ಬಿಕಿನಿ ಧರಿಸಿ ಉದ್ಯೋಗ ಕಳ್ಕೊಂಡ ಪ್ರಾಧ್ಯಾಪಕಿ: ಎದೆ ನಡುಗಿಸುವ ಮೊತ್ತದ ಪರಿಹಾರ ಕೇಳಿದ ವಿವಿ

Written by Soma Shekar

Published on:

---Join Our Channel---

ಭಾರತದಂತಹ ಸಂಪ್ರದಾಯಬದ್ಧ ಹಾಗೂ ಸಂಸ್ಕೃತಿ, ಸಂಸ್ಕಾರ ಎಂದು ಮಹತ್ವ ನೀಡುವ ದೇಶದಲ್ಲಿ ಶಿಕ್ಷಕರ ಹುದ್ದೆಗೆ ವಿಶೇಷವಾದ ಮಹತ್ವ ಮತ್ತು ಸ್ಥಾನವಿದೆ. ಶಿಕ್ಷಕ ಹುದ್ದೆಗೆ ಒಂದು ಗೌರವದ ಮತ್ತು ಪೂಜನೀಯ ಸ್ಥಾನವನ್ನು ಸಹಾ ನೀಡಲಾಗಿದೆ. ಆದರೆ ಈಗ ಪ್ರಾದ್ಯಾಪಕಿಯೊಬ್ಬರು ಮಾಡಿಕೊಂಡ ಎಡವಟ್ಟಿನಿಂದ ಆಕೆಯ ಉದ್ಯೋಗಕ್ಕೆ ಕುತ್ತು ಬಂದಿದೆ. ಶಿಕ್ಷಕಿ ತಾನು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ನಿಂದಾಗಿ ತಮ್ಮ ಉದ್ಯೋಗವನ್ನು ಕಳೆದುಕೊಂಡ ಘಟನೆಯೊಂದು ನಡೆದಿದೆ. ಇಷ್ಟಕ್ಕೂ ಆ ಪ್ರಾಧ್ಯಾಪಕಿ ಅಂತದ್ದೇನು ಶೇರ್ ಮಾಡಿದರು, ಅವರು ಮಾಡಿದ ಆ ಕೆಲಸದಿಂದ ಅವರು ಉದ್ಯೋಗ ಕಳೆದುಕೊಂಡಿದ್ದಾದ್ರೂ ಹೇಗೆ ಎನ್ನುವ ವಿವರಗಳನ್ನು ತಿಳಿಯೋಣ ಬನ್ನಿ.

ಕೊಲ್ಕೊತ್ತಾದ ಸೇಂಟ್ ಕ್ಸೇವಿಯರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಇನ್ಸ್ಟಾಗ್ರಾಂ ನಲ್ಲಿ ತಮ್ಮದೊಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಹೌದು, ಪ್ರಾಧ್ಯಾಪಕಿಯೊಬ್ಬರು ತಾವು ಬಿ ಕಿ ನಿ ಧರಿಸಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನು ಆಕೆಯ ವಿದ್ಯಾರ್ಥಿಯೊಬ್ಬ ನೋಡುತ್ತಿದ್ದು, ಮೊಬೈಲ್ ನಲ್ಲಿ ಆ ವಿದ್ಯಾರ್ಥಿ ಈ ಫೋಟೋ ನೋಡುವುದನ್ನು ಗಮನಿಸಿದ ಆತನ ತಂದೆ ಗಾಬರಿಗೊಂಡಿದ್ದಾರೆ. ಈ ಘಟನೆಯ ನಂತರ ವಿದ್ಯಾರ್ಥಿಯ ತಂದೆ ಆ ಶಿಕ್ಷಕಿ ಯನ್ನು ಅಮಾನತು ಮಾಡುವಂತೆ ವಿಶ್ವವಿದ್ಯಾಲಯಕ್ಕೆ ಪತ್ರವೊಂದನ್ನು ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಪ್ರಾಧ್ಯಾಪಕಿಗೆ ರಾಜೀನಾಮೆಯನ್ನು ನೀಡುವಂತೆ ಒತ್ತಾಯವನ್ನು ಹೇರಿದ್ದರಿಂದ, ಆಕೆ ಬಲವಂತವಾಗಿ ಒಲ್ಲದ ಮನಸ್ಸಿನಿಂದಲೇ ತಮ್ಮ ಉದ್ಯೋಗಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಅದು ಮಾತ್ರವೇ ಅಲ್ಲದೇ ವಿವಿ ಯು ತಮ್ಮ ಕಾಲೇಜಿನ ಪ್ರತಿಷ್ಠೆಗೆ ಆಕೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಬರೋಬ್ಬರಿ 99 ಕೋಟಿ ರೂಪಾಯಿಗಳನ್ನು ನೀಡುವಂತೆ ಪ್ರಾಧ್ಯಾಪಕಿಗೆ ಸೂಚನೆಯನ್ನು ಸಹಾ ನೀಡಿದೆ. ಇಷ್ಟಕ್ಕೂ ಪತ್ರ ಬರೆದ ವಿದ್ಯಾರ್ಥಿ ತಂದೆ ಹೇಳಿದ್ದೇನು? ಎನ್ನುವ ವಿಚಾರ ಕೂಡಾ ಮುಖ್ಯವಾಗಿದೆ.

