ಬಾಲಿವುಡ್ ನಲ್ಲಿ ಮಿಂಚಲು ಮಾಟ, ಮಂತ್ರದ ಮೊರೆ ಹೋಗಿದ್ದ ಕಂಗನಾ?? ವರ್ಷಗಳ ನಂತರ ಬಾಯ್ಬಿಟ್ಟ ನಟಿ!

Entertainment Featured-Articles News

ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಬೋಲ್ಡ್ ಹೇಳಿಕೆಗಳಿಗೆ ಸಖತ್ ಫೇಮಸ್. ಕಂಗನಾ ನೀಡುವ ಹೇಳಿಕೆಗಳು ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕದೇ ತಣ್ಣಗಾದ ಉದಾಹರಣೆಗಳು ಖಂಡಿತ ಇಲ್ಲ. ಕಂಗನಾ ಆಗಾಗ ಬಾಲಿವುಡ್ ನ ಸೆಲೆಬ್ರಿಟಿಗಳ ಬಗ್ಗೆ, ಬಾಲಿವುಡ್ ನ ಸ್ಟಾರ್ ಕಿಡ್ ಗಳ ಬಗ್ಗೆ ಮಾಡುವ ಕಾಮೆಂಟ್ ಗಳು ಸಹಾ ಭಾರೀ ಸದ್ದು ಮಾಡುತ್ತದೆ. ಇಂತಹ ನಟಿ ಕಂಗನಾ ರಣಾವತ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿರುವುದು ಮಾತ್ರ ತಮ್ಮ ಹೊಸ ರಿಯಾಲಿಟಿ ಶೋ ಲಾಕ್ ಅಪ್ ನಿಂದ. ಈ ಹೊಸ ರಿಯಾಲಿಟಿ ಶೋ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಲಾಕ್ ಅಪ್ ಶೋ ಕೆಲವೊಮ್ಮೆ ಅಲ್ಲಿನ ಸ್ಪರ್ಧಿಗಳ ಹೇಳಿಕೆಗಳಿಂದ, ಮತ್ತೊಮ್ಮೆ ಕಂಗನಾ ಆಡುವ ಮಾತುಗಳ ಕಾರಣದಿಂದ ಸುದ್ದಿಯಾಗುವ ಜೊತೆಗೆ ವಿ ವಾ ದ ಗಳನ್ನು ಸಹಾ ಹುಟ್ಟು ಹಾಕುವುದು ಸಾಮಾನ್ಯ ಎನಿಸಿದೆ. ಲಾಕ್ ಅಪ್ ನಲ್ಲಿ ಇಷ್ಟು ದಿನ ಪೂನಂ ಪಾಂಡೆ ಹೇಳುವ ವಿಚಾರಗಳು, ಹಂಚಿಕೊಳ್ಳುತ್ತಿದ್ದ ತನ್ನ ನೋವಿನ ಅನುಭವಗಳೇ ಸುದ್ದಿಗಳಾಗುತ್ತಿತ್ತು. ಆದರೆ ಈ ಬಾರಿ ಪಾಯಲ್ ಹೇಳಿದಂತಹ ಒಂದು ಆಶ್ಚರ್ಯಕರ ವಿಚಾರವು ಸುದ್ದಿಯಾಗಿದೆ, ಅಲ್ಲದೇ ಪಾಯಲ್ ಹೇಳಿದ ಮಾತುಗಳನ್ನು ಕೇಳಿದ ಕಂಗನಾ ಸಹಾ ಶಾ ಕ್ ಆಗಿದ್ದಾರೆ.

ಪಾಯಲ್ ಲಾಕ್ ಅಪ್ ಶೋ ನಲ್ಲಿ ಎಲಿಮಿನೇಷನ್ ಹಂತಕ್ಕೆ ಬಂದು ತಲುಪಿದ್ದಾರೆ. ಈ ವೇಳೆ ಅದರಿಂದ ತಪ್ಪಿಸಿಕೊಳ್ಳಲು ಆಕೆ ಯಾರಿಗೂ ಗೊತ್ತಿರದ ಒಂದು ಸತ್ಯವನ್ನು ಹೇಳುವಂತೆ ನಿರೂಪಕಿ ಕಂಗನಾ ಪಾಯಲ್ ಅನ್ನು ಕೇಳಿದ್ದಾರೆ. ಈ ವೇಳೆ ಪಾಯಲ್ ತಾನು ಸಿನಿಮಾ ರಂಗದಲ್ಲಿ 15 ವರ್ಷಗಳಿಂದ ಇದ್ದು, ಸೋಲು, ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ವೃತ್ತಿ ಜೀವನದಲ್ಲಿ ಸಮಸ್ಯೆಗಳು ತೀವ್ರವಾದಾಗ ತಾನು ಮಾಟ ಮಂತ್ರದ ಮೊರೆ ಹೋದೆ ಎನ್ನುವ ಅಚ್ಚರಿಯ ಮಾತನ್ನು ಹೇಳಿದ್ದಾರೆ.

