ಬಾಹುಬಲಿ ಪ್ರಭಾಸ್ ನೀಡಿದ ಉಡುಗೊರೆಗೆ ಇನ್ಸ್ಟಾಗ್ರಾಂ ನಲ್ಲಿ ಧನ್ಯವಾದ ಹೇಳಿದ ಬೇಬೋ ಕರೀನಾ ಕಪೂರ್
ಸ್ಟಾರ್ ನಟ ಪ್ರಭಾಸ್ ಶೀಘ್ರದಲ್ಲೇ ಆದಿಪುರುಷ್ ಸಿನಿಮಾ ಮೂಲಕ ನಟ ಸೈಫ್ ಅಲಿ ಖಾನ್ ಜೊತೆಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಶ್ರೀ ರಾಮನಾಗಿ, ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆನ್ ಸ್ಕ್ರೀನ್ ಇವರು ಒಬ್ಬರು ಮತ್ತೊಬ್ಬರಿಗೆ ಎದುರಾಗಿ ಕಾಣಿಸಿಕೊಳ್ಳಬಹುದು ಆದರೆ ಆಫ್ ಸ್ಕ್ರೀನ್ ಈ ಇಬ್ಬರು ನಟರ ನಡುವಿನ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎನ್ನುವಂತಹ ಘಟನೆಯೊಂದು ಇತ್ತೀಚಿಗೆ ನಡೆದಿದ್ದು, ಈ ಘಟನೆಯ ವಿಷಯವೀಗ ಮಾದ್ಯಮಗಳ ಸುದ್ದಿಯಾಗಿದೆ.
ಹೌದು ನಟ ಪ್ರಭಾಸ್ ಅವರು ಇತ್ತೀಚಿಗೆ ಸೈಫ್ ಹಾಗೂ ಅವರ ಕುಟುಂಬದವರಿಗಾಗಿ ಡಿನ್ನರ್ ಅನ್ನು ಕಳುಹಿಸಿದ್ದಾರೆ. ಪ್ರಭಾಸ್ ಅವರು ಸೈಫ್ ಅವರ ಮನೆಗೆ ಬಿರಿಯಾನಿ, ರಾಯ್ತಾ, ಸಲಾಡ್ ಹಾಗೂ ಇನ್ನಿತರೆ ಫುಡ್ ಐಟಂ ಗಳನ್ನು ಡಿನ್ನರ್ ಗಾಗಿ ಕಳುಹಿಸುವ ಮೂಲಕ ತಮ್ಮ ಸ್ನೇಹವನ್ನು ಪ್ರದರ್ಶಿಸಿದ್ದಾರೆ. ಪ್ರಭಾಸ್ ಡಿನ್ನರ್ ಕಳುಹಿಸದ್ದನ್ನು ನೋಡಿ ಸೈಫ್ ಅಲಿ ಖಾನ್ ಅವರ ಪತ್ನಿ ನಟಿ ಕರೀನಾ ತುಂಬಾ ಖುಷಿಯಾಗಿದ್ದಾರೆ.
ಪ್ರಭಾಸ್ ತಮಗೆ ಪ್ರೀತಿಯಿಂದ ಕಳುಹಿಸಿದ ಡಿನ್ನರ್ ನ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕರೀನಾ ಶೇರ್ ಮಾಡಿಕೊಂಡು, ಎಲ್ಲರೊಡನೆ ಈ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದು ಮಾತ್ರವೇ ಅಲ್ಲದೇ ಅವರು ಪ್ರಭಾಸ್ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಒಂದೆರಡು ಸಾಲುಗಳನ್ನು ಸಹಾ ಬರೆದುಕೊಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕರೀನಾ ತಮ್ಮ ಪೋಸ್ಟ್ ನಲ್ಲಿ, ಬಾಹುಬಲಿ ನಿಮಗಾಗಿ ಬಿರಿಯಾನಿಯನ್ನು ಕಳುಹಿಸಿದಾಗ ಅದು ಖಂಡಿತ ಬಹಳ ಚೆನ್ನಾಗಿರುತ್ತದೆ. ಇಂತಹ ಒಂದು ಅತ್ಯುತ್ತಮ ಆಹಾರವನ್ನು ಕಳುಹಿಸಿದ್ದಕ್ಕೆ ಧನ್ಯವಾದಗಳು ಪ್ರಭಾಸ್ ಎಂದು ಬರೆದುಕೊಂಡು ಕರೀನಾ ಕಪೂರ್ ಖಾನ್ ಅವರು ಪ್ರಭಾಸ್ ನೀಡಿದ ಟ್ರೀಟ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಕರೀನಾ ಹಂಚಿಕೊಂಡ ಫೋಟೋ ಗೆ ಬಹಳಷ್ಟು ಜನ ನೆಟ್ಟಿಗರು ಸಹಾ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಸೈಫ್ ಮತ್ತು ಪ್ರಭಾಸ್ ಆದಿಪುರುಷ್ ಸಿನಿಮಾದ ಮೂಲಕ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಆದಿಪುರುಷ್ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸೈಫ್ ಅಲಿ ಖಾನ್ ರಾವಣನ ರೂಪದಲ್ಲಿ ಹೇಗೆ ಕಾಣಲಿದ್ದಾರೆನ್ನುವ ಕುತೂಹಲ ಒಂದೆಡೆಯಾದರೆ, ಶ್ರೀರಾಮನಾಗಿ ಪ್ರಭಾಸ್ ಹೇಗೆಲ್ಲಾ ಅದ್ಭುತ ಸೃಷ್ಟಿಸಲಿದ್ದಾರೆ ಎನ್ನುವುದು ಸಹಾ ಕುತೂಹಲವನ್ನು ಮೂಡಿಸಿದೆ.