ನಟ ಪ್ರಭಾಸ್ ಟಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟ, ಬಾಹುಬಲಿ ಖ್ಯಾತಿಯ ಈ ನಟ ಈಗ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಬಾಹುಬಲಿ ನಂತರ ನಟನ ಎರಡು ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸನ್ನು ಪಡೆಯದೇ ಹೋದರೂ ಕೂಡಾ, ನಟನ ಚಾರ್ಮ್ ತಗ್ಗಿಲ್ಲ, ಪ್ರಸ್ತುತ ನಟ ಸಲಾರ್, ಆದಿಪುರುಷ್ ಹಾಗೂ ಪ್ರಾಜೆಕ್ಟ್ K ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾ ವಿಷಯವಾಗಿ ಅಲ್ಲದೇ ನಟ ಪ್ರಭಾಸ್ ಆಗಾಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸಹಾ ಸುದ್ದಿಯಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಅವರ ಮದುವೆಯ ವಿಚಾರವಾಗಿಯೇ ನಟ ಹೆಚ್ಚು ಬಾರಿ ಸುದ್ದಿಯಾಗುತ್ತಾರೆ.
ನಟನ ಮದುವೆ ವಿಚಾರವಾಗಿ ಆಗಾಗ ಸದ್ದು ಮಾಡುತ್ತದೆ. ಅಲ್ಲದೇ ಪ್ರಭಾಸ್ ಮತ್ತು ಅನುಷ್ಕ ಶೆಟ್ಟಿ ವಿಚಾರವಾಗಿ ಗಾಸಿಪ್ ಗಳು ಸಹಾ ಹರಿದಾಡಿ ಗಮನ ಸೆಳೆಯುತ್ತವೆ. ಆದರೆ ಇದೀಗ ಇವೆಲ್ಲವುಗಳ ನಡುವೆ ಒಂದು ಹೊಸ ಸುದ್ದಿ ವೈರಲ್ ಆಗಿದೆ. ನಟ ಪ್ರಭಾಸ್ ಬಾಲಿವುಡ್ ನಟಿಯೊಬ್ಬರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿಸಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ವಿಚಾರ ಮಾತ್ರವಲ್ಲದೇ ಇದೀಗ ನಟ ಈ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದು, ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳಿಗೆ ಈ ಸುದ್ದಿ ದೊಡ್ಡ ಶಾ ಕ್ ನೀಡಿರುವುದು ಮಾತ್ರವೇ ಅಲ್ಲದೇ ಅಚ್ಚರಿಯನ್ನು ಉಂಟು ಮಾಡುತ್ತಿದೆ.
ಈ ಹಿಂದೆ ಹಲವು ಬಾರಿ ನಟಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ವಿಚಾರವಾಗಿ ಗಾಸಿಪ್ ಗಳು ಹೆಚ್ಚಾದಾಗ ನಾವಿಬ್ಬರೂ ಕೇವಲ ಸ್ನೇಹಿತರು ಮಾತ್ರವೇ ಎನ್ನುವ ಮಾತನ್ನು ಇವರು ಹೇಳಿದ್ದರು. ಇದೀಗ ಅನುಷ್ಕಾ ನಂತರ ನಟನ ಹೆಸರು ಮತ್ತೊಬ್ಬ ನಟಿಯ ಜೊತೆಗೆ ತಳಕು ಹಾಕಿಕೊಂಡಿದೆ. ಆ ನಟಿ ಮತ್ತಾರೂ ಅಲ್ಲ, ಬಾಲಿವುಡ್ ನಲ್ಲಿ ಈಗಾಗಲೇ ಸಾಕಷ್ಟು ಹೆಸರನ್ನು ಮಾಡಿರುವ, ನಟ ಪ್ರಭಾಸ್ ಅವರ ಜೊತೆಗೆ ಆದಿಪುರಷ್ ಸಿನಿಮಾದಲ್ಲಿ ತೆರೆಯನ್ನು ಹಂಚಿಕೊಂಡಿರುವ ನಟಿ ಕೃತಿ ಸೆನೂನ್ ಎನ್ನುವುದು ಸುದ್ದಿಯಾಗಿದೆ. ಅಷ್ಟಕ್ಕೂ ಈ ಸುದ್ದಿ ಹೊರ ಬರಲು ಕಾರಣವೇನು ಎನ್ನುವುದಾದರೆ, ಅದಕ್ಕೂ ವಿವರ ಇಲ್ಲಿದೆ.
ಕೃತಿ ಸೆನನ್ ಕಾಫಿ ವಿತ್ ಕರಣ್ ಶೋ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಫ್ರೆಂಡ್ ಗೆ ಕರೆ ಮಾಡುವ ಅವಕಾಶ ಬಂದಾಗ ನಟಿ ಪ್ರಭಾಸ್ ಗೆ ಕರೆ ಮಾಡಿ ಅಚ್ಚರಿ ಮೂಡಿಸಿದ್ದು ಮಾತ್ರವೇ ಅಲ್ಲದೇ ಕರಣ್ ಗೆ ಹಾಯ್ ಹೇಳಿಸಿದ್ದಾರೆ. ನಂತರ ನೀವು ಸೂಪರ್ ಎಂದು ಹೇಳಿ, ಆಮೇಲೆ ಕರೆ ಮಾಡುವುದಾಗಿ ಹೇಳಿದ್ದಾರೆ. ಪ್ರಭಾಸ್ ಸಹಾ ನಟಿಗೆ ಟೇಕ್ ಕೇರ್ ಬೈ ಎಂದು ಹೇಳಿದ್ದಾರೆ. ಈ ದೃಶ್ಯವನ್ನು ನೋಡಿದ ಮೇಲೆ ಪ್ರಭಾಸ್ ಮತ್ತು ಕೃತಿ ಸೆನನ್ ನಡುವಿನ ಡೇಟಿಂಗ್ ಸುದ್ದಿ ಮುನ್ನೆಲೆಗೆ ಬಂದಿದ್ದು, ಇದರ ಬಗ್ಗೆ ಭರ್ಜರಿ ಚರ್ಚೆ ನಡೆಯುತ್ತಿದ್ದು, ಅಭಿಮಾನಿಗಳು ಸಹಾ ಶಾ ಕ್ ಆಗಿದ್ದಾರೆ.