ಬಾಲಿವುಡ್ ನಲ್ಲಿ ಅವಕಾಶ ಕೊಡ್ತಿಲ್ಲ: ದಕ್ಷಿಣದ ಕಡೆಗೆ ಗಮನ ನೀಡಿದ್ದೇನೆ! ಅನುಪಮ್ ಖೇರ್ ಹೇಳಿದ ಕರಾಳ ಸತ್ಯ

0 3

ವಿಚಾರ ಯಾವುದೇ ಆದರೂ ಆದರೆ ಬಗ್ಗೆ ಮುಕ್ತವಾಗಿ ಮಾತನಾಡುವ ಕೆಲವೇ ಮಂದಿ ಬಾಲಿವುಡ್ ನಟರಲ್ಲಿ ಹಿರಿಯ ನಟ ಅನುಪಮ್ ಖೇರ್ ಅವರು ಒಬ್ಬರಾಗಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಯಶಸ್ಸಿನ ನಂತರ ಇದೀಗ ಅವರು ಕಾರ್ತಿಕೇಯ 2 ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಮಾತನಾಡುತ್ತಾ, ಬಾಲಿವುಡ್ ನ ಸಿನಿಮಾ ನಿರ್ಮಾಣದಲ್ಲಿ ದೊಡ್ಡ ಹೆಸರನ್ನು ಮಾಡಿರುವ ಕರಣ್ ಜೋಹರ್ ಮತ್ತು ಆದಿತ್ಯ ಚೋಪ್ರಾ ಅವರ ಕುರಿತಾಗಿ ಪ್ರಮುಖವಾದ ವಿಷಯವನ್ನು ಹಂಚಿಕೊಂಡಿದ್ದಾರೆ. ಹೇಗೆ ಬಾಲಿವುಡ್ ನ ಪ್ರಮುಖ ನಿರ್ಮಾಣ ಸಂಸ್ಥೆಗಳು ತಮಗೆ ಅವಕಾಶವನ್ನು ನೀಡದೆ ದೂರ ಇಡುತ್ತಿವೆ ಎನ್ನುವುದನ್ನು ಅನುಪಮ್ ಖೇರ್ ಅವರು ಮಾತನಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಕೆಲವು ದಿನಗಳ ಹಿಂದೆ ನಟ ಅನುಪಮ್ ಖೇರ್ ಅವರು ಬಾಲಿವುಡ್ ನಲ್ಲಿ ಫ್ಲಾಪ್ ಆಗುತ್ತಿರುವ ಸಿನಿಮಾಗಳ ಕುರಿತಾಗಿ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ, ಬಾಲಿವುಡ್ ಸ್ಟಾರ್ ಗಳನ್ನು ಮಾರಾಟ ಮಾಡುತ್ತಿದ್ದಾರೆ, ಆದರೆ ದಕ್ಷಿಣದ ಸಿನಿಮಾ ಮಂದಿ ಕಥೆಗಳ ಮೂಲಕ ಜನರ ಮುಂದೆ ಬರುತ್ತಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಅವರು ಬಾಲಿವುಡ್ ಸಿನಿಮಾಗಳಲ್ಲಿ ಪ್ರಮುಖ ನಿರ್ಮಾಣ ಸಂಸ್ಥೆಗಳ ಮಾಲೀಕರಾಗಿರುವ ಕರಣ್ ಜೋಹರ್, ಆದಿತ್ಯ ಚೋಪ್ರಾ ಮತ್ತು ಸಾಜಿದ್ ನಡಿಯಾಡ್ವಾಲ ಅವರ ಕುರಿತಾಗಿ ತನ್ನ ಭಾವನೆಗಳನ್ನು ಹಂಚಿಕೊಂಡರು.

ಅನುಪಮ್ ಖೇರ್ ಅವರು ಮಾತನಾಡುತ್ತಾ, ನಾನು ಬಾಲಿವುಡ್ ನ ಸಿನಿಮಾಗಳ ಮುಖ್ಯವಾಹಿನಿಯಲ್ಲಿ ಇಲ್ಲ. ಕರಣ್ ಜೋಹರ್, ಆದಿತ್ಯ ಚೋಪ್ರಾ ಅಥವಾ ಸಾಜಿದ್ ನಡಿಯಾಡ್ವಾಲ ಅವರ ನಿರ್ಮಾಣ ಸಂಸ್ಥೆಗಳ ಯಾವುದೇ ಸಿನಿಮಾಗಳಲ್ಲಿ ನಾನು ನಟಿಸುತ್ತಿಲ್ಲ. ಏಕೆಂದರೆ ಅವರ ಕಡೆಯಿಂದ ನನಗೆ ಯಾವುದೇ ಅವಕಾಶಗಳು ಬಂದಿಲ್ಲ. ನಾನು ಅವರೆಲ್ಲರ ಅಚ್ಚುಮೆಚ್ಚಿನ ನಟನಾಗಿದ್ದೆ. ಅವರ ನಿರ್ಮಾಣ ಸಂಸ್ಥೆಗಳ ಸಿನಿಮಾಗಳಲ್ಲಿ ನಟಿಸಿದ್ದೆ. ಈಗ ನನಗೆ ಅವಕಾಶಗಳು ನೀಡುತ್ತಿಲ್ಲ ಎನ್ನುವ ಬಗ್ಗೆ ನಾನು ಅವರನ್ನು ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.

ಅವರು ನನ್ನನ್ನು ಸಿನಿಮಾಗಳಿಗೆ ತೆಗೆದುಕೊಳ್ಳುತ್ತಿಲ್ಲವಾದ್ದರಿಂದ ನಾನು ಬೇರೆ ದಾರಿಯಲ್ಲಿ ನಡೆಯಬೇಕಾಯಿತು. ಅದೇ ದಾರಿಯನ್ನು ಆರಿಸಿಕೊಂಡು ದಕ್ಷಿಣದ ಸಿನಿಮಾಗಳ ಕಡೆಗೆ ಮುಖ ಮಾಡಿದ್ದೇನೆ. ನನಗೆ ಬಹಳ ಆಪ್ತವಾದವರೇ ನನ್ನನ್ನು ದೂರ ಇಡುವಾಗ ಅದು ನೋವನ್ನುಂಟುಮಾಡುತ್ತದೆ ಆದರೂ ನಾನು ಅವರನ್ನು ದ್ವೇಷಿಸುವುದಿಲ್ಲ. ಅವಕಾಶದ ಒಂದು ಬಾಗಿಲು ಮುಚ್ಚಿದರೆ, ಬೇರೆ ಬಾಗಿಲು ಕಿಟಕಿಗಳು ತೆರೆದುಕೊಳ್ಳುತ್ತವೆ ಎಂದು ಹೇಳಿರುವ ಅವರು ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡಿದ್ದಾರೆ.

Leave A Reply

Your email address will not be published.