ಬಾಲಿವುಡ್ ನ ಜನಪ್ರಿಯ, ವಿವಾದಿತ ಟಿವಿ ಶೋ ಚಿತ್ರೀಕರಣ ಮುಗಿಸಿದ ಸಮಂತಾ: ಶೋ ಬಗ್ಗೆ ಈಗ ಎಲ್ಲರ ಕುತೂಹಲ!!

Entertainment Featured-Articles Movies News

ಬಾಲಿವುಡ್ ಸಿನಿಮಾಗಳ ನಿರ್ಮಾಪಕ, ನಿರ್ದೇಶಕ ಹಾಗೂ ಹಲವು ಜನಪ್ರಿಯ ರಿಯಾಲಿಟಿ ಶೋ ತೀರ್ಪುಗಾರನಾಗಿ ಮತ್ತು ನಿರೂಪಕನಾಗಿಯೂ ಜನಪ್ರಿಯತೆಯನ್ನು ಪಡೆದುಕೊಂಡಿರುವ ಕರಣ್ ಜೋಹರ್ ನಡೆಸಿ ಕೊಡುವಂತಹ ಕಾಫಿ ವಿತ್ ಕರಣ್ ಬಾಲಿವುಡ್ ಕಿರುತೆರೆಯಲ್ಲಿ ಬಹುಜನಪ್ರಿಯ ಸೆಲೆಬ್ರೆಟಿ ಟಾಕ್ ಶೋ ಆಗಿದೆ. ಈ ಕಾರ್ಯಕ್ರಮವು ಅನೇಕ ಬಾರಿ ಸಾಕಷ್ಟು ವಿ ವಾ ದಗಳಿಗೆ ಕೂಡಾ ಕಾರಣವಾಗಿದೆ. ಅದಕ್ಕೆ ಪ್ರಮುಖ ಕಾರಣ ಶೋ ನಲ್ಲಿ ನಿರೂಪಕ ಕರಣ್ ಜೋಹರ್ ಅವರು ಸೆಲೆಬ್ರೆಟಿಗಳ ಮುಂದೆ ಇಡುವ ಪ್ರಶ್ನೆಗಳೇ ಎನ್ನುವುದು ಸುಳ್ಳಲ್ಲ.

ಇನ್ನು ಈ ಬಾರಿ ಕರಣ್ ಜೋಹರ್ ನಿರೂಪಣೆಯ ಕಾಫಿ ವಿತ್ ಕರಣ್ ಶೋ ಕಿರುತೆರೆಯ ಬದಲಾಗಿ ಡಿಸ್ನಿ ಹಾಟ್ ಸ್ಟಾರ್ ಓಟಿಟಿ ವೇದಿಕೆಯಲ್ಲಿ ತನ್ನ ಹೊಸ ಸೀಸನ್ ಅಂದರೆ ಸೀಸನ್ ಏಳನ್ನು ಪ್ರಾರಂಭ ಮಾಡುತ್ತಿದೆ. ಈ ಬಾರಿ ಕಾಫಿ ವಿತ್ ಕರಣ್ ಶೋ ಗೆ ಒಂದು ವಿಶೇಷತೆ ಖಂಡಿತ ಇದೆ. ಹೌದು, ಇದುವರೆಗೆ ಕೇವಲ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಾತ್ರವೇ ಈ ಶೋ ನಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಮೊಟ್ಟಮೊದಲ ಬಾರಿಗೆ ದಕ್ಷಿಣದ ತಾರೆಯರು ಶೋ ಗೆ ಆಹ್ವಾನಿತರಾಗಿದ್ದಾರೆ.

ದಕ್ಷಿಣದ ಸಿನಿಮಾಗಳು ಹಾಗೂ ಸ್ಟಾರ್ ಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸದ್ದನ್ನು ಮಾಡುತ್ತಿರುವ ಬೆನ್ನಲ್ಲೇ ಸಹಜವಾಗಿಯೇ ಎಲ್ಲರ ಗಮನವೂ ದಕ್ಷಿಣ ಸಿನಿಮಾ ಸ್ಟಾರ್ ಗಳ ಕಡೆಗೆ ಹೆಚ್ಚು ಹರಿದಿದೆ. ಇದೇ ಕಾರಣದಿಂದಲೇ ಕಾಫಿ ವಿತ್ ಕರಣ್ ಶೋ ಗೆ ತೆಲುಗು ಚಿತ್ರರಂಗದ ಸ್ಟಾರ್ ಗಳಿಗೆ ಆಹ್ವಾನ ನೀಡಲಾಗಿದೆ. ರಾಮ್ ಚರಣ್ ತೇಜ, ಜೂನಿಯರ್ ಎನ್ಟಿಆರ್, ನಾಗಚೈತನ್ಯ, ಅಲ್ಲು ಅರ್ಜುನ್ , ಸಮಂತ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈ ಹೊಸ ಸೀಸನ್ ನಲ್ಲಿ ಕಾಫಿ ವಿಥ್ ಕರಣ್ ಶೋ ಗೆ ಆಹ್ವಾನಿತರಾಗಿದ್ದಾರೆ ಎನ್ನಲಾಗಿದೆ.

ಈಗ ಹೊಸ ಸುದ್ದಿಯೊಂದು ಹೊರ ಬಂದಿದ್ದು ಅದರ ಪ್ರಕಾರ ನಟಿ ಸಮಂತಾ ಕಾಫಿ ವಿತ್ ಕರನ್ ಸೀಸನ್ 7 ರ ಚಿತ್ರೀಕರಣವನ್ನು ಮುಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದರೆ ಈಗಾಗಲೇ ಹೆಸರಿಸಿರುವ ಸ್ಟಾರ್ ಗಳಲ್ಲಿ ಸಮಂತಾ ಈ ಶೋನಲ್ಲಿ ಭಾಗವಹಿಸಿರುವುದು ಈಗ ಸ್ಪಷ್ಟವಾಗಿದೆ. ಶೋ ಆರಂಭದಲ್ಲೇ ಈ ಬಾರಿ ಸಮಂತ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಊಹೆಗೆ ಮೀರಿದ ಪ್ರಶ್ನೆಗಳನ್ನು ಕೇಳುವ ಕರಣ್ ಜೋಹರ್ ಸಮಂತ ಮುಂದೆ ಎಂತಹ ಪ್ರಶ್ನೆಗಳನ್ನು ಇಟ್ಟಿದ್ದಾರೆ ಹಾಗೂ ಸಮಂತ ಅವುಗಳಿಗೆ ಯಾವ ರೀತಿ ಉತ್ತರ ನೀಡಿದ್ದಾರೆ ಎನ್ನುವುದು ಈಗ ಕುತೂಹಲದ ವಿಷಯವಾಗಿದೆ.‌

Leave a Reply

Your email address will not be published.