ಬಾಲಿವುಡ್ ನ ಆ ನಟನನ್ನು ‘ಹ್ಯಾಂಡ್ಸಮ್’ ಎನ್ನುತ್ತಾ ವಿಶೇಷ ಶುಭಾಶಯ ಕೋರಿದ ರಶ್ಮಿಕಾ ಮಂದಣ್ಣ‌

0
197

ನಟಿ ರಶ್ಮಿಕಾ ಮಂದಣ್ಣ‌ ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಅಂದ್ರೆ ತಪ್ಪೇನಿಲ್ಲ. ಇತ್ತ ದಕ್ಷಿಣದಲ್ಲಿ ಮಾತ್ರವೇ ಅಲ್ಲದೇ ಇನ್ನೊಂದು ಕಡೆ ಬಾಲಿವುಡ್ ನಲ್ಲಿ ಕೂಡಾ‌ ಮಿಂಚ್ತಾ ಇರೋ ಈ ಕೊಡಗಿನ ಬೆಡಗಿಗೆ ಇರೋ ಬೇಡಿಕೆ ಅಷ್ಟಿಷ್ಟಲ್ಲ. ಒಂದು ಕಡೆ ಸಿನಿಮಾಗಳು, ಇನ್ನೊಂದು ಕಡೆ ಜಾಹೀರಾತುಗಳು ಹೀಗೆ ಎಲ್ಲೆಲ್ಲೂ ರಶ್ಮಿಕಾ ಹವಾ ನಡೀತಾ ಇದೆ. ಒಂದು ಕಡೆ ಟ್ರೋಲ್ ಆದಷ್ಟು ಅದೇ ರಶ್ಮಿಕಾ ಪಾಪುಲಾರಿಟಿಗೂ ಕೂಡಾ ಕಾರಣವಾಗ್ತಿದೆ ಎಂದೇ ಹೇಳಬಹುದು. ರಶ್ಮಿಕಾ ಏನೇ ಮಾಡಿದ್ರು ಸಹಾ ಅದು ಸುದ್ದಿಯಾಗೋದ್ರಲ್ಲಿ ಅನುಮಾನಾನೇ ಇಲ್ಲ.

ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ರು ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ರಶ್ಮಿಕಾ ಸಖತ್ ಆ್ಯಕ್ಟೀವ್ ಇದ್ದಾರೆ. ರಶ್ಮಿಕಾ ಶೇರ್ ಮಾಡೋ ಫೋಟೋಗಳನ್ನು, ವೀಡಿಯೋಗಳನ್ನು ಮೆಚ್ಚಿ ಹಾಡಿ ಹೊಗಳೋ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇನ್ನು ಮೊನ್ನೆ ಮೊನ್ನೆ ರಶ್ಮಿಕಾ ಬಾಲಿವುಡ್ ನಟನೊಬ್ಬನ ಜೊತೆ ಒಳ ಉಡುಪು ಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡು, ತೀವ್ರವಾದ ಟ್ರೋಲ್ ಗೆ ಒಳಗಾಗಿದ್ದರು.

ಈಗ ರಶ್ಮಿಕಾ ಬಾಲಿವುಡ್ ನ ನಟ ಒಬ್ಬರನ್ನು ಹ್ಯಾಂಡ್ಸಮ್ ಅಂತ ಕರೆದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆದಿದ್ದಾರೆ. ಹಾಗಾದ್ರೆ ಯಾರು ಆ ನಟ ಅಂತೀರಾ?? ಆ ನಟ ಮತ್ತಾರೂ ಅಲ್ಲ, ಬಾಲಿವುಡ್ ನ ಬಿಗ್ ಬಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು. ಹೌದು ಇಂದು ನಟ ಅಮಿತಾಬ್ ಅವರ ಜನ್ಮದಿನವಾಗಿದೆ.

ಅಮಿತಾಬ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಶ್ಮಿಕಾ ಟ್ವೀಟ್ ಮಾಡಿ, ಹ್ಯಾಂಡ್ಸಮ್ ಪಪ್ಪಾಜಿ, ನೀವು ಬಹಳ ಅದ್ಭುತವಾದ ವ್ಯಕ್ತಿ. ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ. ನೀವು ಇಂತಹ ಅದ್ಭುತ ವ್ಯಕ್ತಿಯಾಗಿರುವುದಕ್ಕೆ ಧನ್ಯವಾದಗಳು. ನಿಮಗೆ ದೇವರು ಸುಖ, ಸಂತೋಷ , ಪ್ರೀತಿ ಹಾಗೂ ಆರೋಗ್ಯ ನೀಡಲಿ ಎಂದು ಹಾರೈಸುತ್ತೇವೆ ಎಂದು ಬರೆದುಕೊಂಡು ಅಮಿತಾಬ್ ಅವರಿಗೆ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.

LEAVE A REPLY

Please enter your comment!
Please enter your name here