದು ಒಂದು ಕಾರಣ ಎನ್ನಲಾಗಿದೆ. ಇನ್ನು ಪ್ರಿಯಾಂಕ ತಿಮ್ಮೇಶ್ ಅವರು ಮನೆಯಿಂದ ಹೊರ ಬರುವಾಗ ಚಕ್ರವರ್ತಿ ಚಂದ್ರಚೂಡ್ ಅವರನ್ನು ನೇರ ನಾಮಿನೇಟ್ ಮಾಡಿದಾಗ ಚಕ್ರವರ್ತಿ ಅವರು ತೋರಿದ ಅ ಸ ಭ್ಯ ಸನ್ನೆಯೂ ಅವರ ಈ ಎಲಿಮಿನೇಷನ್ ಗೆ ಕಾರಣ ಎನ್ನಲಾಗಿದೆ.

ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಚಕ್ರವರ್ತಿ ಚಂದ್ರಚೂಡ್ ಅವರನ್ನು ಅ ಸ ಭ್ಯ ಸನ್ನೆಯ ಕುರಿತಾಗಿ ಪ್ರಶ್ನೆ ಮಾಡಿದಾಗಲೂ ಚಕ್ರವರ್ತಿ ತಮ್ಮನ್ನು ತಾವು ಸಮರ್ಥಿಸುವ ಪ್ರಯತ್ನ ಮಾಡಿದರು. ಆದರೆ ಕಿಚ್ಚ ಸುದೀಪ್ ಅವರ ಮೇಲೆ ಅ ಸಮಾಧಾನ‌ ಮಾಡಿಕೊಂಡು, ಪ್ರತಿ ವಾರ ತನ್ನ ಮೇಲೆ ಒಂದು ಎಪಿಸೋಡ್ ಮಾಡಲಾಗ್ತಿದೆ, ತನ್ನನ್ನು ಸ್ತ್ರೀ ನಿಂದಕ ಎನ್ನುವ ರೀತಿ ತೋರಿಸಲಾಗುತ್ತಿದೆ ಎಂದೆಲ್ಲಾ ಅಸಮಾಧಾನ ಹೊರ ಹಾಕಿದ್ದರು ಚಕ್ರವರ್ತಿ ಚಂದ್ರಚೂಡ್. ಆದರೆ ಅನಂತರ ಸುದೀಪ್ ಅವರ ಮಾತಿಗೆ ಚಕ್ರವರ್ತಿ ತಮ್ಮ ತಪ್ಪು ಒಪ್ಪಿಕೊಂಡರು. ಆದರೆ ಕಳೆದ ಕೆಲವು ದಿನಗಳಿಂದಲೂ ಜನ ಮಾತ್ರ ಅವರನ್ನು ಹೊರ ಹಾಕುವಂತೆ ಆಗ್ರಹಿಸಿದ್ದರು.

ಇದೆಲ್ಲವುಗಳ ಬೆನ್ನಲ್ಲೇ ಇದೀಗ ಮಿಡ್ ವೀಕ್ ಎವಿಕ್ಷನ್ ಮೂಲಕ ಚಕ್ರವರ್ತಿ ಚಂದ್ರಚೂಡ್ ಮನೆಯಿಂದ ಹೊರ ಬಂದಿರುವುದು ನೋಡಿದ ಮೇಲೆ ಅನೇಕರು ಖುಷಿ ಪಟ್ಟಿದ್ದಾರೆ. ಬಹುಶಃ ಅವರನ್ನು ವೇದಿಕೆಯ ಮೇಲೆ ಕರೆಯಿಸಿ ಮಾತನಾಡಿಸಿ ಕಳುಹಿಸುವುದು ಬೇಡ ಎನ್ನುವ ಕಾರಣಕ್ಕೆ ಅವರನ್ನು ವಾರದ ಮಧ್ಯದ ಎಲಿಮಿನೇಷನ್ ನಲ್ಲೇ ಮನೆಯಿಂದ ಹೊರಗೆ ಕಳುಹಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಚಕ್ರವರ್ತಿ ಚಂದ್ರಚೂಡ್ ತಮ್ಮ ಮಾತಿನಿಂದಲೇ ಜನರ ಮನಸ್ಸಿಗೆ ಬೇಸರವನ್ನು ಉಂಟು ಮಾಡಿದ್ದು ನಿಜ. ವೈಲ್ಡ್ ಕಾರ್ಡ್ ಮೂಲಕ ಶೋ ಗೆ ಎಂಟ್ರಿ ನೀಡಿದ್ದ ಅವರು ಇದೀಗ ಎಲಿಮಿನೇಷನ್ ಎದುರಿಸಿ ಹೊರ ಬಂದಿದ್ದಾರೆ.

LEAVE A REPLY

Please enter your comment!
Please enter your name here