ಬಾಲಿವುಡ್ ನಲ್ಲಿ ಬಹುತೇಕ ಎಲ್ಲಾ ನಟರಿಗಿಂತ ಎತ್ತರ ಈ ಬೆಡಗಿಯರು: ಇವರ ಹೈಟ್ ಇಷ್ಟೊಂದಾ??
ಸಿನಿಮಾರಂಗದಲ್ಲಿ ನಟಿಯರಿಗೆ ಉತ್ತಮ ನಟನಾ ಕೌಶಲ್ಯ ಹಾಗೂ ಅಂದದೊಂದಿಗೆ ಅವರ ಎತ್ತರವೂ ಪ್ರಮುಖವಾದ ಅಂಶವಾಗಿರುತ್ತದೆ. ಉತ್ತಮ ಎತ್ತರವನ್ನು ಹೊಂದಿರುವ ನಟಿಯರ ಸ್ಕ್ರೀನ್ ಪ್ರೆಸೆಂಟೇಶನ್ ಬಹಳ ಅದ್ಭುತವಾಗಿ ಇರುತ್ತದೆ. ಆದ್ದರಿಂದಲೇ ಉತ್ತಮವಾದ ಹೈಟ್ ಅಥವಾ ಎತ್ತರ ಪಡೆದುಕೊಂಡಿರುವ ನಟಿಯರಿಗೆ ಸಾಕಷ್ಟು ಅವಕಾಶಗಳು ಅರಸಿಕೊಂಡು ಬರುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ನಟಿಯರ ಈ ಎತ್ತರವು ನಿರ್ದೇಶಕರಿಗೆ ಸ್ವಲ್ಪ ಸಮಸ್ಯೆ ಉಂಟು ಮಾಡುತ್ತದೆ.
ಏಕೆಂದರೆ ನಟಿಯರು ಸಿನಿಮಾದ ನಾಯಕನಿಗಿಂತ ಎತ್ತರವಾಗಿ ಕಾಣುತ್ತಾರೆ. ಆದ್ದರಿಂದಲೇ ಕೆಲವು ಸಂದರ್ಭಗಳಲ್ಲಿ ನಟಿಯರು ಬಳಸುವ ಹೈ ಹೀಲ್ಸ್ ಗಳನ್ನು ಬದಲಾಯಿಸಲಾಗುತ್ತದೆ ಅಥವಾ ವಿಡಿಯೋ ಎಡಿಟಿಂಗ್ ನ ಮೂಲಕ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ನಟ-ನಟಿಯರ ಎತ್ತರವನ್ನು ಸಮಾಂತರವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ನಾವು ಇಂದು ನಿಮಗೆ ಬಾಲಿವುಡ್ ನಲ್ಲಿ ತಮ್ಮ ಎತ್ತರದಿಂದಲೇ ಗಮನಸೆಳೆದಿರುವಂತಹ ಪ್ರಮುಖ ನಟಿಯರ ಕುರಿತಾಗಿ ಹೇಳಲು ಹೊರಟಿದ್ದೇವೆ.
ದೀಪಿಕಾ ಪಡುಕೋಣೆ : ಓಂ ಶಾಂತಿ ಓಂ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ ದೀಪಿಕಾ ಪಡುಕೋಣೆ, ಅನಂತರ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಾಲಿವುಡ್ ನಲ್ಲಿ ಸ್ಟಾರ್ ನಟಿ, ಬಹು ಬೇಡಿಕೆಯ ನಟಿಯಾಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತ ಚಿತ್ರರಂಗದ ದುಬಾರಿ ನಟಿಯರಲ್ಲಿ ಒಬ್ಬರಾಗಿದ್ದಾರೆ ನಟಿ ದೀಪಿಕಾ ಪಡುಕೋಣೆ. ಈ ನಟಿಯ ಎತ್ತರ 5 ಅಡಿ 7 ಇಂಚು ಗಳಾಗಿದೆ.
