ಬಾಲಿವುಡ್ ನಟ, ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ, ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿಯೊಂದು ವರದಿಯಾಗಿದೆ. ನಲ್ವತ್ತು ವಯಸ್ಸಿನ ನಟ ಸಿದ್ಧಾರ್ಥ್ ಶುಕ್ಲಾ ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಅವರು ನಿಧನರಾದ ವಿಚಾರವನ್ನು ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರು ಎಎನ್ಐ ಗೆ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿರುವ ವಿಚಾರವನ್ನು ದೃಢಪಡಿಸಿದ್ದಾರೆ. ಇಂದು ಮುಂಜಾನೆ ಸಿದ್ಧಾರ್ಥ್ ಶುಕ್ಲಾ ಅವರಿಗೆ ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆ ತಂದರೂ ಸಹಾ ಚಿಕಿತ್ಸೆ ಸಿಗದೇ ಅವರು ನಿಧನರಾಗಿದ್ದಾರೆ ಎನ್ನಲಾಗಿದೆ.
ನಟ ಸಿದ್ಧಾರ್ಥ್ ಶುಕ್ಲಾ ಅವರ ಸಾವು ನಿಜಕ್ಕೂ ಒಂದು ಶಾಕ್ ಎಂದೇ ಹೇಳಬಹುದಾಗಿದೆ. ಇದನ್ನು ನಂಬಲು ಸಹಾ ಅನೇಕರು ಇನ್ನೂ ಸಿದ್ಧರಿಲ್ಲ. ಏಕೆಂದರೆ ಕೆಲವೇ ದಿನಗಳ ಹಿಂದೆ ಸಿದ್ಧಾರ್ಥ್ ಶುಕ್ಲಾ ಬಿಗ್ ಬಾಸ್ ನ ಓಟಿಟಿ ಪ್ಲಾಟ್ ಫಾರಂ ನ ಬಿಗ್ ಬಾಸ್ ಗೆ ಅತಿಥಿಯಾಗಿ ಎಂಟ್ರಿ ನೀಡಿದ್ದರು. ಅಲ್ಲದೇ ನಂಬರ್ ಒನ್ ಡಾನ್ಸ್ ರಿಯಾಲಿಟಿ ಶೋ ಡಾನ್ಸ್ ದೀವಾನೆ ಯಲ್ಲಿ ಕೂಡಾ ಎರಡು ಬಾರಿ ಭಾಗವಹಿಸಿ ಎಲ್ಲರ ಗಮನವನ್ನು ಸೆಳೆದಿದ್ದರು. ಸಿದ್ಧಾರ್ಥ್ ಬಿಗ್ ಬಾಸ್ ನ ಸೀಸನ್ ಹದಿಮೂರರಲ್ಲಿ ತನ್ನದೇ ಹವಾ ಸೃಷ್ಟಿಸಿದ್ದರು. ಹಿಂದಿ ಬಿಗ್ ಬಾಸ್ ಸೀಸನ್ ಹದಿಮೂರು ಎಂದರೆ ಅದು ಸಿದ್ದಾರ್ಥ ಶುಕ್ಲಾ ಸೀಸನ್ ಎನ್ನುವಂತೆ ಆಗಿತ್ತು.
ನಟ ಸಿದ್ಧಾರ್ಥ್ ಶುಕ್ಲಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ಮಾತ್ರ ಸೀರಿಯಲ್ ಗಳು. ಒಂದೆರಡು ರಿಯಾಲಿಟಿ ಶೋ ಗಳನ್ನು ನಿರೂಪಣೆ ಮಾಡಿದ್ದ ಸಿದ್ಧಾರ್ಥ್ ಶುಕ್ಲಾ ತಮ್ಮ ಬಿಂದಾಸ್ ಲೈಫ್ ಸ್ಟೈಲ್ ಹಾಗೂ ಮಾತಿನಿಂದಲೇ ಹೆಚ್ಚು ವಿವಾದಗಳಿಗೂ ಕಾರಣವಾಗಿದ್ದರು. ಅಲ್ಲದೇ ಬಿಗ್ ಬಾಸ್ ಹದಿಮೂರರಲ್ಲಿ ಅವರಿಗೂ ಹಾಗೂ ನಟಿ ರಶ್ಮಿ ದೇಸಾಯಿ ಅವರಿಗೂ ದೊಡ್ಡ ಮಟ್ಟದಲ್ಲಿ ನಡೆದ ಗಲಾಟೆ ಗಳು ಮಾದ್ಯಮಗಳಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಒಟ್ಟಾರೆ ಸಿದ್ದಾರ್ಥ್ ನಿಧನ ಬಾಲಿವುಡ್ ಗೆ ಒಂದು ದೊಡ್ಡ ಶಾಕ್ ಆಗಿದೆ.