ಬಾಲಿವುಡ್ ನ‌ ಈ ಸ್ಟಾರ್ ನೊಡನೆ ಡ್ಯುಯೆಟ್ ಹಾಡಲು ಒಂದಾದ್ರು ದಕ್ಷಿಣದ ಹಾಟ್ ಬೆಡಗಿಯರು

Written by Soma Shekar

Published on:

---Join Our Channel---

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಪ್ರಸ್ತುತ ಅವರು ಕಭಿ ಈದ್ ಕಭೀ ದಿವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‌ಆದರೆ ಅದರ ನಡುವೆಯೇ ಅವರ ಹೊಸ ಸಿನಿಮಾ ನೋ ಎಂಟ್ರಿ ಮೇ ಎಂಟ್ರಿ ಸಿನಿಮಾದ ವಿಚಾರ ಕೂಡಾ‌ ಈಗ ಸಖತ್ ಸದ್ದು ಮಾಡಿದೆ. ನೋ ಎಂಟ್ರಿ ಸಿ‌ನಿಮಾದ ಸೀಕ್ವೆಲ್ ಗೆ ಭರ್ಜರಿಯಾಗಿ ಸಿದ್ಧತೆ ಗಳು ನಡೆದಿರುವಾಗಲೇ ಈ ಸಿನಿಮಾಕ್ಕೆ ದಕ್ಷಿಣದ ಇಬ್ಬರು ಸ್ಟಾರ್ ನಟಿಯರು ‌ಎಂಟ್ರಿ ನೀಡುತ್ತಿರುವ ವಿಚಾರ ಈಗ ಸುದ್ದಿಯಾಗಿದ್ದು ಅಭಿಮಾನಿಗಳಿಗೆ ಈ ವಿಷಯ ಅಚ್ಚರಿಯ ಜೊತೆಗೆ ಖುಷಿಯನ್ನು ಸಹಾ ನೀಡಿದೆ.

ಹೌದು, ವರದಿಗಳ ಪ್ರಕಾರ ಸಲ್ಮಾನ್ ಖಾನ್ ಜೊತೆ ದಕ್ಷಿಣದಲ್ಲಿ ಸಿಕ್ಕಾಪಟ್ಟೆ ಸುದ್ದಿಗಳಲ್ಲಿ ಸದ್ದು ಮಾಡುತ್ತಿರುವ ಟಾಪ್ ನಟಿಯರಾಗಿರುವ ಸಮಂತಾ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಕೂಡಾ ನಟಿಸಲಿದ್ದಾರೆ ಎನ್ನುವ ವಿಷಯ ಈಗ ಹಾಟ್ ಟಾಪಿಕ್ ಆಗಿದೆ. ನೋ ಎಂಟ್ರಿ ಮೇ ಎಂಟ್ರಿ ಸಿನಿಮಾಕ್ಕಾಗಿ ತೆರೆ ಮರೆಯಲ್ಲಿ ಎಲ್ಲಾ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದ್ದು, ಈ ಸಿನಿಮಾದಲ್ಲಿ ಬಾಲಿವುಡ್ ನ ದಿಗ್ಗಜ ನಟರಾದ ಅನಿಲ್ ಕಪೂರ್,ಶಾರೂಖ್ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆನ್ನಲಾಗಿದೆ.‌

ಈಗ ಇದೇ ಸಿನಿಮಾದಲ್ಲಿ ನಟಿಸಲು ಪುಷ್ಪ‌ ಸಿನಿಮಾ ಮೂಲಕ ಸದ್ದು ಮಾಡಿದ ಇಬ್ಬರು ಬ್ಯೂಟಿ ಗಳಾದ ಸಮಂತಾ ಮತ್ತು ರಶ್ಮಿಕಾಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ರಶ್ಮಿಕಾ ಮತ್ತು ಸಮಂತ ಜೊತೆಗೆ ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ ಹಾಗೂ ಇನ್ನೂ ಕೆಲವು ನಟಿಯರಿಗೆ ಈಗಾಗಲೇ ಈ ಸಿನಿಮಾದ ಆಫರ್ ನೀಡಲಾಗಿದೆ ಎನ್ನಲಾಗಿದ್ದು ಒಟ್ಟು ಹತ್ತು ಜನ ನಾಯಕಿಯ ರು ಕಾಣಿಸಿಕೊಳ್ಳುವರು ಎನ್ನಲಾಗಿದೆ. ಈ ಹತ್ತು ಜನ ನಟಿ ಮಣಿಯರು ಯಾರು ಎನ್ನುವುದು ಸದ್ಯಕ್ಕೆ ಕುತೂಹಲದ ವಿಷಯವಾಗಿದೆ.

Leave a Comment