ಬಾಲಿವುಡ್ ಬೆಡಗಿಯರಿಗೆ ಇಡಿ ನೋಟೀಸ್:ಅಕ್ರಮ ಹಣ ವರ್ಗಾವಣೆ ಪ್ರಕರಣ

0 0

ಒಂದಲ್ಲಾ ಎರಡಲ್ಲಾ ಬರೋಬ್ಬರಿ ಇನ್ನೂರು ಕೋಟಿ ರೂ. ಅ ಕ್ರ ಮ ಹಣ ವರ್ಗಾವಣೆಯ ವಿಷಯದಲ್ಲಿ ಬಾಲಿವುಡ್ ನ ಸಿನಿಮಾಗಳಲ್ಲಿ ತನ್ನ ಡಾನ್ಸ್ ಗಳ ಮೂಲಕವೇ ಸೆನ್ಸೇಷನ್ ಸೃಷ್ಟಿಸಿರುವ ಸೂಪರ್ ಹಿಟ್ ಡಾನ್ಸರ್ ಹಾಗೂ ನಟಿ ನೋರಾ ಫತೇಹಿ ಗೆ ಜಾರಿ ನಿರ್ದೇಶನಾಲಯವು ನೋಟೀಸ್ ಜಾರಿ ಮಾಡಿ ವಿಚಾರಣೆಯನ್ನು ನಡೆಸಿದೆ. ಕೆಲವೇ ದಿನಗಳ ಹಿಂದೆ ಜಾರಿ ನಿರ್ದೇಶನಾಲಯವು ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ ಜಾಕ್ವಿಲಿನಾ ಫರ್ನಾಂಡೀಸ್ ಗೂ ಸಹಾ ಜಾರಿ ನಿರ್ದೇಶನಾಲಯವು ನೋಟೀಸ್ ಜಾರಿ ಮಾಡಿತ್ತು. ಸುಮಾರು ಐದು ಗಂಟೆಗಳ ಕಾಲ ಜಾಕ್ವಿಲಿನಾ ಅವರ ವಿಚಾರಣೆ ನಡೆದಿತ್ತು.

ಈಗ ನಟಿ ನೋರಾ ಫತೇಹಿ ಅವರ ವಿಚಾರಣೆ ನಡೆಸಿದೆ ಜಾರಿ ನಿರ್ದೇಶನಾಲಯ. ಹೌದು ಭಾರೀ ಮೊತ್ತದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಮತ್ತು ಲೀಲಾ ಪೌಲ್ ಮೇಲೆ ಅ ಕ್ರ ಮ ಹಣ ವರ್ಗಾವಣೆಯ ಆ ರೋ ಪ ಮಾಡಲಾಗಿದ್ದು, ಸುಕೇಶ್ ಜೊತೆಗೆ ನಟಿಯರಾದ ಜಾಕ್ವಿಲಿನಾ ಮತ್ತು ನೋರಾ ಸಂಪರ್ಕದಲ್ಲಿ ಇದ್ದರು ಎನ್ನುವ ಕಾರಣದಿಂದಲೇ ಇಡಿ ಅವರಿಗೆ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ನಡೆಸಿದೆ ಎನ್ನಲಾಗಿದೆ.

ಜಾಕ್ವಿಲಿನಾ ಹಾಗೂ ನೋರಾ ಇಬ್ಬರೂ ಸಹಾ ಸುಕೇಶ್ ಜೊತೆ ಹಲವು ಸಲ ಫೋನ್ ಕರೆಗಳ ಮೂಲಕ ಸಂಪರ್ಕಕ್ಕೆ ಬಂದಿದ್ದರು ಎನ್ನುವ ಹಿನ್ನೆಲೆಯಲ್ಲಿ ಇಬ್ಬರೂ ನಟಿಯರಿಗೂ ಈ ಪ್ರಕರಣಕ್ಕೂ ಯಾವುದಾದರೂ ಸಂಬಂಧ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿಯೇ ಇಡಿ ಈ ನಟಿಯರಿಗೆ ನೋಟೀಸ್ ಜಾರಿ ಮಾಡಿದೆ ಎನ್ನಲಾಗಿದೆ. ಐದು ಗಂಟೆಗಳ ಕಾಲ ನಡೆದ ನೋರಾ ವಿಚಾರಣೆ ನಂತರ ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದೆ ಎನ್ನಲಾಗಿದೆ.

ಇಡಿ ವಿಚಾರಣೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಬಾಲಿವುಡ್ ನಟಿ ಜಾಕ್ವೆಲಿನಾ ಎರಡನೇ ಬಾರಿ ನಡೆಯಬೇಕಿದ್ದ ವಿಚಾರಣೆಗೆ ಹಾಜರಾಗದ ಕಾರಣ ನಟಿಗೆ ಮತ್ತೊಮ್ಮೆ ನೋಟೀಸ್ ಜಾರಿ ಮಾಡಲಾಗಿದೆ. ಜಾಕ್ವೆಲಿನಾ ನಂತರ ನೋರಾ ವಿಚಾರಣೆ ನಡೆದಿರುವುದು ಎಲ್ಲರ ಕುತೂಹಲವನ್ನು ಕೆರಳಿಸಿದೆ.

Leave A Reply

Your email address will not be published.