ಬಾಲಿವುಡ್ ನಲ್ಲಿ ರಶ್ಮಿಕಾ ಕ್ರೇಜ್: ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಸ್ಟಾರ್ ನಟನಿಗೆ ರಶ್ಮಿಕಾ ನಾಯಕಿ

0 2

ಕನ್ನಡತಿ ರಶ್ಮಿಕಾ ಮಂದಣ್ಣ ಕನ್ನಡ ಭಾಷೆಯಲ್ಲಿ ನಟಿಸಿ, ಅನಂತರ ದಕ್ಷಿಣದ ಅನ್ಯ ಭಾಷೆಗಳ ಸಿನಿಮಾ ರಂಗಗಳಲ್ಲಿ ಭರ್ಜರಿ ಯಶಸ್ಸನ್ನು ಪಡೆದು, ಈಗಾಗಲೇ ಬಾಲಿವುಡ್ ಗೆ ಎಂಟ್ರಿ ನೀಡಿ ಪಂಚಭಾಷಾ ತಾರೆ ಎನ್ನುವ ಹೆಸರನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ದಕ್ಷಿಣ ಚಿತ್ರರಂಗದಲ್ಲಿ ಮಾತ್ರವೇ ಅಲ್ಲದೇ ರಶ್ಮಿಕಾ ಬಾಲಿವುಡ್ ನಲ್ಲಿಯೂ ಸಹಾ ಬಹು ಬೇಡಿಕೆಯ ನಟಿಯಾಗಿ ಛಾಪನ್ನು ಮೂಡಿಸುವತ್ತ ದಾಪುಗಾಲು ಹಾಕುತ್ತಿದ್ದಾರೆ. ಬಾಲಿವುಡ್ ನಲ್ಲಿ ರಶ್ಮಿಕಾ ನಟಿಸಿರುವ ಯಾವ ಸಿನಿಮಾ ಕೂಡಾ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ರಶ್ಮಿಕಾ ವೇಗ ತಗ್ಗಿಲ್ಲ. ಬಾಲಿವುಡ್ ನಲ್ಲಿ ಒಂದರ ನಂತರ ಮತ್ತೊಂದು ಎನ್ನುವಂತೆ ಹೊಸ ಸಿನಿಮಾಗಳ ಆಫರ್ ಗಳು ನಟಿ ರಶ್ಮಿಕಾ ರನ್ನು ಅರಸಿ ಬರುತ್ತಲೇ ಇದೆ.

ನಟಿ ರಶ್ಮಿಕಾ ಅಭಿನಯದ ಮಿಸ್ಟರ್ ಮಜ್ನು ಹಾಗೂ ಗುಡ್ ಬೈ ಸಿನಿಮಾಗಳು ಚಿತ್ರೀಕರಣ ಮುಗಿಸಿವೆ. ಆದರೆ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಅದರ ಬೆನ್ನಲ್ಲೇ ರಶ್ಮಿಕಾ ಬಾಲಿವುಡ್ ನ ಸ್ಟಾರ್ ನಟ ರಣಬೀರ್ ಕಪೂರ್ ನಾಯಕನಾಗಿರುವ ಅನಿಮಲ್ ಸಿನಿಮಾದಲ್ಲಿ ನಾಯಕಿಯ ಪಾತ್ರ ಮಾಡುತ್ತಿದ್ದಾರೆ. ಈಗ ಇವೆಲ್ಲವುಗಳ ನಡುವೆ ಮತ್ತೊಂದು ಹೊಸ ಸುದ್ದಿ ಹೊರಬಂದಿದೆ. ಬಾಲಿವುಡ್ ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ ನ ದೊಡ್ಡ ಬಜೆಟ್ ಸಿನಿಮಾ ಮಾಡುತ್ತಿದೆ.

ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗುತ್ತಿದ್ದಾರೆ. ಹೌದು, ಕರಣ್ ಜೋಹರ್ ತಮ್ಮ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ಅಡಿಯಲ್ಲಿ, ಬಾಲಿವುಡ್ ನ ಯುವ ಸ್ಟಾರ್ ನಟ ಟೈಗರ್ ಶ್ರಾಫ್ ಗಾಗಿ ಹೊಸ ಸಿನಿಮಾ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಈ ಬಾರಿ ಟೈಗರ್ ಪಕ್ಕದಲ್ಲಿ ಹೊಸ ನಾಯಕಿಯನ್ನು ಪರಿಚಯ ಮಾಡಲು ಅವರು ತೀರ್ಮಾನಿಸಿದ್ದಾರೆ. ಕರಣ್ ಟೈಗರ್ ಶ್ರಾಫ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ಇದೊಂದು ಆ್ಯಕ್ಷನ್ ಜೊತೆಗೆ ಪ್ರೇಮ ಕಥಾ ಹಂದರವನ್ನು ಉಳ್ಳಂತಹ ಸಿನಿಮಾ ಆಗಿದ್ದು, ನಿರ್ದೇಶಕ ಶಶಾಂಕ್ ಖೇತಾನ್ ಸಿನಿಮಾ ನಿರ್ದೇಶನಕ್ಕೆ ಸಿದ್ದವಾಗಿದ್ದಾರೆ.

ಸಿನಿಮಾದಲ್ಲಿ ಟೈಗರ್ ಶ್ರಾಫ್ ಮೊಟ್ಟಮೊದಲ ಬಾರಿಗೆ ಒಬ್ಬ ಕ್ರೀಡಾಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಒಂದು ವಿಶೇಷವಾದ ಪಾತ್ರಕ್ಕೆ ನಟ ಟೈಗರ್ ಶ್ರಾಫ್ ಅವರು ಬಣ್ಣಹಚ್ಚುತ್ತಿದ್ದು, ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.‌ ಇನ್ನು ತೆರೆಯ ಮೇಲೆ ಹೊಸ ಜೋಡಿಯನ್ನು ತರುವ ಕರಣ್ ಜೋಹರ್ ಅವರ ಹೊಸ ಯೋಜನೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.