ಬಾಲಿವುಡ್ ನಲ್ಲೂ ಕನ್ನಡತನವನ್ನು ಮೆರೆದ ಕಿಚ್ಚ ಸುದೀಪ್: ಪತ್ರಕರ್ತನ ಪ್ರಶ್ನೆಗೆ ಕೊಟ್ರು ಖಡಕ್ ಉತ್ತರ

Entertainment Featured-Articles Movies News

ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಭಾರತದಾದ್ಯಂತ ಭರ್ಜರಿಯಾಗಿ ನಡೆಯುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿತ್ರತಂಡವು ತಮ್ಮ ಸಿನಿಮಾದ ಪ್ರಚಾರ ಕಾರ್ಯವನ್ನು ಮಾಡುತ್ತಾ, ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದ ನಾಯಕ ಕಿಚ್ಚ ಸುದೀಪ್ ಅವರಿಗೆ ಸಹಜವಾಗಿಯೇ ಮಾದ್ಯಮಗಳಿಂದ ವಿವಿಧ ರೀತಿಯ ಪ್ರಶ್ನೆಗಳು ಎದುರಾಗುತ್ತಿವೆ. ಈ ಎಲ್ಲಾ ಪ್ರಶ್ನೆಗಳಿಗೂ ಕೂಡಾ ಬಹಳ ಸೂಕ್ತವಾದ, ಸಮರ್ಥವಾದ ಉತ್ತರವನ್ನು ನಟ ಕಿಚ್ಚ ಸುದೀಪ್ ನೀಡುತ್ತಿದ್ದಾರೆ.

ಹಿಂದಿ ಭಾಷೆಯ ವಿಚಾರದಲ್ಲಿ ಕಿಚ್ಚ ಸುದೀಪ್ ಅವರು ನೀಡಿದಂತಹ ಒಂದು ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಅಲ್ಲದೇ ಬಾಲಿವುಡ್ ಹಾಗೂ ಕನ್ನಡ ಸಿನಿಮಾಗಳನ್ನು ಈ ವಿಚಾರದಲ್ಲಿ ಎಳೆ ತರಲಾಗಿತ್ತು.ಆ ಸಂದರ್ಭದಲ್ಲಿ ಕೂಡಾ ಸುದೀಪ್ ಅವರು ಕನ್ನಡ ಭಾಷೆಯನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ವಿಕ್ರಾಂತ ರೋಣ ಸಿನಿಮಾದ ಪ್ರಚಾರದ ಸಂದರ್ಭದಲ್ಲಿಯೂ ಇಂತಹದೇ ಒಂದು ಘಟನೆ ಮರುಕಳಿಸಿದ್ದು, ಈ ಬಾರಿಯೂ ಸಹಾ ನಟ ಸುದೀಪ್ ಅವರು ತಮ್ಮ ಮಾತೃಭಾಷೆಯನ್ನು ಬಿಟ್ಟುಕೊಟ್ಟಿಲ್ಲ.

ಪತ್ರಕರ್ತರೊಬ್ಬರು ಕಿಚ್ಚ ಸುದೀಪ್ ಅವರಿಗೆ ಪ್ರಶ್ನೆಯನ್ನು ಕೇಳುತ್ತಾ, ತೆಲುಗು ಭಾಷೆಯಲ್ಲಿ ಒಳ್ಳೊಳ್ಳೆ ಕಮರ್ಷಿಯಲ್ ಸಿನಿಮಾಗಳ ನಿರ್ಮಾಣವಾಗುತ್ತಿದೆ ಹಾಗೂ ಅವು ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ತಮಿಳು ಭಾಷಾ ಚಿತ್ರರಂಗದಲ್ಲಿಯೂ ಅಂತಹ ಪ್ರಯತ್ನಗಳು ಸಾಕಷ್ಟು ನಡೆಯುತ್ತಿದೆ. ಆದರೆ ಕನ್ನಡದಲ್ಲಿ ಏಕೆ ಇಂತಹ ಪ್ರಯತ್ನಗಳು ಇಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಕಿಚ್ಚ ಸುದೀಪ್ ಅವರು ಬಹುಶಃ ನಿಮಗೆ ಕನ್ನಡ ಸಿನಿಮಾಗಳ ಬಗ್ಗೆ ತಿಳುವಳಿಕೆ ಕಡಿಮೆ ಇದೆ ಎನಿಸುತ್ತದೆ ಎಂದು ಪತ್ರಕರ್ತನಿಗೆ ತಮ್ಮ ಉತ್ತರವನ್ನು ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಸಹಾ ಅದ್ಭುತವಾದ ಸಿನಿಮಾಗಳು ನಿರ್ಮಾಣವಾಗಿದೆ. ಇಲ್ಲಿ ಯಾವ ರೀತಿಯ ಸಿನಿಮಾಗಳು ಬಂದಿವೆ ಎಂದು ತಿಳಿದುಕೊಳ್ಳಲು ನಾನು ನಿಮಗೆ ಸ್ವಾಗತವನ್ನು ಕೋರುತ್ತೇನೆ ಎಂದು ಕಿಚ್ಚ ಸುದೀಪ್ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರವನ್ನು ನೀಡುತ್ತಾ, ಮತ್ತೊಮ್ಮೆ ತಮ್ಮ ಕನ್ನಡ ಭಾಷೆಯ ಅಭಿಮಾನವನ್ನು ಮೆರೆಯುತ್ತಾ, ಬಿ ಟೌನ್ ನಲ್ಲಿ ಕನ್ನಡದ ಬಗೆಗಿನ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.