ಬಾಲಿವುಡ್ ನನಗೆ ಅಗತ್ಯವಿಲ್ಲ, ತೆಲುಗಲ್ಲಿ ಮಾತ್ರ ನಟಿಸುತ್ತೇನೆ: ನಟ ಮಹೇಶ್ ಬಾಬು ಖಡಕ್ ಉತ್ತರ

Entertainment Featured-Articles News

ಟಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟ ಪ್ರಿನ್ಸ್ ಮಹೇಶ್ ಬಾಬು, ಬಹು ಬೇಡಿಕೆಯ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹೇಶ್ ಬಾಬು ಅವರ ಬೇಡಿಕೆ, ಚಾರ್ಮಿಂಗ್ ಲುಕ್ ಹಾಗೂ ಸ್ಟೈಲ್ ಗಮನಿಸಿ ಅವರು ಬಾಲಿವುಡ್ ಗೆ ಹಾರುತ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಆದರೆ ಸಿನಿಮಾ ಇಂಡಸ್ಟ್ರಿಗೆ ಬಂದು ದಶಕಗಳು ಕಳೆದರೂ ಮಹೇಶ್ ಬಾಬು ಅವರು ತೆಲುಗು ಬಿಟ್ಟು ಅನ್ಯ ಭಾಷೆಯ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿಲ್ಲ. ಆದ್ದರಿಂದಲೇ ಅವರ ಅಭಿಮಾನಿಗಳಿಗೆ ಮಹೇಶ್ ಬಾಬು ಅವರೆಂದರೆ ವಿಶೇಷ ಅಭಿಮಾನ ಖಂಡಿತ ಇದೆ.

ಇನ್ನು ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದ ಮೇಲೆ, ದಕ್ಷಿಣದ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಸಹಾ ಹಿಂದಿಕ್ಕಿ ಸಕ್ಸಸ್ ಪಡೆಯುತ್ತಿದ್ದು, ಬಾಲಿವುಡ್ ಸಿನಿಮಾಗಳು ಸಹಾ ದಕ್ಷಿಣದ ಸಿನಿಮಾಗಳ ಅಬ್ಬರಕ್ಕೆ ತತ್ತರಿಸಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಟ ಮಹೇಶ್ ಬಾಬು ಅವರು ಸಹಾ ಬಾಲಿವುಡ್ ಗೆ ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ. ಮಹೇಶ್ ಬಾಬು ಅವರಿಗೆ ಬಾಲಿವುಡ್ ನಿಂದ ಅವಕಾಶಗಳು ಬರುತ್ತಿವೆ, ಹೆಚ್ಚು ಸಂಭಾವನೆ ಆಫರ್ ಮಾಡಲಾಗಿದೆ ಎನ್ನುವ ಸುದ್ದಿಗಳು ಸಹಾ ಹರಿದಾಡಿವೆ.

ಈ ವಿಚಾರವು ಹರಿದಾಡಿದ ಬೆನ್ನಲ್ಲೇ ಮಾದ್ಯಮ ಪ್ರತಿನಿಧಿಗಳು ಮಹೇಶ್ ಬಾಬು ಅವರ ಬಾಲಿವುಡ್ ಎಂಟ್ರಿ ಬಗ್ಗೆ ಕೇಳಿದಾಗ, ನಟ ಮಹೇಶ್ ಬಾಬು ಅವರು ಖಡಕ್ ಆಗಿ, ಕಡ್ಡಿ ಮುರಿದ ಹಾಗೆ ಉತ್ತರ ನೀಡಿದ್ದಾರೆ. ಹೌದು, ನಟ ಮಹೇಶ್ ಬಾಬು ಅವರು ನೀಡಿರುವ ಉತ್ತರ ಇದೀಗ ದೊಡ್ಡ ಸದ್ದು ಮಾಡಿರುವುದು ಮಾತ್ರವೇ ಅಲ್ಲದೇ ಅಭಿಮಾನಿಗಳು ಕೂಡಾ ಅವರ ಮಾತನ್ನು ಕೇಳಿ ಖುಷಿಯಾಗಿದ್ದಾರೆ, ನಟನ ಉತ್ತರಕ್ಕೆ ಮೆಚ್ಚುಗೆಗಳನ್ನು ಸೂಚಿಸುತ್ತಾ, ಸಂಭ್ರಮಿಸಿದ್ದಾರೆ.

ನಟ ಮಹೇಶ್ ಬಾಬು ಅವರು ತಮ್ಮ ಬಾಲಿವುಡ್ ಎಂಟ್ರಿಯ ಬಗ್ಗೆ ಉತ್ತರ ನೀಡುತ್ತಾ, ಹಿಂದಿ ಸಿನಿಮಾ ಮಾಡೋ ಅಗತ್ಯ ನನಗಿಲ್ಲ. ತೆಲುಗು ಸಿನಿಮಾ ಮಾತ್ರ ಮಾಡುತ್ತೇನೆ. ಅದು ಪ್ರಪಂಚದಾದ್ಯಂತ ಬಿಡುಗಡೆ ಆಗುತ್ತದೆ. ಬಾಲಿವುಡ್ ಗೆ ನಾನ್ಯಾಕೆ ಹೋಗಲಿ ಎಂದು ಖಡಕ್ ಉತ್ತರವನ್ನು ನೀಡಿದ್ದಾರೆ. ಮಹೇಶ್ ಬಾಬು ಅವರ ಈ ಹೇಳಿಕೆ ಈಗ ಸಖತ್ ಸದ್ದು ಮಾಡಿದೆ. ಪ್ರಸ್ತುತ ನಟನ ಸರ್ಕಾರುವಾರಿ ಪಾಠ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ರಾಜಮೌಳಿ ಜೊತೆಗೆ ಹೊಸ ಸಿನಿಮಾದ ಸಿದ್ಧತೆಗಳು ಸಹಾ ಆರಂಭವಾಗಿದೆ.

Leave a Reply

Your email address will not be published. Required fields are marked *