ಬಾಸ್ ಮನೆಯಲ್ಲಿ ಮತ್ತೆ ಆಟ ಶುರುವಾಯ್ತು: ಎಂಟನೇ ಸೀಸನ್ ಮುಗಿದ ಬೆನ್ನಲ್ಲೇ ಹೊರ ಬಿದ್ದ ಹೊಸ ಸುದ್ದಿ

Written by Soma Shekar

Published on:

---Join Our Channel---

ಬಿಗ್ ಬಾಸ್ ಸೀಸನ್ ಎಂಟು ಮುಗಿದು ಇನ್ನೂ ಮೂರು ದಿನಗಳಾಗಿಲ್ಲ ಆದರೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಆಟ ಶುರುವಾಗಿದೆ. ಇದೇನಿದು ಇನ್ನೂ ಸೀಸನ್ ಎಂಟು ಮುಗಿದು ಹೆಚ್ಚು ದಿನಗಳಾಗುವ ಮೊದಲೇ ಹೊಸ ಸೀಸನ್ ಕೂಡಾ ಆರಂಭವಾಗೇ ಹೋಯ್ತಾ? ಎನ್ನುವ ಅನುಮಾನ ಹಾಗೂ ಪ್ರಶ್ನೆ ಖಂಡಿತ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಏನು ಅಂತೀರಾ?? ಖಾಸಗಿ ವಾಹಿನಿ ಹೆಡ್ ಆಗಿರುವ ಪರಮೇಶ್ವರ ಗುಂಡ್ಕಲ್ ಅವರು ಶೇರ್ ಮಾಡಿದ ಒಂದು ಫೋಟೋ ಹಾಗೂ ವೀಡಿಯೋ ಇಂತಹ ಒಂದು ಅನುಮಾನವನ್ನು ಪ್ರೇಕ್ಷಕರಲ್ಲಿ ಮೂಡಿಸಿದ್ದು ನಿಜವೇ ಆದರೂ ಅನಂತರ ಅದಕ್ಕೆ ಸ್ಪಷ್ಟ ಉತ್ತರ ಸಹಾ ಸಿಕ್ಕಿದೆ. ಹೌದು ಬಿಗ್ ಬಾಸ್ ಮನೆಯ ಬಾಗಿಲು ಮತ್ತೊಮ್ಮೆ ತೆರೆಯಲ್ಪಟ್ಟಿರುವುದು ನಿಜ. ಏನಿದರ ವಿಶೇಷತೆ ಎನ್ನುವುದರ ಕಡೆಗೆ ಗಮನ ಹರಿಸೋಣ.

ವಾಹಿನಿ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್ ಗಳ ಪ್ರಮುಖ ಪಾತ್ರಧಾರಿಗಳು ಕಾಣಿಸಿಕೊಂಡಿದ್ದಾರೆ.‌ ನನ್ನರಸಿ ರಾಧೆ ಸೀರಿಯಲ್ ನ ಅಭಿನವ್ ವಿಶ್ವನಾಥ್, ಕನ್ನಡತಿ ಧಾರಾವಾಹಿಯ ನಟ ಕಿರಣ್ ರಾಜ್, ಮಂಗಳ ಗೌರಿ ಮದುವೆ ಧಾರಾವಾಹಿಯ ನಟ ಗಗನ್ ಚಿನ್ನಪ್ಪ ಹಾಗೂ ಇನ್ನಿತರೆ ಪ್ರಮುಖ ನಟರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ಫೋಟೋ ಬಂದ ಕೂಡಲೇ ಪ್ರೇಕ್ಷಕರು ಬಿಗ್ ಬಾಸ್ ಹೊಸ ಸೀಸನ್ ಆಗಲೇ ಶುರುವಾಯ್ತಾ?? ಎಂದು ಶಾ ಕ್ ಆಗಿದ್ದಾರೆ.

ಆದರೆ ಇಲ್ಲಿ ಅಸಲೀ ಕಥೆ ಬೇರೆನೇ ಇದೆ ಅನ್ನೋದು ವಿಶೇಷ. ಬಿಗ್ ಬಾಸ್ ಸೀಸನ್ ಎಂಟು ಮುಗಿದಿದೆ. ಆದರೆ ಅದರ ಬೆನ್ನಲ್ಲೇ ಒಂದು ವಿಶೇಷ ಕಾರ್ಯಕ್ರಮ ಆರಂಭವಾಗುತ್ತಿದೆ, ಆದರೆ ಇದು ಬಿಗ್ ಬಾಸ್ ಅಲ್ಲ ಬದಲಾಗಿ ಇದಕ್ಕೆ ಬಿಗ್ ಬಾಸ್ ಫ್ಯಾಮಿಲಿ ಅಂತ ಹೆಸರನ್ನು ನೀಡಲಾಗಿದೆ. ಸೀರಿಯಲ್ ಗಳ ನಟ ನಟಿಯರು ಈ ಶೋ ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದ್ದು, ಅವರಿಗೆ ಟಾಸ್ಕ್ ಗಳನ್ನು ನೀಡಲಾಗುವುದು ಹಾಗೂ ಈ ಶೋ ಒಂದಷ್ಟು ದಿನಗಳ ಕಾಲ ನಡೆಯಲಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ. ಇನ್ನು ಈ ಶೋ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ.

ಬಿಗ್ ಬಾಸ್ ನ ಒಂದು ಸೀಸನ್ ಮುಗಿದ ಬೆನ್ನಲ್ಲೇ ಇಂತಹ ಒಂದು ಹೊಸ ಶೋ ವನ್ನು ಬಿಗ್ ಬಾಸ್ ಮನೆಯಲ್ಲಿ ಆರಂಭ ಮಾಡುತ್ತಿರುವುದು ಕೂಡಾ ಇದೇ ಮೊದಲ‌ ಬಾರಿಯಾಗಿದೆ. ಇನ್ನು ಬಿಗ್ ಬಾಸ್ ಅಭಿಮಾನಿಗಳಿಗೆ ಬಿಗ್ ಬಾಸ್ ಸೀಸನ್ 9 ಯಾವಾಗ ಆರಂಭವಾಗಲಿದೆ ? ಎನ್ನುವುದು ಸಹಾ ಒಂದು ಪ್ರಶ್ನೆಯಾಗಿದೆ. ಅಲ್ಲದೇ ನಟ ಕಿಚ್ಚ ಸುದೀಪ್ ಅವರು ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿ ಸೀಸನ್ ಒಂಬತ್ತು ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುವ ಸುಳಿವನ್ನು ಸಹಾ ನೀಡಿದ್ದಾರೆ. ಕಳೆದ ಬಾರಿ ಕೊರೊನಾ ದಿಂದ ಶೋ ತಡವಾಗಿ ಆರಂಭವಾಗಿತ್ತು, ಹಾಗಾದ್ರೆ ಈ ಬಾರಿ ಸರಿಯಾದ ಸಮಯಕ್ಕೆ ಆರಂಭ ಆಗುತ್ತಾ??? ಸದ್ಯಕ್ಕೆ ಇದು ಪ್ರಶ್ನೆ ಮಾತ್ರವೇ..

Leave a Comment