ಬಾಲಿವುಡ್ ನಲ್ಲಿ ಹೊಸ ಬಿರುಗಾಳಿ ಎಬ್ಬಿಸಲು ಸಜ್ಜಾದ ರಶ್ಮಿಕಾ: ಸೋಲಿನ ಬೆನ್ನಲ್ಲೇ ಶಾಕ್ ನೀಡಿದ ರಶ್ಮಿಕಾ!!

Entertainment Featured-Articles News

ಬಾಲಿವುಡ್ ನಿಂದ ಹಿಡಿದು ಟಾಲಿವುಡ್ ವರೆಗೆ ಸಖತ್ ಸುದ್ದಿ ಮಾಡ್ತಾ ಇರೋ ನಟಿ ಯಾರು ಅನ್ನೋದಾದ್ರೆ ಸದ್ಯಕ್ಕೆ ಇಲ್ಲಿ ತಕ್ಷಣ ಕೇಳಿ ಬರುವ ಹೆಸರು ರಶ್ಮಿಕಾ ಮಂದಣ್ಣ. ಹೌದು ಈ ನಟಿಯ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ‌ ಇದೆ. ಕನ್ನಡ ಚಿತ್ರರಂಗದಿಂದ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಇಂದು ತೆಲುಗು ಚಿತ್ರರಂಗದ ಸ್ಟಾರ್ ನಟಿ ಹಾಗೂ ಬಹು ಬೇಡಿಕೆಯ ನಟಿ ಕೂಡಾ ಹೌದು. ಇನ್ನು ಈಗಾಗಲೇ ರಶ್ಮಿಕಾ ಮಂದಣ್ಣ‌ ಎರಡು ಬಾಲಿವುಡ್ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದು, ಅವು ಬಿಡುಗಡೆಯ ನಿರೀಕ್ಷೆಯಲ್ಲಿವೆ.

ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ರಶ್ಮಿಕಾ, ಅಲ್ಲು ಅರ್ಜುನ್ ನಾಯಕತ್ವದ ಪುಷ್ಪ ಸಿನಿಮಾ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇನ್ನು ಇತ್ತೀಚಿಗೆ ರಶ್ಮಿಕಾ ಅಭಿನಯದ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ನಿರೀಕ್ಷಿತ ಮಟ್ಟದ ಗೆಲುವನ್ನು ಪಡೆಯುವಲ್ಲಿ ವಿಫಲವಾಗಿದೆ. ರಶ್ಮಿಕಾ ಪಾಲಿನ ಮೊದಲ ಸೋಲು ಕೂಡಾ ಹೌದು ಎನ್ನಲಾಗಿದೆ. ಹೀಗೆ ನಟಿಯ ಮೊದಲ ಸೋಲು ಎನ್ನುವಾಗಲೇ ಈಗ ಭರ್ಜರಿ ಸುದ್ದಿಯೊಂದು ಹೊರ ಬಂದಿದೆ. ರಶ್ಮಿಕಾ ಅಭಿಮಾನಿಗಳು ಖುಷಿಯಾಗಿದ್ದಾರೆ.

ಹೌದು, ನಟಿ ರಶ್ಮಿಕಾ ಮಂದಣ್ಣ‌ ಅಭಿನಯದ ಎರಡು ಬಾಲಿವುಡ್ ಸಿನಿಮಾಗಳು ಇನ್ನೂ ಬಿಡುಗಡೆ ಆಗುವ ಮೊದಲೇ ಇದೀಗ ರಶ್ಮಿಕಾ ಬಾಲಿವುಡ್ ನ ಸ್ಟಾರ್ ನಟನ ಜೊತೆಗೆ ಹೊಸ ಸಿನಿಮಾದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದ್ದು, ರಶ್ಮಿಕಾ ಗೆ ಸಿಕ್ಕ ಈ ಹೊಸ ಅವಕಾಶದ ಬಗ್ಗೆ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಹಾಗಾದರೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿರುವುದು ಯಾರ ಜೊತೆ? ಬನ್ನಿ ಅದನ್ನು ತಿಳಿಯೋಣ.

ತೆಲುಗು ಸಿನಿಮಾ ರಂಗದ ಜನಪ್ರಿಯ ನಿರ್ದೇಶಕ, ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಬಾಲಿವುಡ್ ನಲ್ಲಿ ನಟ ರಣಬೀರ್ ಕಪೂರ್ ನಾಯಕನನ್ನಾಗಿ ಅನಿಮಲ್ ಹೆಸರಿನ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ಒಂದು ವಿಶೇಷ ಹಾಡಿಗೆ ಅಥವಾ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ನಟಿ ರಶ್ಮಿಕಾ ಮಂದಣ್ಣ‌ ಅವರನ್ನು ಅಪ್ರೋಚ್ ಮಾಡಲಾಗಿದೆ ಎನ್ನಲಾಗಿದೆ. ಈ ಘೋಷಣೆ ಅಧಿಕೃತವಾಗಿ ಹೊರ ಬಂದರೆ, ರಶ್ಮಿಕಾ ಬಾಲಿವುಡ್ ಸಿನಿಮಾದಲ್ಲಿ ಐಡಂ ಹಾಡಿಗೆ ಹೆಜ್ಜೆ ಹಾಕುವುದು ಖಚಿತ.

ಪುಷ್ಪ ಸಿನಿಮಾದಲ್ಲಿ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಿದ ಮೇಲೆ ಹುಟ್ಟಿಕೊಂಡ ಕ್ರೇಜ್ ಯಾವ ಮಟ್ಟಕ್ಕೆ ಇದೆ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಈಗ ರಶ್ಮಿಕಾ ಗೆ ಐಟಂ ಹಾಡಿಗೆ ಹೆಜ್ಜೆ ಹಾಕುವ ಅವಕಾಶವೊಂದು ಒದಗಿ ಬಂದಿದ್ದು ರಶ್ಮಿಕಾ ಇದನ್ನು ಒಪ್ಪಿಕೊಂಡು,ಹೊಸ ಟ್ರೆಂಡ್ ಹುಟ್ಟು ಹಾಕಲು ಸಜ್ಜಾಗುವರಾ? ತಾನು ಐಟಂ ಸಾಂಗ್ ಮಾಡೋಕು ಸೈ ಅಂತ ಸಾಬೀತು ಮಾಡ್ತಾರಾ?? ಕಾದು ನೋಡಬೇಕಿದೆ. ಒಟ್ಟಿನಲ್ಲಿ ರಶ್ಮಿಕಾ ಗೆ ಸಿಕ್ಕಿರುವ ಹೊಸ ಅವಕಾಶ ಯಾವ ಜಾದೂ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.