ವಿದ್ಯಾರ್ಥಿಯ ತಂದೆ ತಮ್ಮ ಪತ್ರದಲ್ಲಿ, ಇತ್ತೀಚಿಗೆ ನನ್ನ ಮಗ ಪ್ರಾಧ್ಯಾಪಕಿಯೊಬ್ಬರ ಫೋಟೋಗಳನ್ನು ನೋಡುತ್ತಿರುವುದು ಗಮನಿಸಿ ನಾನು ದಿಗ್ಭ್ರಮೆಗೊಂಡೆ. ಆ ಪ್ರಾಧ್ಯಾಪಕಿಯು ಅ ಶ್ಲೀ ಲ ಎನ್ನುವ ರೀತಿಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅದನ್ನು ಉದ್ದೇಶಪೂರ್ವಕವಾಗಿಯೇ ಆಕೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಶಿಕ್ಷಕಿಯೊಬ್ಬರು ಬಿ ಕಿ ನಿ ಧರಿಸಿ ಫೋಟೋ ಶೇರ್ ಮಾಡಿದ್ದು, ಅದನ್ನು ನೋಡುವುದು ಪೋಷಕನಾಗಿ ನನಗೆ ನಾಚಿಕೆಗೇಡಿನ ವಿಷಯವಾಗಿದೆ. ನಾನು ನನ್ನ 18 ವರ್ಷ ವಯಸ್ಸಿನ ಮಗನನ್ನು ಇಂತಹ ಅಸಭ್ಯತೆಯಿಂದ ದೂರ ಇಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪ್ರಾಧ್ಯಾಪಕಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ಇನ್ಸ್ಟಾಗ್ರಾಂ ಖಾತೆ ಸಾರ್ವಜನಿಕ ಅಲ್ಲ, ಅದು ಖಾಸಗಿಯಾಗಿದೆ. ಬಿ ಕಿ ನಿ ಯಲ್ಲಿರುವ ಫೋಟೋ ಉದ್ಯೋಗಕ್ಕೆ ಸೇರುವ ಮೊದಲು ತೆಗೆದಿರುವುದು. ವಿದ್ಯಾರ್ಥಿಯ ತಂದೆ ನನ್ನ ಮೇಲೆ ಏಕೆ ಆಕ್ಷೇಪಾರ್ಹ ಆ ರೋ ಪ ಮಾಡಿದರೋ ಗೊತ್ತಿಲ್ಲ. ಇದರಿಂದ ನನ್ನ ಖಾಸಗಿತನಕ್ಕೆ ಧಕ್ಕೆಯುಂಟಾಗಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

Leave a Comment