ಮುಂಬೈನಲ್ಲಿ ಒಬ್ಬ ವಶೀಕರಣ ಮಾಡುವಂತಹ ವ್ಯಕ್ತಿಯನ್ನು ತಾನು ಸಂಪರ್ಕಿಸಿ, ನಿರ್ಮಾಪಕರೊಬ್ಬರನ್ನು ನನ್ನ ಜೊತೆ ಕೆಲಸ ಮಾಡಿಸುವುದಕ್ಕೆ ವಶೀಕರಣ ಮಾಡಿಸಿದ್ದೆ ಎನ್ನುವ ಮಾತುಗಳನ್ನು ಪಾಯಲ್ ಹೇಳಿಕೊಂಡಿದ್ದಾರೆ. ಪಾಯಲ್ ಆಡಿದ ಮಾತುಗಳನ್ನು ಕೇಳಿದ ನಂತರ ಕಂಗನಾ ಕೂಡಾ ತಮ್ಮ ಜೀವನದಲ್ಲಿ ನಡೆದಂತಹ ಇಂತಹುದೇ ಒಂದು ಘಟನೆಯ ಕುರಿತಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ತಾನು ಬ್ಲಾಕ್ ಮ್ಯಾಜಿಕ್ ಮಾಡುತ್ತೇನೆ ಎನ್ನುವ ಸುದ್ದಿಯಿತ್ತು ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ಬ್ಲಾಕ್ ಮ್ಯಾಜಿಕ್ ಮೂಲಕ ಬಾಲಿವುಡ್ ನಲ್ಲಿ ಅನೇಕರನ್ನು ವಶೀಕರಣ ಮಾಡುತ್ತಾರೆನ್ನುವ ಸುದ್ದಿಯಿತ್ತು. ಅಲ್ಲದೇ ನನ್ನ ಬಾಯ್ ಫ್ರೆಂಡ್ ಸಹಾ ನನ್ನ ಮೇಲೆ ಇಂತಹುದೊಂದು ಆರೋಪವನ್ನು ಮಾಡಿದ. 2016 ರಲ್ಲಿ ನಾನು ಸಹಾ ಮಾಟ, ಮಂತ್ರದ ಕಾರಣಕ್ಕಾಗಿಯೇ ಸುದ್ದಿಯಾಗಿದ್ದೆ ಎನ್ನುವ ಮಾತನ್ನು ಕಂಗನಾ ಹೇಳುತ್ತಾ ತನಗೆ ಎದುರಾದ ಪರಿಸ್ಥಿತಿಯ ವಿವರಣೆಯನ್ನು ನೀಡಿದ್ದಾರೆ. ನಂತರ ಪಾಯಲ್ ಗೆ ಕೆಲವು ಸಲಹೆಗಳನ್ನು ಹಾಗೂ ಬುದ್ಧಿ ಮಾತನ್ನು ಕಂಗನಾ ಹೇಳಿದ್ದಾರೆ.‌

ಕಂಗನಾ ಪಾಯಲ್ ಗೆ, ‌ನಿಮಗೆ ಅಂದವಿದೆ, ನೀವು ಬುದ್ಧಿವಂತರಾಗಿದ್ದೀರಿ, ನಿಮ್ಮಲ್ಲಿ ಇತರರನ್ನು ಸೆಳೆಯುವ ಶಕ್ತಿಯಿದೆ, ಪ್ರತಿಭೆಯಿದೆ, ಅದರಿಂದ ಜನರನ್ನು ಗೆಲ್ಲಿ. ಆ ಗೆಲುವು ಎಂದೂ ಶಾಶ್ವತವಾಗಿ ಇರುತ್ತದೆ ಎನ್ನುತ್ತಾ ಒಂದಷ್ಟು ಬುದ್ಧಿಮಾತನ್ನು ಸಹಾ ಹೇಳಿದ್ದಾರೆ. ಲಾಕ್ ಅಪ್ ಶೋ ಬಂದಾಗ ಇದು ಬಿಗ್ ಬಾಸ್ ನ ಕಾಪಿ ಎಂದು ಟೀಕೆಗಳು ಕೇಳಿ ಬಂದಿದ್ದವು. ಆದರೆ ಅನಂತರ ಶೋ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡು, ಯಶಸ್ಸಿನತ್ತ ದಾಪುಗಾಲು ಹಾಕಿದೆ.

Leave a Reply

Your email address will not be published.