ಬಾಲಿವುಡ್ ನ ಆ ಲೆಜೆಂಡರಿ ನಟನ ಸ್ಥಾನಕ್ಕೆ ಯಶ್ ಎಂಟ್ರಿ ಎಂದ ನಟಿ ಕಂಗನಾ ರಣಾವತ್!!

0 2

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ವಿಶ್ವದಾದ್ಯಂತ ಸಖತ್‌ ಸದ್ದು ಮಾಡುತ್ತಿದೆ.‌ ಸಿನಿಮಾ ಬಿಡುಗಡೆಯಾದ ಎಲ್ಲಾ ಭಾಷೆಗಳಿಂದಲೂ ಸಹಾ ಉತ್ತಮವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಪ್ರೇಕ್ಷಕರು. ಬಾಲಿವುಡ್ ವಲಯದಲ್ಲಿ ಕೆಜಿಎಫ್-2 ಸಿನಿಮಾ ಅಬ್ಬರಕ್ಕೆ ಬಾಲಿವುಡ್ ಸಹಾ ಅಚ್ಚರಿ ಪಡುತ್ತಿದೆ. ಕಲೆಕ್ಷನ್ ನ ವಿಚಾರದಲ್ಲೂ ಸಹಾ ಕೆಜಿಎಫ್-2 ದಾಖಲೆಗಳನ್ನು ಬರೆಯುತ್ತಾ, ಹೊಸ ದಾಖಲೆಗಳನ್ನು ಮಾಡುವತ್ತ ಮುನ್ನುಗ್ಗುತ್ತಿರುವುದು ಸಹಾ ಎಲ್ಲೆಡೆ ಸುದ್ದಿಗಳಾಗುತ್ತಿದ್ದು, ಕೆಜಿಎಫ್-2 ಯಶಸ್ಸಿಗೆ ಸಿನಿಮಾ ಸೆಲೆಬ್ರಿಟಿಗಳು ಸಹಾ ಹಾಡಿ ಹೊಗಳುತ್ತಿದ್ದಾರೆ.

ಕೆಜಿಎಫ್-2 ಸಿನಿಮಾ ಯಶಸ್ಸಿನ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಕೆಜಿಎಫ್-2 ಸಿನಿಮಾ ಮತ್ತು ನಟ ಯಶ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಡಿ ಹೊಗಳಿದ್ದಾರೆ.‌ ಕಂಗನಾ ಈ ವೇಳೆ ನಟ ಯಶ್ ಅವರನ್ನು ಬಾಲಿವುಡ್ ನ ಹಿರಿಯ ನಟ, ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಹೋಲಿಕೆ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ವಿಷಯವಾಗಿ ಕಂಗನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಕಂಗನಾ ತಮ್ಮ ಪೋಸ್ಟ್ ನಲ್ಲಿ, 70 ರ ದಶಕದಲ್ಲಿ ಅಮಿತಾಬ್ ಬಿಟ್ಟು ಹೋದ ಜಾಗವನ್ನು ನಟ ಯಶ್ ತುಂಬುತ್ತಿದ್ದಾರೆ ಎಂದು ನಟಿ ಕಂಗನಾ ಹೇಳಿದ್ದಾರೆ. 70 ರ ದಶಕದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಅಮಿತಾಬ್ ಅವರು ಬಿಟ್ಟು ಹೋದ ಸ್ಥಾನವನ್ನು ಯಶ್ ತುಂಬುತ್ತಿದ್ದಾರೆ ಎನ್ನುವ ಕಂಗನಾ ಮಾತುಗಳನ್ನು ಕೇಳಿ ಸಹಜವಾಗಿಯೇ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.‌ ಕಂಗನಾ ಕೆಜಿಎಫ್-2 ಜೊತೆಗೆ ರಾಮ್ ಚರಣ್, ಜೂ. ಎನ್ ಟಿ ಆರ್ ಮತ್ತು ಅಲ್ಲು ಅರ್ಜುನ್ ಫೋಟೋಗಳನ್ನು ಸಹಾ ಶೇರ್ ಮಾಡಿದ್ದಾರೆ.

ಅಲ್ಲದೇ ಕಂಗನಾ ಅವರು ದಕ್ಷಿಣದ ಸ್ಟಾರ್ ಗಳು ತಮ್ಮ ಸಂಸ್ಕೃತಿಯನ್ನು ಆಳವಾಗಿ ಅಳವಡಿಸಿಕೊಂಡಿದ್ದಾರೆ. ಅವರ ಪ್ರತಿಭೆ, ಕಠಿಣ ಶ್ರಮ ಗಳು ಮಾತ್ರವಲ್ಲದೇ ಅವರ ಸ್ವಂತಿಕೆಯು ಜನರ ಮನಸ್ಸನ್ನು ಗೆಲ್ಲುವುದಕ್ಕೆ ಕಾರಣ ಎಂದು ಕಂಗನಾ ಹೇಳಿದ್ದಾರೆ.‌ ಕಂಗನಾ ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಸಿನಿಮಾಗಳನ್ನು ಹಾಗೂ ಇಲ್ಲಿನ ಸ್ಟಾರ್ ಗಳನ್ನು ಹಾಡಿ ಹೊಗಳುತ್ತಾ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

Leave A Reply

Your email address will not be published.