ಸೋನಂ ಕಪೂರ್ : ಬಾಲಿವುಡ್ ನ ಎವರ್ ಗ್ರೀನ್ ಹೀರೋ ಅನಿಲ್ ಕಪೂರ್ ಅವರ ಮಗಳಾದ ಸೋನಂ ಕಪೂರ್, ಸಾವರಿಯಾ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದರು. ಆದರೆ ಅವರ ವೃತ್ತಿಜೀವನದಲ್ಲಿ ನಟಿಸಿದ ಸಿನಿಮಾಗಳ ಪಟ್ಟಿಯಲ್ಲಿ ದೊಡ್ಡ ಸಕ್ಸಸ್ ಪಡೆದ ಯಾವುದೇ ಸಿನಿಮಾಗಳು ಸೇರಲಿಲ್ಲ. ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದು ಸಾಂಸಾರಿಕ ಜೀವನದಲ್ಲಿ ಖುಷಿಯಾಗಿರುವ ಈ ನಟಿ ಸಿನಿಮಾಗಳಲ್ಲಿ ಸಕ್ರಿಯವಾಗಿಲ್ಲ. ಸೋನಂ ಕಪೂರ್ ಅವರ ಎತ್ತರ 5 ಅಡಿ 8 ಇಂಚು ಗಳಾಗಿದೆ.
ಕತ್ರಿನಾ ಕೈಫ್ : ಬಾಲಿವುಡ್ ನಲ್ಲಿ ತಮ್ಮ ಎತ್ತರದಿಂದಲೇ ಹೆಸರಾಗಿರುವ ನಟಿಯರ ಸಾಲಿನಲ್ಲಿ ಸ್ಟಾರ್ ನಟಿ ಎನಿಸಿಕೊಂಡಿರುವ ಕತ್ರಿನಾ ಕೈಫ್ ಕೂಡಾ ಸೇರಿದ್ದಾರೆ. ಬಾಲಿವುಡ್ ನ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ನಟಿಸಿರುವ ಕತ್ರಿನಾ, ತಮ್ಮದೇ ಆದ ತಾರಾ ವರ್ಚಸ್ಸನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ಬಾಲಿವುಡ್ ನಟ ವಿಕಿ ಕೌಶಲ್ ಜೊತೆಗೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ ಕತ್ರಿನಾ. ಅವರ ಎತ್ತರ 5 ಅಡಿ 6 ಇಂಚು ಗಳಾಗಿವೆ.
ಸುಶ್ಮಿತಾ ಸೇನ್ : ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ದಸ್ತಕ್ ಸಿನಿಮಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಬಾಲಿವುಡ್ ನ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ನಟಿಸಿರುವ ಈ ನಟಿ, ಅಂದ ಮತ್ತು ಎತ್ತರದಿಂದ ಮಾತ್ರವಲ್ಲದೇ ನಟನೆಯಲ್ಲೂ ಸೈ ಎನಿಸಿಕೊಂಡವರು. ಸದ್ಯಕ್ಕಂತೂ ವೆಬ್ ಸಿರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ ಈ ನಟಿ. ಸತ್ತ ಸುಶ್ಮಿತಾ ಸೇನ್ ಅವರ ಎತ್ತರ 5 ಅಡಿ 7ಇಂಚು ಗಳಾಗಿದೆ.
ಶಿಲ್ಪಾ ಶೆಟ್ಟಿ : ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟಿಯಾಗಿರುವ ಶಿಲ್ಪಾ ಶೆಟ್ಟಿ ಸಿನಿಮಾರಂಗ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿಯೂ ರಿಯಾಲಿಟಿ ಷೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರುವ ಈ ನಟಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ನಟಿಯ ಎತ್ತರ 5 ಅಡಿ 6 ಇಂಚು ಗಳಾಗಿವೆ.
ಅನುಷ್ಕಾ ಶರ್ಮಾ: ಬಾಲಿವುಡ್ ನಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ತನ್ನ ನಟನಾ ಕೌಶಲ್ಯವನ್ನು ಪ್ರದರ್ಶಿಸಿ, ಅತ್ಯುತ್ತಮ ನಟಿ ಎನಿಸಿಕೊಂಡಿರುವ ಅನುಷ್ಕಾ ಶರ್ಮಾ ಸ್ಟಾರ್ ನಟಿ ಕೂಡಾ ಹೌದು. ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಮಿಂಚುವ ಈ ನಟಿ ಸಿನಿಮಾಗಳಲ್ಲಿ ತನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದ್ದರೆ ಮಾತ್ರವೇ ನಟಿಸುತ್ತಾರೆ. ಇನ್ನು ಈ ನಟಿಯ ಎತ್ತರ 5 ಅಡಿ 6 ಇಂಚು ಗಳಾಗಿದೆ.