ಬಾಲಿವುಡ್ ನ ಯುವಜೋಡಿಯ ನಡುವೆ ಬ್ರೇಕಪ್: 3 ವರ್ಷಗಳ ಪ್ರೇಮ ಕಹಾನಿಗೆ ಮಂಗಳ ಹಾಡಿದ ಜೋಡಿ

0 3

ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳ ನಡುವೆ ಯಾವಾಗ ಪ್ರೇಮ ಹುಟ್ಟುತ್ತದೆ, ಯಾವಾಗ ಅದು ಇದ್ದಕ್ಕಿದ್ದಂತೆ ಮುರಿದು ಬೀಳುತ್ತದೆ ಎಂದು ಹೇಳುವುದು ಕಷ್ಟ. ಆದರೆ ಬಾಲಿವುಡ್ ವಲಯದಲ್ಲಿ ಲವ್ ಮತ್ತು ಬ್ರೇಕಪ್ ಗಳ ಕಥೆಗಳಿಗೆ ಕೊರತೆ ಖಂಡಿತಾ ಇಲ್ಲ. ಲವ್ ಆಗಿ, ಮದುವೆ ಆಗಿ, ಅನಂತರ ಬೇರೆಯಾಗಿ, ಮತ್ತೊಬ್ಬರ ಜೊತೆ ಜೀವನ ಕಟ್ಟಿಕೊಂಡ ಬಾಲಿವುಡ್ ಮಂದಿಯ ಕಥೆಗಳು ಸಾಲು ಸಾಲು ಇವೆ. ಈಗ ಮೀಡಿಯಾಗಳ ವರದಿಗಳನ್ನು ನಂಬುವುದೇ ಆದರೆ ಬಾಲಿವುಡ್ ನಲ್ಲಿ ಹೊಸದೊಂದು ಬ್ರೇಕಪ್ ಕಹಾನಿ ವರದಿಯಾಗಿದೆ. ಯುವ ಜೋಡಿಯ ನಡುವಿನ ಪ್ರೇಮ ಕಥೆಯೊಂದು ಮುರಿದು ಬಿದ್ದಿದೆ.

ಬಾಲಿವುಡ್ ಯುವಪೀಳಿಗೆಯ ನಟ ಇಶಾನ್ ಕಟ್ಟರ್ ಹಾಗೂ ನಟಿ ಅನನ್ಯಾ ಪಾಂಡೆ ಕಳೆದ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಈಗ ಅವರ ನಡುವೆ ಬ್ರೇಕಪ್ ಆಗಿದೆಯೆಂದೂ, ಇಬ್ಬರೂ ಪರಸ್ಪರ ಒಪ್ಪಿಕೊಂಡು ದೂರಾಗಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಸ್ನೇಹಿತರಾಗಿ ಉಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇಶಾನ್ ಕಟ್ಟರ್ ಹಾಗೂ ಅನನ್ಯಾ ಪಾಂಡೆ ಲವ್ ಸ್ಟೋರಿ ಖಾಲಿ ಪೀಲಿಯ ಸೆಟ್ ನಲ್ಲಿ ಆರಂಭವಾಯಿತು.

ಖಾಲಿ ಪೀಲಿ ಸಿನಿಮಾ ಸೆಟ್ ನಲ್ಲಿ ಇಬ್ಬರ ನಡುವೆ ಒಂದು ಸ್ನೇಹ ಅರಳಿತು, ಆ ಸ್ನೇಹವು ಅವರನ್ನು ಇನ್ನಷ್ಟು ಹತ್ತಿರ ಮಾಡಿತ್ತು. ಆದರೆ ಇಬ್ಬರೂ ಸಹಾ ಎಲ್ಲೂ ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಬಹಿರಂಗ ಪಡಿಸಿರಲಿಲ್ಲ. ಆದರೆ ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ ಜೋಡಿ ಈಗ ಪರಸ್ಪರ ಒಪ್ಪಿಗೆಯೊಡನೆ ದೂರಾಗಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ವೃತ್ತಿಯ ದೃಷ್ಟಿಯಿಂದ ಇಂತಹುದೊಂದು ನಿರ್ಧಾರವನ್ನು ಅವರು ಮಾಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ತಮ್ಮ ನಡುವೆ ಯಾವುದೇ ವೈ ಷ‌ ಮ್ಯ ಅಥವಾ ಭಿನ್ನಾಭಿಪ್ರಾಯ ಗಳು ಇಲ್ಲ, ಮುಂದೆ ಒಂದೇ ಸಿನಿಮಾದಲ್ಲಿ ಪಾತ್ರಗಳನ್ನು ಮಾಡುವ ಅವಕಾಶ ಸಿಕ್ಕರೂ ತಾವು ಜೊತೆಯಾಗಿ ನಟಿಸುತ್ತೇವೆ ಎನ್ನುವುದು ಸಹಾ ಅವರ ನಿರ್ಧಾರವಾಗಿದೆ ಎನ್ನಲಾಗಿದೆ. ತಮ್ಮ ದೃಷ್ಟಿಕೋನ ಹಾಗೂ ಅಭಿಪ್ರಾಯಗಳು ಭಿನ್ನ ಭಿನ್ನವಾಗಿದೆ ಎನ್ನುವ ಕಾರಣಕ್ಕೆ ಜೋಡಿ ಬೇರೆಯಾಗುತ್ತಿರುವುದಾಗಿ ಹೇಳಲಾಗುತ್ತಿದೆ. ಇಶಾನ್ ಈ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನನ್ಯಾ ಪಾಂಡೆ ಫೋಟೋಗಳನ್ನು ಶೇರ್ ಮಾಡಿದ್ದು, ಅವು ಇನ್ನೂ ಇದೆ ಅಲ್ಲೇ ಇವೆ.

Leave A Reply

Your email address will not be published.